ದಾವಣಗೆರೆ: ಮೆಕ್ಕೆಜೋಳ ಮತ್ತು ಭತ್ತ ಖರೀದಿ ಪ್ರಾರಂಭಕ್ಕೆ ಒತ್ತಾಯಿಸಿ ನ.2 ರಂದು ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬುಳ್ಳಾಪುರದ ಹನುಮಂತಪ್ಪ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಂಗಳವಾರ ಬೆಳಗ್ಗೆ 11.30ಕ್ಕೆ ತಹಶೀಲ್ದಾರ್ ಕಚೇರಿಯಿಂದಉಪ ವಿಭಾಗಾಧಿಕಾರಿ ಕಚೇರಿವರೆಗೆ 150-200 ಬೈಕ್‌ಗಳ
ರ್ಯಾಲಿ ನಡೆಸಲಾಗುವುದು. ಜಿಲ್ಲಾಧಿಕಾರಿಗಳು ಬಹಿರಂಗ ಸಭೆ ನಡೆಯುವ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು. ಇಲ್ಲದಿದ್ದಲ್ಲಿ ಉಪ ವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ರೈತರಿಗೆ ಅನುಕೂಲ ಆಗುವಂತೆ ಭತ್ತ ಮತ್ತು ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಒತ್ತಾಯಿಸಿ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಹಂತ ಹಂತದ ಹೋರಾಟಗಳ ನಡೆಸಲಾಗಿದೆ. ಆದರೂ, ಸರ್ಕಾರಗಳು ಖರೀದಿ ಕೇಂದ್ರ ಪ್ರಾರಂಭಿಸುತ್ತಿಲ್ಲ. ನ.15 ರ ಒಳಗಾಗಿ ಖರೀದಿ ಕೇಂದ್ರತೆರೆಯದಿದ್ದಲ್ಲಿ ಜಿಲ್ಲೆಯಾದ್ಯಂತ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು. ಆಗ ನಡೆಯಬಹುದಾದಂತಹ ಅಹಿತಕರ ಘಟನೆಗಳಿಗೆ ಜಿಲ್ಲಾಡಳಿತವೇ ಹೊಣೆ ಎಂದು ತಿಳಿಸಿದರು.
ಮೆಕ್ಕೆಜೋಳ ಪಡಿತರ ಪದಾರ್ಥಗಳ ಪಟ್ಟಿಯಲ್ಲಿ ಇಲ್ಲ ಹಾಗಾಗಿ ಖರೀದಿ ಕೇಂದ್ರ ತೆರೆಯುವುದಕ್ಕೆ ಆಗುವುದಿಲ್ಲಎಂದು ಕೇಂದ್ರ, ರಾಜ್ಯ ಸರ್ಕಾರಗಳು ಹಾರಿಕೆ ಉತ್ತರನೀಡುತ್ತಿವೆ. ಜೂನ್, ಜುಲೈ ನಂತರ ಏಕಾಏಕಿ ಮೆಕ್ಕೆಜೋಳದ ಬೆಲೆ ಹೆಚ್ಚಾಗುತ್ತದೆ. ಆಗ ಮೆಕ್ಕೆಜೋಳ ಪಡಿತರ ಪದಾರ್ಥ ಆಗುತ್ತದೆಯೇ ಎಂಬ ಅನುಮಾನ ರೈತಾಪಿ ವರ್ಗದಲ್ಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಪರವಾಗಿ ಇಲ್ಲ. ಕಾರ್ಪೋರೇಟ್, ಲಾಭಕೋರ ಕಂಪನಿಗಳ ಪರವಾಗಿವೆ ಎಂದು ದೂರಿದರು.
ದಾವಣಗೆರೆ ಸಂಸದರಿಗೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದಲ್ಲಿ ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರಪ್ರಾರಂಭಕ್ಕೆ ಒತ್ತಾಯಿಸಿ ಕೇಂದ್ರಕ್ಕೆ ಪತ್ರ ಬರೆಯಬೇಕು. ರೈತರ ಹಿತ ಕಾಪಾಡಬೇಕು. ಇಲ್ಲವಾದಲ್ಲಿ ರಾಜೀನಾಮೆ ಕೊಟ್ಟು ಮನೆಗೆ ಹೋಗುವುದು ಒಳಿತು. ರೈತರ ಹಿತ ಕಾಪಾಡದ ಸಂಸದರು ನಮಗೆ ಬೇಕಾಗಿಯೇ ಇಲ್ಲ ಎಂದು ತಿಳಿಸಿದರು. ದಾವಣಗೆರೆ ತಾಲೂಕಿನ ಮಾಯಕೊಂಡ, ಅಣಜಿ,ಆನಗೋಡು ಹೋಬಳಿಗಳಲ್ಲಿ ವಿಪರೀತವಾದ ಮಳೆಯಿಂದಇಳುವರಿ ಕಡಿಮೆ ಆಗುತ್ತಿದೆ. ಎಕರೆಗೆ 10-15 ಕ್ವಿಂಟಾಲ್ ಸಹ ಬರದಂತಾಗಿದೆ. ಸಂಬಂಧಿತ ಅಧಿಕಾರಿಗಳು ಕೂಡಲೇ ಸರ್ವೇ ಕಾರ್ಯ ನಡೆಸಿ, ಸೂಕ್ತ ಪರಿಹಾರ ಒದಗಿಸಬೇಕು. ಸರ್ಕಾರ ರೈತರ ಎಲ್ಲ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಸಂಘದ ಅಧ್ಯಕ್ಷ ಈಚಘಟ್ಟದ ಎ.ಆರ್. ಕರಿಬಸಪ್ಪ, ಕೊಗ್ಗನೂರು ಹನುಮಂತಪ್ಪ,, ಬುಳ್ಳಾಪುರದಪರಮೇಶ್, ಎರೇಹಳ್ಳಿ ರೇವಣಸಿದ್ದಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.