Advertisement

ಅತೀ ದೊಡ್ಡ ಗುಂಪು ಥಳಿತ ಘಟನೆ ನಡೆದದ್ದು 1984ರಲ್ಲಿ; ರಾಜನಾಥ್ ಸಿಂಗ್

03:39 PM Jul 24, 2018 | Team Udayavani |

ನವದೆಹಲಿ:ಅಲ್ವಾರ್ ಗುಂಪು ಥಳಿತ ಪ್ರಕರಣದಲ್ಲಿ ಸಾವನ್ನಪ್ಪಿರುವ 28ವರ್ಷದ ಅಕ್ಬರ್ ಖಾನ್ ವಿಷಯ ಪ್ರಸ್ತಾಪಿಸಿ ಮಾತನಾಡಿದ ಗೃಹ ಸಚಿವ ರಾಜ್ ನಾಥ್ ಸಿಂಗ್, ಒಂದು ವೇಳೆ ಗುಂಪು ಥಳಿತದಂತಹ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾನೂನನ್ನು ರೂಪಿಸಲು ಸಿದ್ಧವಿದೆ ಎಂದು ಭರವಸೆ ನೀಡಿದರು.

Advertisement

ಕೇಂದ್ರ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ತಿಳಿಸಿದ ಅವರು, ಕಾಂಗ್ರೆಸ್ 1984ರಲ್ಲಿ ನಡೆಸಿದ್ದ ಸಿಖ್ಖ್ ದಂಗೆ ಪ್ರಕರಣವನ್ನು ಉದಾಹರಿಸಿದರು. ನಾವು ಇದರ ಬಗ್ಗೆ ಚಿಂತಿಸಬೇಕಾಗಿದೆ. ಇಂತಹ ಪ್ರಕರಣ ಇತ್ತೀಚೆಗೆ ಆರಂಭವಾಗಿದ್ದಲ್ಲ. ಹಲವು ವರ್ಷಗಳ ಹಿಂದೆಯೂ ನಡೆದಿತ್ತು. ಈ ಹಿನ್ನೆಲೆಯಲ್ಲಿ 1984ರಲ್ಲಿ ನಡೆದಿರುವುದು ಅತೀ ದೊಡ್ಡ ಗುಂಪು ಥಳಿತ ಘಟನೆಯಾಗಿದೆ ಎಂದು ಸಿಂಗ್ ಹೇಳಿದರು.

ಅಲ್ವಾರ್ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ. ಅಷ್ಟೇ ಅಲ್ಲ ಯಾರು ದೋಷಿ ಎಂದು ಸಾಬೀತಾಗುತ್ತದೋ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದರು. ನಾಲ್ಕು ವಾರಗಳಲ್ಲಿ ಸಮಿತಿ ವರದಿಯನ್ನು ನೀಡಬೇಕೆಂದು ಸೂಚಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next