Advertisement

ಜಪ್ಪಿನಗೊಗರು: ಬೈಕ್‌ ಢಿಕ್ಕಿ ; ಪಾದಚಾರಿ ಸಾವು

09:30 AM Aug 29, 2017 | Harsha Rao |

ಮಂಗಳೂರು: ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರವಿವಾರ ತಡರಾತ್ರಿ ಮೋಟಾರ್‌ ಬೈಕ್‌ ಢಿಕ್ಕಿ ಹೊಡೆದು 35 – 40 ವರ್ಷದ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದಾರೆ.

Advertisement

ಮೃತ ವ್ಯಕ್ತಿ ಉದ್ದ ತೋಳಿನ ಗೆರೆಯ ಕ್ರಿಮ್‌ ಮಾಸಿದ ಬಿಳಿ ಬಣ್ಣದ ಅಂಗಿ ಮತ್ತು ನೀಲಿ  ಬಣ್ಣದ ಪ್ಯಾಂಟ್‌ ಧರಿಸಿರುತ್ತಾರೆ. ಸಾಧಾರಣ ಮೈಕಟ್ಟು, ಎಣ್ಣೆ ಕಪ್ಪು ಮೈಬಣ್ಣ, ಕೋಲು ಮುಖ ಹೊಂದಿರುತ್ತಾರೆ. ಮೃತ ದೇಹವನ್ನು ವೆನಾÉಕ್‌ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ವಾರಸುದಾರರಿದ್ದರೆ ಕಂಕನಾಡಿ ನಗರ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

ಅಪಘಾತದಲ್ಲಿ ಬೈಕ್‌ ಸವಾರ ಕಡಬ ಮರ್ದಾಳದ ಸಿರಿಲ್‌ (21) ಅವರ ಮುಖ ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಾಗಿದ್ದು, ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿರಿಲ್‌ ಅವರು ಮಂಗಳೂರಿನ ಕ್ಯಾಟರಿಂಗ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ತೊಕ್ಕೊಟ್ಟಿನಲ್ಲಿರುವ ಅಕ್ಕನ ಮನೆಯಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ರವಿವಾರ ರಾತ್ರಿ ನಗರದ ಬಿಜೈಯಲ್ಲಿ ಕ್ಯಾಟರಿಂಗ್‌ ಕೆಲಸ ಮುಗಿಸಿ ಬೈಕ್‌ನಲ್ಲಿ ತೊಕ್ಕೊಟ್ಟು ಕಡೆಗೆ ಹೋಗುತ್ತಿದ್ದಾಗ ಜಪ್ಪಿನಮೊಗರು ಈಸ್ಟ್‌ ವೆಸ್ಟ್‌ ನರ್ಸರಿ ಎದುರು ಅಪಘಾತ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next