Advertisement

ಬೈಕ್‌ ತಡವಾಗಿ ಹಿಂದಿರುಗಿಸಿದ್ದಕ್ಕಾಗಿ ಸ್ನೇಹಿತನಿಗೆ ಚೂರಿ ಇರಿತ: ಯುವಕ ಸಾವು

08:09 PM Sep 22, 2022 | Team Udayavani |

ಕನಕಗಿರಿ: ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದು ಎರಡು ದಿನಗಳ ಹಿಂದೆ  ಚಾಕು ಇರಿತಕ್ಕೆ ಒಳಪಟ್ಟಿದ್ದ ರವಿ (40)  ಸಾವನ್ನಪ್ಪಿದ ಘಟನೆ ಪಟ್ಟಣದಲ್ಲಿ ಗುರುವಾರ ಸಂಜೆ ನಡೆದಿದೆ.

Advertisement

ಇದನ್ನೂ ಓದಿ:   ಮಣಿಪಾಲದಲ್ಲಿ ಗಾಂಜಾ ಸೇವಿಸುತ್ತಿದ್ದ ನಾಲ್ವರು ವಶಕ್ಕೆ

ರವಿ ಹಾಗೂ ಮುತ್ತುರಾಜ ಎಂಬ ಇಬ್ಬರು ಯುವಕರು ಆತ್ಮೀಯ ಗೆಳೆಯರಾಗಿದ್ದರು. ಎರಡು ದಿನದ ಹಿಂದೆ ರವಿಯ ಬೈಕ್‌ನ್ನು ಗೆಳೆಯ ಮುತ್ತುರಾಜ ತೆಗೆದುಕೊಂಡು ಹೋಗಿ ತಡವಾಗಿ ಬಂದಿದ್ದ. ರವಿಯು  ಬೈಕನ್ನು ತಡವಾಗಿ ಏಕೆ ತಂದಿರುವೆ’ ಎಂದು ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ಯುವಕ ಮುತ್ತುರಾಜನಿಗೆ ಚಾಕುವಿನಿಂದ ತನ್ನ ಗೆಳೆಯನಿಗೆ  ಇರಿದಿದ್ದ.

ಈ  ಸುದ್ದಿ ತಿಳಿದ ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದರು. ಮತ್ತೆ ಹೆಚ್ಚುವರಿ ಚಿಕಿತ್ಸೆ ಕೊಡಿಸಲು  ವೈದ್ಯರು  ಧಾರವಾಡ ಎಸ್ ಡಿ ಎಂ ಸಿ ಯಲ್ಲಿ ಚಿಕಿತ್ಸೆ ನೀಡುವಂತೆ ಹೇಳಿದ್ದರು. ಈ ವೇಳೆ ಯುವಕ ಚಿಕಿತ್ಸೆ ಫಲಕಾರಿಯಾಗದೆ  ಸಾವನ್ನಪ್ಪಿದ್ದಾನೆ.

ಆರೋಪಿ ಮುತ್ತುರಾಜನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next