ಮೂಡುಬಿದಿರೆ: ಬೋರ್ ವೆಲ್ ಲಾರಿಗೆ ಬೈಕ್ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮೂಡುಬಿದಿರೆ ಸಮೀಪದ ತೆಂಕಮಿಜಾರಿನಲ್ಲಿ ರವಿವಾರ ಬೆಳಿಗ್ಗೆ ನಡೆದಿದೆ.
ಮೃತಪಟ್ಟ ಬೈಕ್ ಸವಾರನನ್ನು ಮುಚ್ಚೂರು ಕಾನ ನಿವಾಸಿ ಚಂದ್ರಶೇಖರ (20 ವ) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಕಿಡಿಗೇಡಿಗಳಿಂದ ಗ್ಯಾರೇಜ್‌ಗೆ ಬೆಂಕಿ; ಸುಟ್ಟು ಕರಕಲಾಯ್ತು ಏಳು ಬೈಕ್‌ಗಳು
ಚಂಪಾ ಷಷ್ಠಿಯ ಪ್ರಯುಕ್ತ ಕುಡುಪು ದೇವಸ್ಥಾನಕ್ಕೆ ಭೇಟಿ ನೀಡಿ ಚಂದ್ರಶೇಖರ ಮನೆಗೆ ಮರಳುತ್ತಿದ್ದರು. ಈ ವೇಳೆ ತೆಂಕಮಿಜಾರು ಬಳಿ ತಿರುವಿನಲ್ಲಿ ಬೋರ್ ವೆಲ್ ಲಾರಿ – ಬೈಕ್ ನಡುವೆ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಚಂದ್ರಶೇಖರ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.