Advertisement

Bihar ಸೇತುವೆ ಕುಸಿತ: ವಾರದಲ್ಲಿ 3ನೇ ಘಟನೆ!

12:49 AM Jun 24, 2024 | Team Udayavani |

ಪಟ್ನಾ: ಬಿಹಾರದ ಪೂರ್ವ ಚಂಪಾರಣ್‌ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸಣ್ಣ ಸೇತುವೆಯೊಂದು ಬುಧವಾರ ಕುಸಿದು ಬಿದ್ದಿದೆ. ರಾಜ್ಯದಲ್ಲಿ ಒಂದು ವಾರದ ಅವಧಿಯಲ್ಲಿ ನಡೆದ ಇಂಥ 3ನೇ ಘಟನೆ ಇದಾಗಿದೆ. ಮೋತಿಹಾರಿಯ ಘೋರಸಾಹನ್‌ ಪ್ರದೇಶದಲ್ಲಿ ಕಾಲುವೆಯ ಮೇಲೆ 16 ಮೀಟರ್‌ ಉದ್ದದ ಸೇತುವೆಯನ್ನು 1.5 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿತ್ತು. ಆದರೆ ಇದಕ್ಕಿದ್ದಂತೆ ಈ ಸೇತುವೆ ಕುಸಿದಿದೆ. ಇದಕ್ಕೆ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಬಗ್ಗೆ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next