Advertisement

ಕೋವಿಡ್ ಮಧ್ಯೆಯೇ ಮದುವೆ : ನಿಯಮ ಪಾಲಿಸಲು ಈ ನವ ಜೋಡಿ ಮಾಡಿದ್ರು ನ್ಯೂ ಐಡಿಯಾ..!

09:31 AM May 03, 2021 | Team Udayavani |

ಪಾಟ್ನಾ : ದೇಶದಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳು ಬಿಗಿ ಕೋವಿಡ್ ನಿಯಮಗಳನ್ನು ಜಾರಿ ಮಾಡಿವೆ. ಮದುವೆ ಸಮಾರಂಭ  ಸೇರದಂತೆ ಸಾರ್ವಜನಿಕ ಪ್ರದೇಶದಲ್ಲಿ ಹೆಚ್ಚು ಜನ ಸೇರದಂತೆ ಎಚ್ಚರಿಗೆ ನೀಡಿವೆ. ಇದೇ ಹಿನ್ನೆಲೆಯಲ್ಲಿ ಜನರು ಕೂಡ ಕೋವಿಡ್ ನಿಯಮಗಳನ್ನು ಪಾಲಿಸುತ್ತಿದ್ದಾರೆ.

Advertisement

ಕೋವಿಡ್ ನಿಯಮದ ಮಧ್ಯೆಯೂ ಇಲ್ಲೊಂದು ವಿಶೇಷ ರೀತಿಯಲ್ಲಿ ಮದುವೆ ಸಮಾರಂಭ ನಡೆದಿದೆ. ಬಿಹಾರದ ತೇಗ್ರಾ ಉಪವಿಭಾಗದ ತೇಗ್ರಾ ಬಜಾರ್‌ನಲ್ಲಿ ಮದುವೆಯೊಂದು ನಡೆದಿದ್ದು, ಈ ಮದುವೆಯಲ್ಲಿ ವಧು-ವರ ಸಾಮಾಜಿಕ ಅಂತರ ಪಾಲನೆ ಮಾಡುವ ನಿಟ್ಟಿನಲ್ಲಿ ಕೋಲುಗಳನ್ನು ಬಳಸಿಕೊಂಡು ಪರಸ್ಪರ ಹಾರಗಳನ್ನು ಬದಲಿಸಿದ್ದಾರೆ. ಈ ಮದುವೆಯು ಏಪ್ರಿಲ್ 30ರ ರಾತ್ರಿ ನಡದಿದೆ ಎಂದು ಹೇಳಲಾಗುತ್ತಿದೆ.

ಬಿಹಾರದ ಅನುಮಂಡಲ್ ಕ್ಷೇತ್ರದ ತೆಗ್ರಾದ ಗಿರಿಧರಲಾಲ್ ಪುತ್ರ ಕೃತೇಶ್ ಕುಮಾರ್ ಮದುವೆ ಜ್ಯೋತಿ ಕುಮಾರಿ ಅವರನ್ನ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾದ್ರು. ಕೋವಿಡ್ ನಿಯಮಗಳನ್ನ ಪಾಲಿಸಿದ್ದರಿಂದ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Advertisement

ಈ ಮದುವೆಯಲ್ಲಿ ಸಮಾರಂಭದಲ್ಲಿ ಸರ್ಕಾರ ಜಾರಿಗೊಳಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಕುಟುಂಬಸ್ಥರು ಹಾಗು ವಧು, ವರ ಕೂಡ ಸಂಪೂರ್ಣವಾಗಿ ಅನುಸರಿಸಿದ್ದಾರೆ. ಈ ವಿಶೇಷ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗುತ್ತಿವೆ. ಜೊತೆಗೆ ಎಲ್ಲರಿಂದ ಮೆಚ್ಚುಗೆ ಗಳಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next