Advertisement
ಅವರು ರಾ.ಹೆ. ಮಧ್ಯೆ ನೀರು ಹರಿಯುವ ತೋಡಿನಲ್ಲಿ ಬೈಕ್ ಚಲಾಯಿಸಿ ಉಡುಪಿ ಕಡೆ ತೆರಳುತ್ತಿದ್ದಾಗ ಬ್ರಹ್ಮಾವರ ಕಡೆಯಿಂದ ಬಂದ ಇನ್ನೊಂದು ಬೈಕ್ ಢಿಕ್ಕಿ ಹೊಡೆಯಿತು. ತೀವ್ರ ಗಾಯಗೊಂಡ ಸತೀಶ್ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನೊಂದು ಬೈಕ್‌ನ ಸವಾರ ಶಾಶ್ವತ್ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಬಸ್ರೂರು – ಗುಲ್ವಾಡಿ ರಸ್ತೆಯ ತಿರುವಿನಿಂದ ಕೂಡಿದ ರಸ್ತೆಯಲ್ಲಿ ಬೈಕ್‌ಗೆ ರಾಘವೇಂದ್ರ ಅವರ ಕಾರು ಢಿಕ್ಕಿಯಾಗಿ ಬೈಕ್ ಸವಾರ ಜಯರಾಮ ಗಾಯಗೊಂಡ ಘಟನೆ ಮೇ 2ರ ರಾತ್ರಿ 7.15ರ ಸುಮಾರಿಗೆ ಸಂಭವಿಸಿದೆ. ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಲಾ ಬಸ್ ಢಿಕ್ಕಿ; ಪಾದಚಾರಿಗೆ ಗಾಯ
ಕುಂದಾಪುರ: ಇಲ್ಲಿನ ಹಳೆ ಬಸ್ ನಿಲ್ದಾಣ ಬಳಿಯ ಮುಖ್ಯ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರಮೇಶ್ (63) ಅವರಿಗೆ ಮೇ 2ರ ಸಂಜೆ 4.30ಕ್ಕೆ ಶಾಲಾ ಬಸ್ ಢಿಕ್ಕಿಯಾಗಿದೆ. ಚಾಲಕ ಬಸ್ಸನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ. ರಮೇಶ್ ಅವರ ಮೈಕೈಗೆ ಗಾಯವಾಗಿದ್ದು, ಬಲ ಭುಜದ ಮೂಳೆ ಮುರಿತಕ್ಕೊಳಗಾಗಿದೆ. ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
ಕೋಟ: ಬಿಲ್ಲಾಡಿ ಗ್ರಾಮದ ನಿವಾಸಿ ಶ್ರೀನಿವಾಸ (38) ಕುಡಿತದ ಚಟ ಹೊಂದಿದ್ದು, ಇದೇ ಕಾರಣಕ್ಕೆ ಮಾನಸಿಕವಾಗಿ ನೊಂದು ಮೇ 3ರಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement