Advertisement

Bigg Boss OTT: ಓಟಿಟಿಯಲ್ಲಿ ಶುರುವಾಯಿತು ಮಿನಿ ಬಿಗ್‌ ಬಾಸ್; ಇಲ್ಲಿದೆ ಸ್ಪರ್ಧಿಗಳ ವಿವರ

01:14 PM Jun 22, 2024 | Team Udayavani |

ಮುಂಬಯಿ: ಹಿಂದಿಯ ಬಿಗ್‌ ಬಾಸ್‌ ಓಟಿಟಿ-3 ಆರಂಭವಾಗಿದೆ. ಅನಿಲ್‌ ಕಪೂರ್‌ ಈ ಬಾರಿ ನಿರೂಪಕನಾಗಿ ಕಾಣಿಸಿಕೊಂಡಿದ್ದು, ಸ್ಪರ್ಧಿಗಳು ತನ್ನದೇ ಸ್ಟೈಲ್‌ ನಲ್ಲಿ ವೇದಿಕೆಗೆ ಬಂದು ದೊಡ್ಮನೆಯೊಳಗೆ ಪ್ರವೇಶ ಪಡೆದಿದ್ದಾರೆ.

Advertisement

ಕಿರುತೆರೆ, ಮಾಧ್ಯಮ, ಸೋಶಿಯಲ್‌ ಮೀಡಿಯಾ ಪ್ರಭಾವಿ, ವೈರಲ್‌ ಆದ ವ್ಯಕ್ತಿಗಳು ಸೇರಿದಂತೆ ನಾನಾ ಕ್ಷೇತ್ರದವರು ಸ್ಪರ್ಧಿಗಳಾಗಿ ದೊಡ್ಡನೆಗೆ ಎಂಟ್ರಿ ಆಗಿದ್ದಾರೆ. ಇಲ್ಲಿದೆ ಸ್ಪರ್ಧಿಗಳ ವಿವರ..

ಚಂದ್ರಿಕಾ ದೀಕ್ಷಿತ್:‌ ʼದಿಲ್ಲಿ ವಡಾಪಾವ್‌ ಗರ್ಲ್‌ʼ ಎಂದೇ ವೈರಲ್‌ ಆದ ಚಂದಿಕ್ರಾ ದೀಕ್ಷಿತ್‌ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಆಗಿದ್ದಾರೆ. ತನ್ನ ಮಾತಿನಿಂದಲೇ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಗಮನ ಸೆಳೆದ ಚಂದ್ರಿಕಾ ಮೊದಲ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ಪ್ರವೇಶ ಪಡೆದಿದ್ದಾರೆ.

ಸನಾ ಮಕ್ಬುಲ್ ಖಾನ್: ʼಟೀನ್‌ ದಿವಾʼ  ಮೂಲಕ ಮಾಡೆಲಿಂಗ್‌ ಕ್ಷೇತ್ರಕ್ಕೆ ಕಾಲಿಟ್ಟ ಸನಾ ಕಿರುತೆರೆ ಧಾರಾವಾಹಿಯಿಂದ ಖ್ಯಾತಿಯನ್ನು ಗಳಿಸಿದ್ದಾರೆ. ‘ಕಿತ್ನಿ ಮೊಹಬ್ಬತ್ ಹೈ’, ‘ಇಸ್ ಪ್ಯಾರ್ ಕೊ ಕ್ಯಾ ನಾಮ್ ದೂನ್’ ಮತ್ತು ‘ಅರ್ಜುನ್’ ಧಾರಾವಾಹಿಗಳಲ್ಲಿ ನಟಿಸಿ, 2012 ರಲ್ಲಿ ʼಮಿಸ್‌ ಇಂಡಿಯಾʼ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ‘ಖತ್ರೋನ್ ಕೆ ಕಿಲಾಡಿ 11’ ನಲ್ಲಿ ಕಾಣಿಸಿಕೊಂಡು, ಸನಾ ಖಾನ್‌ನಿಂದ ಸನಾ ಮಕ್ಬುಲ್ ಖಾನ್ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡರು.

ಸಾಯಿ ಕೇತನ್ ರಾವ್: ಹಿಂದಿ ಧಾರಾವಾಹಿಗಳಾದ ‘ಮೆಹೆಂದಿ ಹೈ ರಚನೆ ವಾಲಿ’,’ಚಶ್ನಿ’ ಮತ್ತು ‘ಇಮ್ಲಿ’ ಗಳಲ್ಲಿ ಕಾಣಿಸಿಕೊಂಡು ವೀಕ್ಷಕರ ಮನೆಮನವನ್ನು ಗೆದ್ದಿರುವ ಸಾಯಿ ಕೇತನ್‌ ತೆಲುಗು ಶೋ, ವೆಬ್‌ ಸಿರೀಸ್‌ ನಲ್ಲೂ ಕಾಣಿಸಿಕೊಂಡು ಫ್ಯಾನ್‌ ಫಾಲೋವಿಂಗ್‌ ಗಳಿಸಿದ್ದಾರೆ.

Advertisement

ರಣವೀರ್ ಶೋರೆ: ಹಿಂದಿ ಕಿರುತೆರೆಯ ಜೊತೆ ಬಾಲಿವುಡ್‌ ಸಿನಿಮಾಗಳಲ್ಲೂ ನಟಿಸಿ ಖ್ಯಾತಿಗಳಿಸಿರುವ ರಣವೀರ್‌ ಶೋರೆ ಬಿಗ್‌ ಬಾಸ್‌ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಆಗಿದ್ದಾರೆ. “ಖೋಸ್ಲಾ ಕಾ ಘೋಸ್ಲಾ!”, “ಭೇಜಾ ಫ್ರೈ” (2007), “ಜಿಸ್ಮ್”, “ಟ್ರಾಫಿಕ್ ಸಿಗ್ನಲ್”, “ಪ್ಯಾರ್ ಕೆ ಸೈಡ್ ಎಫೆಕ್ಟ್ಸ್”, “ಭೇಜಾ ಫ್ರೈ 2”, “ಸೋಂಚಿರಾಯ”, “ಲಕ್ಷ್ಯ”, “ಅಂಗ್ರೇಜಿ ಮೀಡಿಯಂ”, ಇಕೆ ಥಾ ಟೈಗರ್ ಮತ್ತು ಟೈಗರ್ ಜಿಂದಾ ಹೈ ಸೇರಿದಂತ ಅನೇಕ ಸಿನಿಮಾಗಳಲ್ಲಿ ನಟಿಸಿರುವ ರಣವೀರ್‌ ಶೋರೆ ಬಿಗ್‌ ಬಾಸ್‌ ಮನೆಯೊಳಗೆ ಎಂಟ್ರಿ ಆಗಿರುವ ಖ್ಯಾತ ಹೆಸರುಗಳಲ್ಲಿ ಒಂದು.

ಪೌಲೋಮಿ ದಾಸ್: ಮಾಡೆಲಿಂಗ್‌ ಕ್ಷೇತ್ರದಿಂದ ವೃತ್ತಿಯನ್ನು ಆರಂಭಿಸಿ ಆ ಬಳಿಕ ಕಿರುತೆರೆಯಲ್ಲಿ ಮಿಂಚಿದ ಪೌಲೋಮಿ ದಾಸ್‌ ಅವರಿಗೆ ಅಪಾರ ಫ್ಯಾನ್‌ ಫಾಲೋವರ್ಸ್‌ ಗಳಿದ್ದಾರೆ. ‘ಸುಹಾನಿ ಸಿ ಏಕ್ ಲಡ್ಕಿ’, ‘ದಿಲ್ ಹಿ ತೋ ಹೈ’, ಮತ್ತು ‘ಕಾರ್ತಿಕ್ ಪೂರ್ಣಿಮಾ’ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವುದು ಮಾತ್ರವಲ್ಲದೆ, ‘ಪೌರುಷ್‌ಪುರ’, ‘ಬಕಾಬೂ’ ಮತ್ತು ‘ಹೈ ತೌಬಾ’ ಮುಂತಾದ ವೆಬ್‌ ಸಿರೀಸ್‌ ನಲ್ಲೂ ನಟಿಸಿದ್ದಾರೆ.

ಲವಕೇಶ್ ಕಟಾರಿಯಾ: ʼಲವ್‌ ಕೇಶ್‌ʼ ಎಂದೇ ಖ್ಯಾತಿಯಾಗಿರುವ ಇವರು ಯೂಟ್ಯೂಬರ್‌ ಹಾಗೂ ಸೋಶಿಯಲ್‌ ಮೀಡಿಯಾ ಪ್ರಭಾವಿ ಆಗಿದ್ದಾರೆ. ಬಿಗ್‌ ಬಾಸ್‌ ಓಟಿಟಿ-2 ವಿಜೇತ ಎಲ್ವಿಶ್‌ ಯಾದವ್‌ ಅವರ ಆಪ್ತ ಸ್ನೇಹಿತನಾಗಿರುವ ಇವರು, ಕೆಲ ಆಲ್ಬಂ ಸಾಂಗ್‌ ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನೀರಜ್ ಗೋಯತ್: ಬಾಕ್ಸರ್‌ ಆಗಿರುವ ನೀರಜ್‌ ಗೋಯತ್‌ ಅವರು ಬಿಗ್‌ ಬಾಸ್‌ ಶೋನಲ್ಲಿ ಸ್ಪರ್ಧಿಯಾಗಿ ಎಂಟ್ರಿ ಆಗಿರುವುದು ಬಹುತೇಕರಿಗೆ ಆಶ್ಚರ್ಯ ತಂದಿದೆ. ನೀರಜ್ ಗೋಯತ್ ಬಾಕ್ಸರ್ ಮತ್ತು ಮಾರ್ಷಲ್ ಆರ್ಟ್ಸ್ ನಲ್ಲಿ ಗುರುತಿಸಿಕೊಂಡಿದ್ದಾರೆ. 2008 ರಲ್ಲಿ “ಭಾರತದ ಅತ್ಯಂತ ಭರವಸೆಯ ಬಾಕ್ಸರ್” ಪ್ರಶಸ್ತಿಯನ್ನು ಗೆದ್ದಿದ್ದರು. ಬಾಕ್ಸರ್‌ ಆಗಿ ಮಾತ್ರವಲ್ಲದೆ ಸಿನಿಮಾ ಹಾಗೂ ಮ್ಯೂಸಿಕ್‌ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸನಾ ಸುಲ್ತಾನ್:‌  ಮುಂಬಯಿ ಮೂಲದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಸನಾ ಸುಲ್ತಾನ್‌  ಮಾಡೆಲ್‌ ಆಗಿ ವೃತ್ತಿ ಜೀವನ ಆರಂಭಿಸಿ ಆ ಬಳಿಕ ಟಿಕ್‌ ಟಾಕ್‌ ನಲ್ಲಿ ಖ್ಯಾತಿಯನ್ನು ಗಳಿಸಿದವರು. ಹಲವಾರು ಪಂಜಾಬಿ ಮ್ಯೂಸಿಕ್‌ ವಿಡಿಯೋಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಶಿವಾನಿ ಕುಮಾರಿ: ಉತ್ತರ ಪ್ರದೇಶದ ಔರಿಯಾ ಜಿಲ್ಲೆಯ ಆರ್ಯಾರಿ ಗ್ರಾಮದವರಾದ ಶಿವಾನಿ ಟಿಕ್‌ ಟಾಕ್‌ ವಿಡಿಯೋಗಳಿಂದ ಖ್ಯಾತಿಯನ್ನು ಗಳಿಸಿದವರು. ತನ್ನ ತಾಯಿ ಹಾಗೂ ಸಹೋದರಿ ಜೊತೆ ಹಳ್ಳಿ ಬದುಕನ್ನು ತೋರಿಸುವ ಇವರ ವಿಡಿಯೋಗಳಿಗೆ ಅಪಾರ ವೀಕ್ಷಕರಿದ್ದಾರೆ.

ವಿಶಾಲ್‌ ಪಾಂಡೆ: ಮುಂಬಯಿ ಮೂಲದ ವಿಶಾಲ್‌ ಪಾಂಡೆ ತನ್ನ ಲಿಪ್‌ ಸಿಂಕ್‌ ವಿಡಿಯೋಗಳಿಂದಾಗಿ ಸೋಶಿಯಲ್‌ ಮೀಡಿಯಾದಲ್ಲಿ ಖ್ಯಾತಿಯನ್ನು ಗಳಿಸಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ 9 ಮಿಲಿಯನ್‌ ಫಾಲೋವರ್ಸ್‌ ಗಳನ್ನು ಹೊಂದಿರುವ ಇವರು ಕೆಲ ಮ್ಯೂಸಿಕ್‌ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

ದೀಪಕ್ ಚೌರಾಸಿಯಾ: ಹಲವಾರು ಸುದ್ದಿಸಂಸ್ಥೆಗಳಲ್ಲಿ ಪತ್ರಕರ್ತನಾಗಿ ವೃತ್ತಿಯನ್ನು ಮಾಡಿದ ದೀಪ್‌ ಚೌರಾಸಿಯಾ ಬಿಗ್‌ ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ.

ಮುನಿಶಾ ಖಟ್ವಾನಿ:  ಕಿರುತೆರೆ ನಟಿಯಾಗಿ ಗುರುತಿಸಿಕೊಂಡು, ‘ಜಸ್ಟ್ ಮೊಹಬ್ಬತ್’, ‘ವೈದೇಹಿ’, ‘ಅಪ್ನೆ ಪರಾಯೆ’, ಮತ್ತು ‘ತಂತ್ರ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ಮುನಿಶಾ ಟ್ಯಾರೋ ಕಾರ್ಡ್ ರೀಡರ್ ಮತ್ತು ಜ್ಯೋತಿಷ್ಯ ತಜ್ಞರಾಗಿಯೇ ಹೆಚ್ಚು ಮನ್ನಣೆ ಗಳಿಸಿದ್ದಾರೆ.

ಅರ್ಮಾನ್ ಮಲಿಕ್, ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್: ಯೂಟ್ಯೂಬರ್‌ ಆಗಿರುವ ಅರ್ಮಾನ್‌ ಮಲಿಕ್‌ ಅವರ ಹೆಸರು ಬಿಗ್‌ ಬಾಸ್‌ ಓಟಿಟಿ -2 ನಲ್ಲೇ ಕೇಳಿಬಂದಿತ್ತು. ಇದೀಗ ಓಟಿಟಿ ಮೂರನೇ ಸೀಸನ್‌ ನಲ್ಲಿ ಅವರು ತನ್ನ ಪತ್ನಿಯರಾದ ಪಾಯಲ್‌ ಹಾಗೂ ಕೃತಿಕಾ ಮಲಿಕ್‌ ಅವರೊಂದಿಗೆ ಬಿಗ್‌ ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ.

ನೇಜಿ ಅಕಾ ನಾವೇದ್ ಶೇಖ್:

ನೇಜಿ ಅಥವಾ ಬಾ ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ನಾವೇದ್ ಶೇಖ್ ಅವರು ಮುಂಬೈ ಮೂಲದ ರ್‍ಯಾಪರ್ ಆಗಿದ್ದು, ಅವರು ಸ್ಟ್ರೀಟ್ ಹಿಪ್-ಹಾಪ್ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯದ ‘ಗಲ್ಲಿ ಬಾಯ್’ ಚಿತ್ರಕ್ಕೆ ಇವರ ಜೀವನ ಸ್ಫೂರ್ತಿ ನೀಡಿತು.

 

Advertisement

Udayavani is now on Telegram. Click here to join our channel and stay updated with the latest news.

Next