Advertisement

ಬಿಹಾರ ಫಲಿತಾಂಶ: ನಿತೀಶ್ ಪಕ್ಷದ ಹಿಲ್ಸಾ ಕ್ಷೇತ್ರದ ಅಭ್ಯರ್ಥಿ ಗೆದ್ದ ಅಂತರ ಕೇವಲ 12!

11:02 AM Nov 11, 2020 | Nagendra Trasi |

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎನ್ ಡಿಎ ಮೈತ್ರಿಕೂಟದ ಜೆಡಿ(ಯು) ಪಕ್ಷದ ಹಿಲ್ಸಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೇವಲ 12 ಮತಗಳ ಅಂತರದಿಂದ ಗೆಲುವು ಸಾಧಿಸಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

Advertisement

ಮಂಗಳವಾರ ತಡರಾತ್ರಿ ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಘೋಷಿಸಿರುವ ಫಲಿತಾಂಶದ ಪ್ರಕಾರ, ಜೆಡಿಯು ಅಭ್ಯರ್ಥಿ ಕೃಷ್ಣಮುರಾರಿ ಶರಣ್ ಯಾನೆ ಪ್ರೇಮ್ ಮುಖಿಯಾ 61,848 ಮತ ಪಡೆದಿದ್ದು, ಪ್ರತಿಸ್ಪರ್ಧಿ ಆರ್ ಜೆಡಿ ಅಭ್ಯರ್ಥಿ ಅತ್ರಿ ಮುನಿ (ಶಕ್ತಿ ಸಿಂಗ್ ಯಾದವ್) 61,836 ಮತ ಗಳಿಸಿ ಪರಾಜಯಗೊಂಡಿರುವುದಾಗಿ ವಿವರಿಸಿದೆ.

ಫಲಿತಾಂಶ ಘೋಷಣೆಯಾಗಿದೆ ಎಂದು ಉಲ್ಲೇಖಿಸಿರುವ ಚುನಾವಣಾ ಆಯೋಗ “ಸ್ಟೇಟಸ್” ಕಾಲಂನಲ್ಲಿ ಹಿಲ್ಸಾ ಸ್ಥಾನ ಎಂದು ಬರೆದಿದ್ದು, ಮಾರ್ಜಿನ್ ಕಾಲಂನಲ್ಲಿ “12” ಮತಗಳ ಅಂತರ ಎಂದು ನಮೂದಿಸಿರುವುದಾಗಿ ವರದಿ ಹೇಳಿದೆ.

ರಾತ್ರಿ ಗಂಟೆಗೆ ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಹಿಲ್ಸಾ ಕ್ಷೇತ್ರದ ಮತಎಣಿಕೆ ಮುಂದುವರಿದಿದೆ ಎಂದು ನಮೂದಿಸಲಾಗಿತ್ತು. ಇದರಲ್ಲಿ ಮೋಸ ನಡೆದಿರುವುದಾಗಿ ಆರ್ ಜೆಡಿ ಆರೋಪಿಸಿದೆ.

ಆರ್ ಜೆಡಿ ಅಭ್ಯರ್ಥಿ ಜಯ ಎಂದು ಘೋಷಿಸಿ ನಂತರ ಜೆಡಿಯು ಅಭ್ಯರ್ಥಿ ಗೆಲುವು ಎಂದು ಘೋಷಣೆ!

Advertisement

ಮತಎಣಿಕೆ ನಂತರ ರಿಟರ್ನಿಂಗ್ ಆಫೀಸರ್, ಆರ್ ಜೆಡಿ ಪಕ್ಷದ ಹಿಲ್ಸಾ ಕ್ಷೇತ್ರದ ಅಭ್ಯರ್ಥಿ ಶಕ್ತಿ ಸಿಂಗ್ 547 ಮತಗಳ ಅಂತರದಿಂದ ಗೆಲುವು ಸಾಧಿಸಿರುವುದಾಗಿ ಘೋಷಿಸಿ, ಜಯಗಳಿಸಿದ ಬಗ್ಗೆ ಸರ್ಟಿಫಿಕೇಟ್ ನೀಡುವುದಾಗಿ ತಿಳಿಸಿದ್ದರು. ಆದರೆ ಈ ಸಂದರ್ಭದಲ್ಲಿ ರಿಟರ್ನಿಂಗ್ ಆಫೀಸರ್ ಗೆ ಮುಖ್ಯಮಂತ್ರಿ ನಿವಾಸದಿಂದ ಕರೆಯೊಂದು ಬಂದಿದ್ದು, ಅಧಿಕಾರಿ ಕೂಡಲೇ ಆರ್ ಜೆಡಿ ಅಭ್ಯರ್ಥಿ 12 ಮತಗಳನ್ನು ಕಳೆದುಕೊಂಡಿರುವುದಾಗಿ(ಅಂಚೆ ಮತ ರದ್ದು) ತಿಳಿಸಿರುವುದಾಗಿ ಆರ್ ಜೆಡಿ ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next