ಉಪ್ಪುಂದ: ಗ್ರಾಮೀಣ ಭಾಗದಲ್ಲಿ ಸಂಗೀತ ಹಾಗೂ ಯಕ್ಷಗಾನದ ಸಂಪ್ರದಾಯಬದ್ಧವಾದ ಕಲೆಯನ್ನು ಉಳಿಸುವುದರೊಂದಿಗೆ ಜ್ಞಾನವನ್ನು ಬೆಳಗಿಸುತ್ತದೆ. ಸ್ಥಳೀಯ ಸಂಘಟನೆಯು ಕಳೆದ ಕೆಲವು ದಶಕಗಳಿಂದ ಆಚರಿಸುತ್ತಾ ಬಂದಿರುವ ಜ್ಞಾನಯಜ್ಞವು ಕಲಾ ಉಳಿಯು ವಿಕೆಯಲ್ಲಿ ತನ್ನದೇ ಕೊಡುಗೆಯನ್ನು ನೀಡಿದೆ. ಯುವ ಪ್ರತಿಭೆಗಳ ಪ್ರೋತ್ಸಾಹ ಹಾಗೂ ಮಹಾದೇವ ಪ್ರಶಸ್ತಿ ಹಂಚುವಿಕೆ ಕಾರ್ಯ ಶ್ಲಾಘನೀಯ ಎಂದು ಸರಿಗಮ ಸಂಗೀತ ಶಾಲೆ ಪರ್ಕಳ ಉಡುಪಿ ಇದರ ನಿರ್ದೇಶಕ ವಿದುಷಿ ಉಮಾ ಉದಯಶಂಕರ ಹೇಳಿದರು.
ಬಿಜೂರು ಮಕ್ಕಿ ದೇವಸ್ಥಾನದ ಸಂಸ್ಕೃ ತವಿದ್ಯಾಪೀಠದಲ್ಲಿ ಮಹಾದೇವ ಸಾಂಸ್ಕೃತಿಕ ಪ್ರತಿಷ್ಠಾನಾ ಮತ್ತು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಮಕ್ಕಿ ದೇವಸ್ಥಾನ, ಬಿಜೂರು ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಒಕ್ಕೂಟ, ಖಂಬದಕೋಣೆ ವಲಯ ಇದರ ಜಂಟಿ ಆಶ್ರಯದಲ್ಲಿ ಮಹಾದೇವ ರಂಗ ಮಂದಿರದಲ್ಲಿ ಸ್ವರರಾಗ ಸುಧಾ ಸ್ವರಾಂಜಲಿಯ ಗಾನ ವೈಭವ ಯಕ್ಷೋತ್ಸವ 2019 ಶ್ರೀ ಮಹಾದೇವ ಪ್ರಶಸ್ತಿ ವಿತರಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭರತನಾಟ್ಯ ಕಲಾವಿದೆ ವಿಧೂಷಿ ಉಡುಪಿ ಪ್ರತಿಭಾ ಎಮ್.ಎಲ್. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಡಾ| ಗುರುರಾಜ್ ಭಟ್, ಬಿಜೂರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಬಿ. ಇದರ ಅಧ್ಯಕ್ಷ ಗಣಪತಿ ಭಟ್, ಮಹಾಲಿಂಗೇಶ್ವರ ವಿದ್ಯಾ ಪೀಠದ ಅಧ್ಯಕ್ಷ ರಾಜೀವ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಟನೆಯ ರಾಘವೇಂದ್ರ, ಉಮೇಶ ದೇವಾಡಿಗ, ಬಿಜೂರು ಬಿ. ಒಕ್ಕೂಟದ ಸೇವಾ ಪ್ರತಿನಿಧಿ ಸಂತೋಷ ಗಾಣಿಗ, ರಾಷ್ಟ್ರೀಯ ಚೆಸ್ ತರಬೇತುದಾರ ಬಾಬು ಪೂಜಾರಿ ಉಪಸ್ಥಿತರಿದ್ದರು.
ವೈದ್ಯಕೀಯ ಕ್ಷೇತ್ರದ ಡಾ| ಬಾಲಚಂದ್ರ ಭಟ್, ರಾಜಶೇಖರ ಹೆಬ್ಟಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ, ಶಿಕ್ಷಕಿ ಗೌರಿ ದೇವಾಡಿಗ, ಶಿವಕುಮಾರ್ ಸ್ವಾಮೀಜಿ ವೇದ ಸಂಸ್ಕೃತ ಸಂಸ್ಥಾನ ತುಮಕೂರು, ಮಹಾಲಕ್ಷ್ಮೀ ಶಿಕ್ಷಕಿ ಮಹಾಲಿಂಗೇಶ್ವರ ವಿದ್ಯಾಪೀಠಂ, ಕ್ರೀಡಾಪಟು ದೀಪಿಕಾ ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.
2018ನೇ ಸಾಲಿನ ಮಹಾದೇವ ಪ್ರಶಸ್ತಿ ವಿತರಿಸಲಾಗಿದ್ದು ರೋಹನ್ ರಾವ್. ಜೆ. ಎಚ್. ಹೋಸ್ಕೋಟೆ, ಪಿಯುಸಿಯಲ್ಲಿ ರಾಜ್ಯಕ್ಕೆ 5ನೇ ರ್‍ಯಾಂಕ್ ವಿಜೇತ. ಸಮನ್ವಿ ಕರ್ನಾಟಕ ಸಂಗೀತ ಸಾಧಕಿ, ಯಶಸ್ವಿ ಚೆಸ್ ಕ್ರೀಡಾ ಪ್ರತಿಭೆ, ರಾಷ್ಟ್ರಮಟ್ಟದ ಕ್ರೀಡಾಪಟು ಜ್ಯೋತಿಕಾ ಇವರನ್ನು ಸಮ್ಮಾನಿಸಲಾಯಿತು.
ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವತಾ ಸುಬ್ರಹ್ಮಣ್ಯ ಧಾರೇಶ್ವರ, ಮಧೂರು ಪಿ. ಬಾಲ ಸುಬ್ರಹ್ಮ್ಮಣ್ಯಂ ಸಂಗೀತ ಗುರುಗಳು, ಯಕ್ಷಗಾನ ನಿರ್ದೇಶಕ ಪ್ರಶಾಂತ ಮಯ್ಯ ದಾರಿಮಕ್ಕಿ ಇವರಿಗೆ ಗುರುವಂದನೆ ಸಲ್ಲಿಸಲಾಯಿತು.ಕೊಲ್ಲೂರು ಶ್ರೀ ಮುಕಾಂಬಿಕಾ ಫ್ರೌಢಶಾಲೆ ಮುಖ್ಯ ಶಿಕ್ಷಕ ನಾಗರಾಜ ಭಟ್ ಪ್ರಾಸ್ತಾವನೆಗೈದರು. ಸರೋಜ ದೇವಾಡಿಗ, ಪ್ರಭಾಕರ ಆಚಾರ್ಯ ನಿರೂಪಿಸಿದರು. ವೇದಮೂರ್ತಿ ತಿರುಮಲೇಶ ಭಟ್ ವಂದಿಸಿದರು.