Advertisement

ಉಡುಪಿಯಲ್ಲಿ ಟೆಂಪೋಗೆ ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

08:36 PM Sep 13, 2022 | Team Udayavani |

ಉಡುಪಿ: ಟೆಂಪೋಗೆ ಬೈಕ್‌ ಢಿಕ್ಕಿ ಹೊಡೆದು ಸವಾರ ಗಾಯಗೊಂಡ ಘಟನೆ ನಡೆದಿದೆ.

Advertisement

ಬ್ರಹ್ಮಾವರದ ಕಡೆಗೆ ಕರಾವಳಿ ಫ್ಲೈಓವರ್‌ ಮೂಲಕ ತೆರಳುತ್ತಿರುವ ಟೆಂಪೋಗೆ ಕರಾವಳಿ ಫ್ಲೈ ಓವರ್‌ನಿಂದ ಸರ್ವಿಸ್‌ ರಸ್ತೆ ಸೇರುವ ರಾ.ಹೆ.66ರನ್ನು ತಲುಪುವಾಗ ಹಿಂದುಗಡೆಯಿಂದ ಅಂಬಲಪಾಡಿ ಕಡೆಯಿಂದ ಸಂತೆಕಟ್ಟೆಕಡೆಗೆ ತೆರಳುತ್ತಿದ್ದ ಬೈಕ್‌ ಸವಾರ ರಕ್ಷಿತ್‌ ತನ್ನ ಅತೀ ವೇಗದಿಂದ ಬಂದು ಟೆಂಪೋಗೆ ಹಿಂದುಗಡೆಯಿಂದ ಢಿಕ್ಕಿ ಹೊಡೆದಿದ್ದಾನೆ.

ಢಿಕ್ಕಿಯ ಪರಿಣಾಮ ಆತ ಬೈಕ್‌ ಸಹಿತ ರಸ್ತೆಗೆ ಬಿದ್ದು, ಎರಡೂ ಕೈಗಳ ಮೂಳೆ ಮುರಿತ ಉಂಟಾಗಿದೆ. ಉಡುಪಿ ಹೈಟೆಕ್‌ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next