Advertisement

ಓವರ್ ಟೇಕ್ ಮಾಡೋವಾಗ ಅಪಘಾತ : ಮಹಿಳೆ ಸಾವು

05:47 PM Aug 16, 2021 | Team Udayavani |

ಘಟಪ್ರಭಾ : ಬೈಕ್ ಮತ್ತು ಗ್ಯಾಸ್ ಸಿಲಿಂಡರ್ ಸಾಗಣೆಯ ವಾಹನದ ಮಧ್ಯ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಮಹಿಳೆ ಮೃತಪಟ್ಟು, ಬೈಕ್ ಸವಾರನಿಗೆ ಗಂಭೀರ ಗಾಯಗಳಾದ ಘಟನೆ ಸಂಗನಕೇರಿ ಹತ್ತಿರ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

Advertisement

ಹಿಡಕಲ್ ದಿಂದ ಗೋಕಾಕ ಕಡೆಗೆ ಬೈಕ್ ಮೇಲೆ ತಂದೆ ಮತ್ತು ಮಗಳು ಹೋಗುತ್ತಿರುವಾಗ ಸಿಲಿಂಡರ್ ತುಂಬಿದ ವಾಹನ ಓವರ್ ಟಕ್ ಮಾಡುವ ವೇಳೆ ಬೈಕ್ ಹ್ಯಾಂಡಲಿಗೆ ತಾಗಿದ ಪರಿಣಾಮ ಸವಾರರು   ಕೆಳಗೆ ಬಿದ್ದುದ್ದರಿಂದ ಗಂಭೀರವಾದ ಗಾಯಗಳಾಗಿವೆ. ಗಾಯಾಳುಗಳನ್ನು ಗೋಕಾಕದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಮಹಿಳೆ  ಕೊನೆಯುಸಿರೆಳಿದಿದ್ದಾಳೆ .

ಅಪಘಾತದಲ್ಲಿ ಶಾಮಲಾ ಸುರೇಶ ಶಿವಾಪೂರ ಸಾವನ್ನಪ್ಪಿದ ದುರ್ದೈವಿ. ಬೈಕ್ ಸವಾರರಾದ ಸಿದ್ದಪ್ಪ ಪುಂಡಲೀಕ ಮನ್ನಿಕೇರಿ ಗಾಯಗಳಾಗಿರುವುದಾಗಿ ವರದಿಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.

ಘಟನಾ ಸ್ದಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ನೀಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next