Advertisement

Scholarship scam: ಅತಿದೊಡ್ಡ ಸ್ಕಾಲರ್‌ಶಿಪ್‌ ಹಗರಣ

12:03 AM Aug 20, 2023 | Team Udayavani |

ಹೊಸದಿಲ್ಲಿ: ಅಲ್ಪಸಂಖ್ಯಾತ ವಿದ್ಯಾರ್ಥಿವೇತನದ ಹೆಸರಿನಲ್ಲಿ ಕಳೆದ 5 ವರ್ಷದಲ್ಲಿ ಭಾರತದಲ್ಲಿ ನಡೆದಿರುವ 144.83 ಕೋಟಿ ರೂ. ಮೊತ್ತದ ಅತಿದೊಡ್ಡ ಹಗರಣವನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಬಹಿರಂಗ ಪಡಿಸಿದೆ. ದೇಶದ ಒಟ್ಟು 830 ಶೈಕ್ಷಣಿಕ ಸಂಸ್ಥೆಗಳಲ್ಲಿ ಈ ಹಗರಣ ವ್ಯಾಪಿಸಿದ್ದು, ಈ ಕುರಿತಂತೆ ತನಿಖೆ ನಡೆಸಲು ಕೇಂದ್ರಿಯ ತನಿಖಾ ಸಂಸ್ಥೆ (ಸಿಬಿಐ)ಗೆ ಆದೇಶಿಸಲಾಗಿದೆ.

Advertisement

ಕೆಲ ತಿಂಗಳ ಹಿಂದಷ್ಟೇ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ವಿದ್ಯಾರ್ಥಿ ವೇತನಗಳಿಗೆ ಸಂಬಂಧಿಸಿದಂತೆ ಆಂತರಿಕ ತನಿಖೆಯೊಂದನ್ನು ನಡೆಸಿದೆ. ಈ ವೇಳೆ 34 ರಾಜ್ಯಗಳ 100 ಜಿಲ್ಲೆಗಳಲ್ಲಿರುವ 1572 ಶಿಕ್ಷಣ ಸಂಸ್ಥೆಗಳ ಪೈಕಿ 830 ಸಂಸ್ಥೆಗಳು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಹೆಸರಿನಲ್ಲಿ ನಕಲಿ ಪಟ್ಟಿಯನ್ನು ಸಿದ್ಧಪಡಿಸಿ 144.83 ಕೋಟಿ ರೂ. ಪಡೆದು, ಹಗರಣ ನಡೆಸಿರುವುದು ತಿಳಿದುಬಂದಿದೆ. ಸದ್ಯದ ಮಟ್ಟಿಗೆ ಈ 830 ಶೈಕ್ಷಣಿಕ ಸಂಸ್ಥೆಗಳಿಗೆ ಸಂಬಂಧಿಸಿದ ಖಾತೆಗಳನ್ನು ಸರ್ಕಾರ ಸ್ಥಗಿತಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next