Advertisement

ಏನೇ ಆದರೂ ನಿತೀಶ್‌ ನಮ್ಮ ಸಿಎಂ ಅಭ್ಯರ್ಥಿ: ಬಿಹಾರ ಉಪಮುಖ್ಯಮಂತ್ರಿ ಸುಶೀಲ್‌ ಮೋದಿ ಘೋಷಣೆ

03:35 AM Oct 07, 2020 | Hari Prasad |

ಪಟ್ನಾ: “ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯುಗಿಂತ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಬಂದರೂ ನಿತೀಶ್‌ ಕುಮಾರ್‌ ಅವರೇ ಮುಖ್ಯಮಂತ್ರಿ’ – ಹೀಗೆಂದು ಘೋಷಣೆ ಮಾಡಿದ್ದು ಬಿಹಾರ ಡಿಸಿಎಂ ಸುಶೀಲ್‌ ಕುಮಾರ್‌ ಮೋದಿ.

Advertisement

ಕೇಂದ್ರ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ನೇತೃತ್ವದ ಲೋಕಜನ ಶಕ್ತಿ ಪಕ್ಷ ನಿತೀಶ್‌ ಕುಮಾರ್‌ ನಾಯಕತ್ವದ ವಿರುದ್ಧ ಆಕ್ಷೇಪ ಮಾಡಿದ್ದು ಸರಿಯಲ್ಲ ಎಂಬುದನ್ನು ಪರೋಕ್ಷವಾಗಿ ಪ್ರಸ್ತಾವ ಮಾಡಿದ್ದಾರೆ.

‘ನಿತೀಶ್‌ ಕುಮಾರ್‌ ಅವರನ್ನು ನಾಯಕರನ್ನಾಗಿ ಒಪ್ಪಿಕೊಳ್ಳುವ ಪಕ್ಷಗಳಿಗೆ ಮಾತ್ರ ಬಿಹಾರ ಎನ್‌ಡಿಎ ಘಟಕದಲ್ಲಿ ಸ್ಥಾನ’ ಎಂಬುದನ್ನೂ ಸುಶೀಲ್‌ ಮೋದಿ ಘೋಷಣೆ ಮಾಡಿದ್ದಾರೆ.

ಈ ಮೂಲಕ ಬಿಹಾರ ವ್ಯಾಪ್ತಿಯಲ್ಲಿ ಎನ್‌ಡಿಎಯಿಂದ ಹೊರ ನಡೆದಿರುವ ಎಲ್‌ಜೆಪಿಗೆ ಟಾಂಗ್‌ ನೀಡಿದ್ದಾರೆ ಡಿಸಿಎಂ ಸುಶೀಲ್‌ ಮೋದಿ.

ಸ್ಥಾನ ಹೊಂದಾಣಿಕೆ ಪ್ರಕಟ: ಜೆಡಿಯು 122, ಬಿಜೆಪಿ 121 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಗ್ಗೆ ಸಿಎಂ ನಿತೀಶ್‌ ಕುಮಾರ್‌ ಘೋಷಣೆ ಮಾಡಿದ್ದಾರೆ. ಮಾಜಿ ಸಿಎಂ ಜಿತನ್‌ ರಾಂ ಮಾಂಝಿ ನೇತೃತ್ವದ ಹಿಂದೂಸ್ಥಾನ್‌ ಅವಾಮ್‌ ಮೋರ್ಚಾಕ್ಕೆ ಜೆಡಿಯು ಕೋಟಾದಿಂದ 6, ವಿಕಾಸ್‌ಶೀಲ್‌ ಇನ್ಸಾನ್‌ ಪಾರ್ಟಿಗೆ ಬಿಜೆಪಿ ಕೋಟಾದಿಂದ 6 ಸ್ಥಾನಗಳನ್ನು ನೀಡಲಾಗುತ್ತದೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

Advertisement

ಬಿಹಾರದ ಹಾಲಿ ವಿಧಾನಸಭೆಯಲ್ಲಿ ಆರ್‌ಜೆಡಿ 73, ಜೆಡಿಯು 69, ಬಿಜೆಪಿ 54, ಕಾಂಗ್ರೆಸ್‌ 23, ಸಿಪಿಐಎಂಎಲ್‌ 3, ಎಲ್‌ಜೆಪಿ 2, ಎಚ್‌ಎಎಂ, ಎಂಐಎಂ ತಲಾ 1 ಸ್ಥಾನ, ಸ್ವತಂತ್ರರು 5, 12 ಕ್ಷೇತ್ರಗಳು ತೆರವಾಗಿವೆ.

ಸ್ಥಾನ ಹೊಂದಾಣಿಕೆ ವಿಚಾರ ಪ್ರಕಟಿಸುವ ಮೊದಲು ಬಿಜೆಪಿ ಮತ್ತು ಜೆಡಿಯು ನಾಯಕರು ಎರಡು ಗಂಟೆಗಳ ಕಾಲ ಸಭೆ ನಡೆಸಿದ್ದಾರೆ. ಇದಾದ ಬಳಿಕ ಬಿಹಾರ ಬಿಜೆಪಿ ಅಧ್ಯಕ್ಷ ಸಂಜಯ ಜೈಸ್ವಾಲ್‌, ಚುನಾವಣ ಉಸ್ತುವಾರಿ ದೇವೇಂದ್ರ ಫ‌ಡ್ನವಿಸ್‌, ಬಿಜೆಪಿ ಮುಖಂಡ ಭೂಪೇಂದ್ರ ಯಾದವ್‌ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಮೊದಲ ಹಂತದ ಮತದಾನ ಅ.28ರಂದು ನಡೆಯಲಿದೆ.

ಬಿಜೆಪಿ ಜತೆಗೆ ಉತ್ತಮ ರೀತಿಯ ಬಾಂಧವ್ಯವಿದೆ. 2014ರಿಂದ ಪ್ರಧಾನಿ ಮೋದಿ ನೇತೃತ್ವದ ನಾಯಕತ್ವವನ್ನು ಬೆಂಬಲಿಸುತ್ತಾ ಬಂದಿದ್ದೇವೆ. ನಿತೀಶ್‌ ಕುಮಾರ್‌ ಒಂದು ಹಂತದಲ್ಲಿ ಎನ್‌ಡಿಎ ತೊರೆದು ವಾಪಸಾಗಿದ್ದಾರೆ. ಆ ರೀತಿ ನಾವು ವರ್ತಿಸಿಲ್ಲ.
– ಚಿರಾಗ್‌ ಪಾಸ್ವಾನ್‌, ಎಲ್‌ಜೆಪಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next