Advertisement

ಕಾಂಗ್ರೆಸ್‌ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ಬೈಕ್‌ ರ್ಯಾಲಿ

12:41 PM Sep 07, 2017 | |

ಬಸವನಬಾಗೇವಾಡಿ: ರೋಣಿಹಾಳ ಗ್ರಾಪಂ ಅಧ್ಯಕ್ಷ ಹನುಮಂತ ನ್ಯಾಮಗೊಂಡ, ಕೊಲ್ಹಾರ ಪಪಂ ಸದಸ್ಯ ಸಿದ್ದು ಗುಣಕಿ ಅವರ ಮೇಲಿನ ಹಲ್ಲೆ ಖಂಡಿಸಿ ಶಾಸಕ ಶಿವಾನಂದ ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಕೊಲ್ಹಾರದಿಂದ ಬಸವನಬಾಗೇವಾಡಿವರೆಗೆ ಬೈಕ್‌ ರ್ಯಾಲಿ ಮಾಡಿ ಪಟ್ಟಣದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಮಂಗಳವಾರ ರಾತ್ರಿ ತಾಲೂಕಿನ ಕೊಲ್ಹಾರ ಯುಕೆಪಿ ಕ್ರಾಸ್‌ ಬಳಿಯ ಲಾಡ್ಜ್ನಲ್ಲಿ 6 ಜನರ ತಂಡ ಮಾರಕಾಸ್ತ್ರದಿಂದ
ಮಾರಾಣಾಂತಿಕ ಹಲ್ಲೆ ಮಾಡಿತ್ತು. ಸುದ್ದಿ ತಾಲೂಕಿನಾದ್ಯಾಂತ ಹಬ್ಬಿದ ಹಿನ್ನೆಲೆ ಕೊಲ್ಹಾರ ಗ್ರಾಮದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ನಂತರ ಕೊಲ್ಹಾರ, ರೋಣಿಹಾಳ, ಮುಳವಾಡ, ತಳೇವಾಡ, ಕೂಡಗಿ, ಗೊಳಸಂಗಿ, ಮುತ್ತಗಿ ಮಾರ್ಗವಾಗಿ ಬೈಕ್‌ ಹಾಗೂ ಇನ್ನಿತರ ವಾಹನಗಳ ಮೂಲಕ ಬಸವನಬಾಗೇವಾಡಿಯ ಬಸವೇಶ್ವರ ವೃತ್ತದವರೆಗೆ ಘೋಷಣೆ ಕೂಗುತ್ತಾ ಬಂದರು. 

ನಂತರ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಬಸವೇಶ್ವರ ವೃತ್ತದಿಂದ ಮಿನಿ ವಿಧಾನಸೌಧವರೆಗೆ ಪಾದಯಾತ್ರೆ ಮೂಲಕ ತೆರಳಿದರು. ನಂತರ ಶಾಸಕ ಶಿವಾನಂದ ಪಾಟೀಲ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಕೊಲ್ಹಾರ ಬ್ಲಾಕ್‌ ಅಧ್ಯಕ್ಷ ರಫೀಕ್‌ ಪಕಾಲಿ, ಕಲ್ಲು ಸೊನ್ನದ, ಶಿವಾನಂದ ಅಂಗಡಿ, ಸುರೇಶ ಮಣ್ಣೂರ, ಗುರು ಚಲವಾದಿ, ಶಕುಂತಲಾ ಕಿರಸೂರ, ಎ.ಎಂ. ಪಾಟೀಲ ಮಾತನಾಡಿ, ಕೆಲವು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬರಲಿರುವ ಚುನಾವಣೆಯಲ್ಲಿ ಸೊಲಿನ ಭೀತಿಯಿಂದ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಹಲ್ಲೆಗೈದು ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ ಎಂದರು.

ಮತಕ್ಷೇತ್ರದ ಜನ ಶಾಂತಿಯಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ಬಿಜೆಪಿ ಜನರ ಮನಸ್ಸು ಗೆಲ್ಲುವಲ್ಲಿ ವಿಫಲವಾಗಿ ಈಗ ಬಿಹಾರ ರಾಜ್ಯದಲ್ಲಿ ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಮತದಾರ ಪ್ರಭುಗಳಿಗೆ ಪಿಸ್ತೂಲ್‌ ಹಾಗೂ ಮಾರಕಾಸ್ತ್ರ ತೋರಿಸಿ ಗೆಲುವು ಸಾಧಿಸಿದ ಹಾಗೆ ಈ ನಾಡಿನಲ್ಲಿ ಮಾಡುತ್ತಿದ್ದಾರೆ. ಕಳೆದ 10-12 ವರ್ಷಗಳಿಂದ ಈ ರೀತಿ ದಬ್ಟಾಳಿಕೆ ಮಾಡುತ್ತ ಬಂದಿದೆ. ಇನ್ನೂ ಮುಂದೆ ನಡೆಯುವುದಿಲ್ಲಾ. ಬರುವ ಚುನಾವಣೆಯಲ್ಲಿ ಜನರು ತಮಗೆ ಮತದಾನ ಮೂಲಕ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಶಾಸಕ ಶಿವಾನಂದ ಪಾಟೀಲ ಅವರು ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಮಾಡಿದ್ದು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇದನ್ನು ತಡೆಯುವ ಉದ್ದೇಶದಿಂದ ಹಲ್ಲೆ ಮಾಡಿದ್ದಾರೆ. ಕ್ಷೇತ್ರದ ಜನತೆಗೆ ನಿಮ್ಮ ನಿಜವಾದ ಬಣ್ಣ ಈಗ ತಿಳಿದಿದೆ ಎಂದು ಹೇಳಿದರು.

Advertisement

ಹಲ್ಲೆ ಮಾಡಿದ 6 ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸಬೇಕು. ಇಲ್ಲವಾದರೆ ಜಿಲ್ಲಾದ್ಯಾಂತ ಕಾಂಗ್ರೆಸ್‌
ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ  ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಸಿ.ಪಿ. ಪಾಟೀಲ, ತಾನಾಜಿ ನಾಗರಾಳ, ಕಲ್ಲು ಸೊನ್ನದ, ಸಾಹೇಬಗೌಡ ಪಾಟೀಲ, ಶೇಖು ದಳವಾಯಿ, ದಯಾನಂದ ಹಿರೇಮಠ, ಪ್ರೇಮಕುಮಾರ ಮ್ಯಾಗೇರಿ, ಶೇಖರ ಗೊಳಸಂಗಿ, ಪರಶುರಾಮ ಬಳೂತಿ, ತುಂಟಪ್ಪ ಬನಾಗೊಂಡ, ಶಂಕರಗೌಡ ಬಿರಾದಾರಮ ರವಿ ರಾಠೊಡ, ವಿಶ್ವನಾಥ ನಿಡಗುಂದಿ, ಕಸ್ತೂರಿ ಬಿಷ್ಟಗೊಂಡ, ಸಲಿಮ್ಮಾ ಬಾಗವಾನ, ರುಕ್ಮಿಣಿ ರಾಠೊಡ, ಶಾಂತಾಬಾಯಿ ಕುಂಬಾರ, ಕಮಲಾ ಮಾಕಾಳಿ, ಚಿಮ್ಮಲಗಿ, ವಂದಾಲ, ಸಿದ್ದನಾಥ, ರೋಳ್ಳಿ, ಮಸಬಿನಾಳ, ಮಲಘಾಣ, ಬಳೂತಿ, ಗೇಣ್ಣೂರ, ಮಟ್ಟಿಹಾಳ, ಉಕ್ಕಲಿ, ಮನಗೂಳಿ, ಯರನಾಳ, ನಿಡಗುಂದಿ, ಮಣ್ಣೂರ, ಕೊಲ್ಹಾರ, ರೋಣಿಹಾಳ, ಮುಳವಾಡ, ತಳೇವಾಡ, ಕೂಡಗಿ, ಗೊಳಸಂಗಿ, ಮುತ್ತಗಿಯ ಸಾವಿರಾರು ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next