Advertisement

ಬಿಹಾರ NDA ಸೀಟು ಹಂಚಿಕೆ: BJPಗೆ 18, ಜೆಡಿಯುಗೆ 17, ಎಲ್‌ಜೆಪಿಗೆ 5

10:33 AM Dec 22, 2018 | Team Udayavani |

ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಗಾಗಿ ಬಿಹಾರದಲ್ಲಿ ಎನ್‌ಡಿಎ ಸೀಟು ಹಂಚಿಕೆ ಅಂತಿಮಗೊಂಡಿದೆ. ಇಂದು ಶನಿವಾರ ಸಂಜೆ ನಡೆಸಲಾಗುವ ಪತ್ರಿಕಾ ಗೋಷ್ಠಿಯಲ್ಲಿ ಇದನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಎನ್‌ಡಿಎ ಮೂಲಗಳು ತಿಳಿಸಿವೆ.

Advertisement

ಈಗಾಗಲೇ ಅಂತಿಮಗೊಂಡಿರುವ ವ ಸೀಟು ಹಂಚಿಕೆ ಪ್ರಕಾರ ಬಿಹಾರದಲ್ಲಿ ಭಾರತೀಯ ಜನತಾ ಪಕ್ಷ 18 ಲೋಕಸಭಾ ಸೀಟುಗಳನ್ನು ಪಡೆಯಲಿದೆ; ಜನತಾ ದಳ ಯುನೈಟೆಡ್‌ (ಜೆಡಿಯು) ಗೆ 17 ಸೀಟುಗಳು ಮತ್ತು ಲೋಕಜನಶಕ್ತಿ ಪಕ್ಷಕ್ಕೆ (ಎಲ್‌ ಜೆಪಿ) 5 ಸೀಟುಗಳು ಸಿಗಲಿವೆ. 

ಎಲ್‌ಜೆಪಿ ಮುಖ್ಯಸ್ಥ ಮತ್ತು ಕೇಂದ್ರ ಸಚಿವರಾಗಿರುವ ರಾಮ್‌ ವಿಲಾಸ್‌ ಪಾಸ್ವಾನ್‌, ಅವರ ಪುತ್ರ ಚಿರಾಗ್‌ ಪಾಸ್ವಾನ್‌ ಮತ್ತು ಬಿಜೆಪಿ ನಾಯಕ ಅರುಣ್‌ ಜೇತ್ವಿ ಅವರ ನಡುವೆ ನಿನ್ನೆ ನಡೆದಿದ್ದ ಸೀಟು ಹಂಚಿಕೆ ಸಭೆಯಲ್ಲಿ ಈ ಸೂತ್ರವನ್ನು ಅಂತಿಮಗೊಳಿಲಾಯಿತು. 

ಒಪ್ಪಿಕೊಂಡ ವ್ಯವಸ್ಥೆಯ ಪ್ರಕಾರ ಪಾಸ್ವಾನ್‌ ಅವರಿಗೆ ರಾಜ್ಯ ಸಭೆ ಸೀಟನ್ನು ಕೊಡಲಾಗುವುದು ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next