Advertisement

ಜ.7ರಿಂದ ಬಿಹಾರದಲ್ಲಿ ಜಾತಿ ಗಣತಿ; ನಿತೀಶ್‌ ಕುಮಾರ್‌ ಸರ್ಕಾರದ ಮಹತ್ವದ ನಿರ್ಧಾರ

08:46 PM Dec 28, 2022 | Team Udayavani |

ಪಾಟ್ನಾ: ಜಾತಿ ಗಣತಿ ನಡೆಸಬೇಕೆಂದು ಒತ್ತಾಯಿಸುತ್ತಾ ಬಂದಿರುವ ಬಿಹಾರ್‌ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ತಮ್ಮ ರಾಜ್ಯದಲ್ಲಿ ಜಾತಿ ಗಣತಿ ನಡೆಸಲು ಮುಂದಾಗಿದ್ದಾರೆ. ಜ.7ರಿಂದ ಜಾತಿ ಗಣತಿ ಆರಂಭಿಸಲು ಬಿಹಾರ ಸರ್ಕಾರ ಸಕಲ ತಯಾರಿ ನಡೆಸಿದೆ.

Advertisement

ಕರ್ನಾಟಕದಲ್ಲೂ ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಾತಿ ಗಣತಿ ನಡೆಸಲಾಗಿತ್ತು. ಆದರೆ ಅನೇಕ ಕಾರಣಗಳಿಂದ ಅದರ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಬಿಹಾರದಲ್ಲಿ ಪಂಚಾಯತಿಯಿಂದ ಜಿಲ್ಲಾ ಮಟ್ಟದವರೆಗೆ ಎಂಟು ಹಂತದ ಸಮೀಕ್ಷೆಯ ಭಾಗವಾಗಿ ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಪ್ರತಿ ಕುಟುಂಬದ ಡೇಟಾವನ್ನು ಡಿಜಿಟಲ್‌ ಮೂಲಕ ಸಂಗ್ರಹಿಸಲು ಸರ್ಕಾರ ಯೋಜಿಸಿದೆ.

ಗಣತಿ ಪೂರ್ಣವಾಗಲು 2-3 ತಿಂಗಳು ಬೇಕಾಗಬಹುದು. ಜನಗಣತಿಗಾಗಿ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಜೀವಿಕಾ ಕಾರ್ಯಕರ್ತರ ಆಯ್ಕೆಯ ಜವಾಬ್ದಾರಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಆವರಿಗೆ ವಹಿಸಲಾಗಿದೆ. ಅವರಿಗೆ ಸೂಕ್ತ ತರಬೇತಿ ನೀಡಲಾಗುದು. ಆ್ಯಪ್‌ ಮೂಲಕ ಕುಟುಂಬದ ವಿಳಾಸ, ಜಾತಿ, ಕುಟುಂಬದ ಸದಸ್ಯರ ಸಂಖ್ಯೆ, ಉದ್ಯೋಗ, ವಾರ್ಷಿಕ ಆದಾಯ ಸೇರಿದಂತೆ ಇತರೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಈ ಮಾಹಿತಿಯನ್ನು ಗೌಪ್ಯವಾಗಿಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next