Advertisement

ಪ್ರಣಾಳಿಕೆಯಲ್ಲಿ ಉಚಿತ ಲಸಿಕೆ ಸದ್ದು; ರಂಗೇರಿದ ಬಿಹಾರ ಚುನಾವಣೆ ಕಣ

12:07 PM Nov 03, 2015 | mahesh |

ಪಟ್ನಾ /ಹೊಸದಿಲ್ಲಿ /ಚೆನ್ನೈ: ಬಿಹಾರ ವಿಧಾನಸಭೆ ಚುನಾವಣೆ ಕಣದಲ್ಲಿ ಕೊರೊನಾ ಲಸಿಕೆ ಭರ್ಜರಿ ಸದ್ದು ಮಾಡುತ್ತಿದೆ. ಗುರುವಾರ ಬಿಜೆಪಿಯು ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಉಚಿತ ಕೊರೊನಾ ಲಸಿಕೆ ಮತ್ತು ಮುಂದಿನ ಐದು ವರ್ಷಗಳಲ್ಲಿ 19 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ನೀಡಿದೆ. ಆದರೆ ಉಚಿತ ಕೊರೊನಾ ಲಸಿಕೆ ವಿಚಾರ ವಿವಾದಕ್ಕೆ ಕಾರಣವಾಗಿದ್ದು, ಬಿಹಾರಕ್ಕಷ್ಟೇ ಉಚಿತವೇ ಎಂದು ವಿಪಕ್ಷಗಳು ಪ್ರಶ್ನಿಸಿವೆ.

Advertisement

ಪಟ್ನಾದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌,  ಐಸಿಎಂಆರ್‌ನಿಂದ ಲಸಿಕೆಗೆ ಒಪ್ಪಿಗೆ ಸಿಕ್ಕ ತತ್‌ ಕ್ಷಣವೇ ಬಿಹಾರದಲ್ಲಿ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದರು. ಇದಕ್ಕೆ  ವಿಪಕ್ಷಗಳು ತೀವ್ರ ಆಕ್ಷೇಪವೆತ್ತಿವೆ.

ತಮಿಳುನಾಡಿನಲ್ಲೂ “ಉಚಿತ’
ಇತ್ತ ತ.ನಾಡಿನಲ್ಲೂ ಲಸಿಕೆ ರಾಜಕೀಯ ಆರಂಭವಾಗಿದೆ. ಸಿಎಂ ಇ. ಪಳನಿಸ್ವಾಮಿ ಅವರು, ರಾಜ್ಯದ ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡುವುದಾಗಿ ಘೋಷಿಸಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ಹೀಗಾಗಿ ಉಚಿತ ಲಸಿಕೆ ಬಗ್ಗೆ ಘೋಷಣೆ ಮಾಡಿದ್ದಾರೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next