Advertisement

ಯಾರಿಗೆ ಜಯದ ಬಿಹಾರ?

11:28 PM Nov 09, 2020 | mahesh |

ಹಲವು ಘಟಾನುಘಟಿ ನಾಯಕರ ಭವಿಷ್ಯವನ್ನು ನಿರ್ಧರಿಸಲಿರುವ ಬಿಹಾರ ವಿಧಾನಸಭೆ ಚುನಾವಣೆ ಹಾಗೂ 11 ರಾಜ್ಯಗಳಲ್ಲಿ ನಡೆದ ಉಪಚುನಾವಣೆಗಳ ಫ‌ಲಿತಾಂಶದ ದಿನ ಬಂದೇ ಬಿಟ್ಟಿದೆ. ಮಂಗಳವಾರ ಬೆಳಗ್ಗೆಯೇ ಈ ಎಲ್ಲ ಚುನಾವಣೆಗಳ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಬಿಹಾರದಲ್ಲಿ ನಿತೀಶ್‌ ಕುಮಾರ್‌ ಅವರ ಆಡಳಿತ ಮುಂದುವರಿಯಲಿದೆಯೇ ಅಥವಾ ಯುವನಾಯಕ ತೇಜಸ್ವಿ ಯಾದವ್‌ ಮುಖ್ಯಮಂತ್ರಿಯ ಗದ್ದುಗೆ ಏರಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು…

Advertisement

ಪ್ರಮುಖರ ಭವಿಷ್ಯ ನಿರ್ಧಾರ: ಮಂಗಳವಾರದ ಫ‌ಲಿ ತಾಂಶವು ಬಿಹಾರದ ಪ್ರಮುಖ ಸಚಿವರಾದ ನಂದ್‌ಕಿಶೋರ್‌ ಯಾದವ್‌ (ಪಾಟ್ನಾ ಸಾಹಿಬ್‌), ಪ್ರಮೋದ್‌ ಕುಮಾರ್‌ (ಮೋತಿಹರಿ), ರಾಣಾ ರಣಧೀರ್‌ (ಮಧು  ಬನ್‌), ಸುರೇಶ್‌ ಶರ್ಮಾ (ಮುಜಫ‌#ರ್‌ಪುರ), ಶ್ರವಣ್‌ ಕುಮಾರ್‌ (ನಳಂದಾ), ಜೈಕುಮಾರ್‌ ಸಿಂಗ್‌ (ದಿನಾರಾ) ಮತ್ತು ಕೃಷ್ಣಾನಂದ ಪ್ರಸಾದ್‌ ವರ್ಮಾ (ಜೆಹನಾಬಾದ್‌) ಅವರ ಭವಿಷ್ಯವನ್ನು ನಿರ್ಧರಿಸಲಿದೆ.

ಎಣಿಕೆ ಕೇಂದ್ರ ಹೆಚ್ಚಳ: ಸಾಮಾನ್ಯವಾಗಿ ಬಿಹಾರ ವಿಧಾನ ಸಭೆ ಚುನಾವಣೆಯ ಫ‌ಲಿತಾಂಶದ ವೇಳೆ 38 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿತ್ತು. ಆದರೆ, ಈ ಬಾರಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಎಣಿಕೆ ಕೇಂದ್ರಗಳ ಸಂಖ್ಯೆಯನ್ನು 55ಕ್ಕೇರಿಸಲಾಗಿದೆ. ಒಟ್ಟಾರೆ 38 ಜಿಲ್ಲೆಗಳಲ್ಲಿ 414 ಹಾಲ್‌ಗ‌ಳನ್ನು ಹೊಂದಿರುವ 55 ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಚುನಾವಣ ಆಯೋಗ ಹೇಳಿದೆ.

ಭದ್ರತೆ ಹೇಗಿದೆ?: ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾ ಡುವ ಸಲುವಾಗಿ ಅರೆಸೇನಾಪಡೆಗಳ 59 ಕಂಪನಿ ಗಳನ್ನು ನಿಯೋಜಿಸಲಾಗಿದೆ. ಸ್ಟ್ರಾಂಗ್‌ರೂಂ ಗಳ ಭದ್ರತೆಗೆ 19 ತುಕಡಿ ಗಳನ್ನು ನಿಯೋಜಿಸಿರುವುದಾಗಿ ಚುನಾವಣ ಆಯೋಗ ತಿಳಿಸಿದೆ.

ಸಮೀಕ್ಷೆಗಳ ಭವಿಷ್ಯವೇನು?: ನಿತೀಶ್‌ ಕುಮಾರ್‌ ನೇತೃ ತ್ವದ ಎನ್‌ಡಿಎ ಮತ್ತೂಮ್ಮೆ ಬಿಹಾರದಲ್ಲಿ ಸರಕಾರ ರಚಿಸ ಲಿದೆ ಎಂದು ಚುನಾವಣಾಪೂರ್ವ ಸಮೀಕ್ಷೆಗಳು ಹೇಳಿ ದ್ದವು. ಆದರೆ, ಎಲ್ಲ ಮೂರು ಹಂತದ ಮತದಾನ ಮುಗಿದ ಮೇಲೆ ಬಂದ ಮತಗಟ್ಟೆ ಸಮೀಕ್ಷೆ ಗಳು, ಆರ್‌ಜೆಡಿ- ಕಾಂಗ್ರೆಸ್‌- ಎಡಪಕ್ಷಗಳ ಮಹಾ ಮೈತ್ರಿಗೆ ಬಹುಮತ ಸಿಗುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿವೆ. ಅತಂತ್ರ ವಿಧಾನ ಸಭೆಯ ಸಾಧ್ಯತೆಯೂ ಇಲ್ಲದಿಲ್ಲ ಎಂದು ಒಂದೆರಡು ಸಮೀಕ್ಷೆಗಳು ಹೇಳಿವೆ.

Advertisement

ಬರ್ತ್‌ಡೇ ಆಚರಣೆ; ತೇಜಸ್ವಿ “ಮೌನ’: ಚುನಾವಣ ಫ‌ಲಿತಾಂಶದ ಮುನ್ನಾದಿನವಾದ ಸೋಮವಾರ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಹುತೇಕ ಸಮೀಕ್ಷೆಗಳು ಮಹಾಘಟಬಂಧನ್‌ ಗೆಲುವಿನ ಸುಳಿವು ನೀಡಿದ್ದರೂ, ತೇಜಸ್ವಿ ಮಾತ್ರ “ಮೌನ’ಕ್ಕೆ ಶರಣಾಗಿ ದ್ದಾರೆ. ತಾವು ಜನ್ಮದಿನವನ್ನು ಸರಳವಾಗಿ ಆಚರಿಸುತ್ತಿದ್ದು, ಯಾರೂ ಮನೆಯತ್ತ ಧಾವಿಸಬೇಡಿ ಎಂದು ಅಭಿಮಾನಿ ಗಳಿಗೆ, ಪಕ್ಷದ ಕಾರ್ಯ ಕರ್ತರಿಗೆ ಮನವಿ ಮಾಡಿದ್ದಾರೆ. ಇದೇ ವೇಳೆ, ಸಹೋದರ ತೇಜ್‌ ಪ್ರತಾಪ್‌ ಯಾದವ್‌, ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಸೇರಿದಂತೆ ಅನೇ ಕರು ತೇಜಸ್ವಿಗೆ ಜನ್ಮದಿನದ ಶುಭಾಶಯ ಹೇಳಿದ್ದಾರೆ.

ಬಿಹಾರದ ಗದ್ದುಗೆ ನಿತೀಶ್‌ಗೋ, ತೇಜಸ್ವಿಗೋ?
ಬಿಹಾರ ವಿಧಾನಸಭೆ, 56 ಕ್ಷೇತ್ರಗಳ ಉಪಚುನಾವಣೆ ಫ‌ಲಿತಾಂಶಕ್ಕೆ ಕ್ಷಣಗಣನೆ

ಉಪ ಚುನಾವಣೆ
ಒಟ್ಟು ಎಷ್ಟು ಸ್ಥಾನಗಳಿಗೆ ನಡೆದಿದೆ ಉಪ ಚುನಾವಣೆ? 56
ಎಷ್ಟು ರಾಜ್ಯಗಳಲ್ಲಿ? 11
ಯಾವ್ಯಾವ ರಾಜ್ಯಗಳು?
ಮಧ್ಯಪ್ರದೇಶ (28), ಉತ್ತರಪ್ರದೇಶ (7), ಗುಜರಾತ್‌ (8), ಕರ್ನಾಟಕ (2), ಒಡಿಶಾ (2), ಝಾರ್ಕಂಡ್‌ (2), ನಾಗಾಲ್ಯಾಂಡ್‌ (2),
ಮಣಿಪುರ (2), ತೆಲಂಗಾಣ (1), ಹರಿಯಾಣ (1), ಬಿಹಾರ (1 ಲೋಕಸಭಾ ಸ್ಥಾನ).

ದಾಖಲಾದ ಒಟ್ಟಾರೆ ಮತದಾನ 57.05%
55 ಮತ ಎಣಿಕೆ ಕೇಂದ್ರಗಳು
8 ಮತ ಎಣಿಕೆ ಆರಂಭ ಬೆಳಗ್ಗೆ
3,755 ಎಷ್ಟು ಅಭ್ಯರ್ಥಿಗಳ ಭವಿಷ್ಯ ನಿರ್ಧಾರ?
10.00 ಮೇಲ್ನೋಟದ ಚಿತ್ರಣ ಸಿಗುವ ಸಮಯ-ಬೆಳಗ್ಗೆ

 

 

Advertisement

Udayavani is now on Telegram. Click here to join our channel and stay updated with the latest news.

Next