Advertisement
ಉತ್ತರಪ್ರದೇಶ ಹಾಗೂ ಬಿಹಾರದಲ್ಲಿ ವರುಣನ ಆರ್ಭಟಕ್ಕೆ ಸಾವನ್ನಪ್ಪಿದವರ ಸಂಖ್ಯೆ 115ಕ್ಕೆ ಏರಿಕೆಯಾಗಿದೆ. ಪಾಟ್ನದಲ್ಲಿ ಈವರೆಗೆ 26 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
Related Articles
Advertisement
ಭಾರೀ ಮಳೆಯಿಂದಾಗಿ ರೈಲ್ವೆ ಹಳಿ ಕೊಚ್ಚಿಕೊಂಡು ಹೋಗಿದೆ, ಸೇತುವೆಗಳು ಕಡಿದು ಹೋಗಿ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಬಿಹಾರದಲ್ಲಿ ಹಲವು ರೈಲು ಸಂಚಾರ ರದ್ದುಗೊಳಿಸಲಾಗಿದೆ. ಬಸ್ ಸಂಚಾರವೂ ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಕಳೆದ ಗುರುವಾರದಿಂದ ಈವರೆಗೆ ಭಾರೀ ಮಳೆಗೆ 87 ಜನರು ಸಾವನ್ನಪ್ಪಿದ್ದಾರೆ. ಜನರಿಗೆ ಸೂಕ್ತ ನೆರವು ಒದಗಿಸಿಕೊಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
1960ರ ಬಳಿಕ ಇದೇ ಮೊದಲುನಾಲ್ಕು ತಿಂಗಳ ಮುಂಗಾರು ಮಳೆಗೆ ದೇಶದಲ್ಲಿ ಸೋಮವಾರ ಅಧಿಕೃತ ವಿದಾಯ ಹೇಳಲಿದೆ. ಆದರೆ ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಆ ರೀತಿಯಾಗಲು ಸಾಧ್ಯವಿಲ್ಲ. ಅದು ಇನ್ನೂ ಕೆಲ ದಿನಗಳವರೆಗೆ ಮುಂದುವರಿಯಲಿದೆ. 1960ರ ಬಳಿಕ ಇದೇ ಮೊದಲ ಬಾರಿಗೆ ಮುಂಗಾರು ಅತ್ಯಂತ ವಿಳಂಬವಾಗಿ ಮುಕ್ತಾಯವಾಗಲಿದೆ ಎಂದಿದ್ದಾರೆ. ಅವರು. ಕೊನೆಯ ಹಂತವಾಗಿ ರಾಜ ಸ್ಥಾನದ ಗಂಗಾನಗರ್‌ಗೆ ಮುಂಗಾರು ಪ್ರವೇಶ ಮಾಡಲಿದೆ. ಬಿಹಾರ, ಉತ್ತರ ಪ್ರದೇಶಗಳಲ್ಲಿ ಅದಿನ್ನೂ ಸಕ್ರಿಯವಾಗಿದೆ. ವಾಯುಭಾರ ಕುಸಿತದಿಂದ ಉಂಟಾದ ಈ ಮಳೆ ಅ.5ರ ವರೆಗೆ ಮುಂದುವರಿಯಲಿದೆ ಎಂದಿದ್ದಾರೆ ಮಹಾಪಾತ್ರ.