Advertisement

ಶೇಕಡಾ 50ರಷ್ಟು ಹಾಜರಾತಿಯೊಂದಿಗೆ ಬಿಹಾರದಲ್ಲಿ ಶಾಲಾ ಕಾಲೇಜುಗಳು ಪುನರಾರಂಭ : ಸಿಎಂ

03:17 PM Jul 05, 2021 | Team Udayavani |

ನವ ದೆಹಲಿ : ಕೋವಿಡ್ ಸೋಂಕು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳನ್ನು ಹಂತ ಹಂತವಾಗಿ ಆರಂಭಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ.

Advertisement

ಶೇಕಡಾ 50 ರಷ್ಟು ವಿದ್ಯಾರ್ಥಿಗಳ ಹಾಜರಾತಿಯೊಂದಿಗೆ ಶಾಲಾ, ಕಾಲೇಜುಗಳನ್ನು ಆರಂಭಿಸಲು ಮುಂದಾಗಿದ್ದು, ಶೀಘ್ರದಲ್ಲಿಯೇ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಉಪನ್ಯಾಸಕರಿಗೆ ಲಸಿಕೆಯನ್ನು ನೀಡುವುದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಘೋಷಣೆ ಮಾಡಿದೆ.

ಇದನ್ನೂ ಓದಿ : ಧಾರಾಕಾರ ಮಳೆಗೆ ಕುಸಿದ ಇಟ್ಟಿಗೆ ಫ್ಯಾಕ್ಟರಿಯ ಗೋಡೆ: ಓರ್ವ ಸಾವು, ಮೂವರಗೆ ಗಾಯ

ಶಾಲೆಗಳು ಮತ್ತು ಕಾಲೇಜುಗಳು ಮಾತ್ರವಲ್ಲದೇ ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ತರಬೇತಿ ಸಂಸ್ಥೆಗಳು ಸಹ ಶೇಕಡಾ 50 ರಷ್ಟು ಹಾಜರಾತಿಯೊಂದಿಗೆ ಮತ್ತೆ ತೆರೆಯಲಿವೆ.

ಕೋವಿಡ್ ಪ್ರಕರಣಗಳಲ್ಲಿ ಅಭೂತಪೂರ್ವ ಏರಿಕೆಯಿಂದಾಗಿ, ಬಿಹಾರ ಸರ್ಕಾರವು ಮೇ 1 ರಿಂದ ಮೇ 31 ರವರೆಗೆ ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಬೇಸಿಗೆ ರಜೆ ಘೋಷಿಸಿತು. ಇದಕ್ಕೂ ಮೊದಲು, ಬೇಸಿಗೆ ರಜೆಯನ್ನು ಜೂನ್ 1 ರಿಂದ ಜೂನ್ 30 ರವರೆಗೆ ನಿಗದಿಪಡಿಸಲಾಗಿತ್ತು.

Advertisement

ಇನ್ನು,ಕೋವಿಡ್ 19 ಪರಿಸ್ಥಿತಿಯಿಂದಾಗಿ ಹಲವಾರು ರಾಜ್ಯಗಳು ಶಾಲಾ, ಕಾಲೇಜುಗಳನ್ನು ಮುಚ್ಚಲ್ಪಟ್ಟಿದ್ದವು. ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ಹಾಗೂ ಪಿಯುಸಿ ಪರೀಕ್ಷೆಗಳನ್ನು ಕೆಲವು ರಾಜ್ಯಗಳು ರದ್ದುಗೊಳಿಸಿದ್ದರೇ, ಕೆಲವು ರಾಜ್ಯಗಳು ಮುಂದೂಡಲ್ಪಟ್ಟಿದ್ದವು, ಆದಾಗ್ಯೂ ಬಿಹಾರ್ ನಲ್ಲಿ ಕಳೆದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಪರೀಕ್ಷೆಗಳನ್ನು ಮಾಡಲಾಗಿದೆ ಹಾಗೂ ಈಗಾಗಲೇ ಪರಿಕ್ಷಾ ಫಲಿತಾಂಶಗಳನ್ನೂ ಕೂಡ ನೀಡಲಾಗಿದೆ ಎನ್ನುವುದು ವಿಶೇಷ.

ಇದನ್ನೂ ಓದಿ : ನಾಯಕತ್ವ ಬದಲಾವಣೆ ಹಾದಿ ಬೀದಿಯ ಚರ್ಚೆ ವಿಷಯವಲ್ಲ: ಯತ್ನಾಳ್ ಗೆ ಕಟೀಲ್ ತಿರುಗೇಟು

Advertisement

Udayavani is now on Telegram. Click here to join our channel and stay updated with the latest news.

Next