ಮೈಸೂರು: ಬೆಳ್ಳಂಬೆಳಗ್ಗೆ ಬುಲೆಟ್ ಬೈಕ್‌ಗಳನ್ನೇರಿದ ಹಲವು ಯುವಕ-ಯುವತಿಯರು ನಗರದಲ್ಲಿ ಬೈಕ್‌ರ್ಯಾಲಿ ನಡೆಸಿ ಸಾರ್ವಜನಿಕರಲ್ಲಿ ಸಂಚಾರ ನಿಯಮಗಳು ಹಾಗೂ ಸುರಕ್ಷಿತ ವಾಹನ ಚಾಲನೆ ಬಗ್ಗೆ ಜಾಗೃತಿ ಮೂಡಿಸಿದರು.
ರ್ಯಾಲಿ ಫಾರ್ ರೆಸ್ಪಾನ್ಸಿಬಲ್ ರೈಡ್ ಹೆಸರಿನಡಿ ಭಾನುವಾರ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಬೈಕ್‌ರ್ಯಾಲಿ ನಡೆಸಿದರು. ನಗರದ ಬುಲೆಟ್ ಕ್ರೂಸೆಡ್ ಮೈಸೂರು ಕ್ಲಬ್ ಸದಸ್ಯರು ನಾನಾ ಘೋಷಣಾ ಫಲಕಗಳೊಂದಿಗೆ ನಗರದೆಲ್ಲೆಡೆ ಬೈಕ್‌ರೈಡ್ ನಡೆಸಿ ಸುರಕ್ಷಿತ ವಾಹನ ಚಾಲನೆ ಬಗ್ಗೆ ಅರಿವು ಮೂಡಿಸಿದರು.
ಮುಂಜಾನೆಯೇ 18 ಬುಲೆಟ್ ಬೈಕ್‌ಗಳನ್ನೇರಿ ಹೊರಟ ಬುಲೆಟ್ ಕ್ರೂಸೆಡ್ ಮೈಸೂರು ಕ್ಲಬ್‌ನ 22ಕ್ಕೂ ಹೆಚ್ಚು ಸದಸ್ಯರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿಕೊಳ್ಳಿ, ಸುರಕ್ಷಿತವಾಗಿ ವಾಹನ ಚಾಲಾಯಿಸಿ ಅಪಘಾತ ನಿಯಂತ್ರಿಸಿ, ಜೀವ ಅಮೂಲ್ಯವಾದ್ದದು, ಬದಕಲು ವಾಹನ ಸವಾರಿ ಮಾಡಿ ಎಂಬ ಸಂದೇಶಗಳ ಬಗ್ಗೆ ಜಾಗೃತಿ ಮೂಡಿಸಿದರು.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾದ ರ್ಯಾಲಿ ಅರಮನೆ ಆವರಣ, ದೇವರಾಜ ಅರಸು ರಸ್ತೆ, ಕುಕ್ಕರಹಳ್ಳಿ ಕೆರೆ ರಸ್ತೆ, ಮಾತೃಮಂಡಳಿ ವೃತ್ತ, ಚೆಲುವಾಂಬ ಉದ್ಯಾನವನ, ಒಂಟಿಕೊಪ್ಪಲು ವೃತ್ತ, ಕಾಳಿದಾಸ ವೃತ್ತ, ಯೋಗನರಸಿಂಹಸ್ವಾಮಿ ದೇವಸ್ಥಾನ, ಐಶ್ವರ್ಯ ಪೆಟ್ರೋಲ್ ಬ್ಯಾಂಕ್ ವೃತ್ತ, ಎಸ್‌ಜೆಸಿಇ ಕ್ಯಾಂಪಸ್ ರಸ್ತೆ, ಬೋಗಾದಿರಸ್ತೆ,
-ವಿಶ್ವಮಾನವ ಜೋಡಿರಸ್ತೆ, ಕುವೆಂಪುನಗರ, ಅಪೋಲೋ ಆಸ್ಪತ್ರೆ, ಬಲ್ಲಾಳ್ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಅಗ್ರಹಾರ ವೃತ್ತ, ಲಲಿತಮಹಲ್ ಹೆಲಿಪ್ಯಾಡ್ ಮೈದಾನ, ಟೆರಿಷಿಯನ್ ಕಾಲೇಜು, ನಜರಬಾದ್ ಮಾರ್ಗಗಳಲ್ಲಿ ಸಾಗಿದ ರ್ಯಾಲಿ ಜೆಕೆ ಮೈದಾನದಲ್ಲಿ ಮುಕ್ತಾಯಗೊಂಡಿತು.
ರ್ಯಾಲಿಯಲ್ಲಿ ಬುಲೆಟ್ ಕ್ರೂಸೆಡ್ ಮೈಸೂರು ಕ್ಲಬ್‌ನ ಗಿರೀಶ್, ಪ್ರಸಾದ್, ರಘುನಂದನ, ಮರಳಿ, ಅರುಣ್, ಸುಮುಖ್, ಅಭಿನವ, ಗಿರೀಶ್ ಮುಂತಾದರಿದ್ದರು.