Advertisement

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

11:04 PM Dec 23, 2024 | Team Udayavani |

ಬೆಂಗಳೂರು: ಎಲಿಮಿನೇಟ್ ಎಂದು ಮನೆಯಿಂದ ಆಚೆ ಹೋಗಿದ್ದ ತ್ರಿವಿಕ್ರಮ್ ಅವರನ್ನು ಮತ್ತೆ ಒಳಗೆ ಕರೆಸಲಾಗಿದೆ.

Advertisement

ಕಳೆದ ವಾರ ಎರಡು ಎಲಿಮಿನೇಷನ್ ಇದ್ದ ಕಾರಣಕ್ಕೆ ತ್ರಿವಿಕ್ರಮ್ ಅವರು ಎಲಿಮಿನೇಟ್ ಆಗಿಲ್ಲ. ಅವರು ಬರುವಾಗ ನೀವ್ಯಾರು ಅವರ ಮಾತಿಗೆ ರಿಯಾಕ್ಟ್ ಮಾಡಬಾರದು ಎಂದು ಕಿಚ್ಚ ಹೇಳಿದ್ದಾರೆ. ಅದರಂತೆ ತ್ರಿವಿಕ್ರಮ್ ಒಳಗೆ ಬಂದಾಗ ಯಾರು ಕೂಡ ಕಿಚ್ಚ ಕೂಡ ಟಾಸ್ಕ್ ಮರೆಯದೇ ಮಾತನಾಡದೆ ಕೂತಿದ್ದಾರೆ.

ಚೈತ್ರಾ ಅವರು ಕನ್ಪೆಷನ್ ರೂಮ್ ಬಳಿ ಹೋಗಿದ್ದು, ಇದಕ್ಕೆ ಕಿಚ್ಚ ನೀವೆಲ್ಲರೂ ಡೈರೆಕ್ಟರ್ ಗಳೇ ಎಂದಿದ್ದಾರೆ. ಇದಕ್ಕೆ ಚೈತ್ರಾ ಹಾಗೆ ಇಲ್ಲ ಅಲ್ಲಿ ಸದ್ದು ಬಂತು ತ್ರಿವಿಕ್ರಮ್ ಬಂದ್ರು ಅನ್ಕೊಂಡೆ ಅದಕ್ಕೆ ಹೋದೆ ಎಂದಿದ್ದಾರೆ ‌

ಇನ್ನೊಂದು ಕಡೆ ಚೈತ್ರಾ ಅವರು ತನ್ನ ಮಾತಿನಿಂದ ಎಲ್ಲರಿಗೂ ನೋವು ಆಗುತ್ತದೆ ಎಂದು ಒಬ್ಬರೇ ಕೂತು ಕಣ್ಣೀರಿಟ್ಟಿದ್ದಾರೆ. ಇದಕ್ಕೆ ಭವ್ಯ ನಿಮ್ಮ ಜೋರು ಧ್ವನಿ ಕಿರುಕಿರಿ ಹಾಗೆ ಇರುತ್ತದೆ. ಅದಕ್ಕೆ ಎಲ್ಲರೂ ಹಾಗೆ ಹೇಳುತ್ತಾರೆ ಅಂಥ ಧೈರ್ಯ ತುಂಬಿದ್ದಾರೆ. ನನಗೆ ಫೇಮ್ – ನೇಮ್ ಎಲ್ಲ ತಂದುಕೊಟ್ಟದ್ದು ಮಾತೇ ಎಂದು ಚೈತ್ರಾ ಹೇಳಿದ್ದಾರೆ.

ಮುಖಕ್ಕೆ ಕಾಪಿ ಎರಚಿ ಎಚ್ಚೆತ್ತುಕೊಳ್ಳಿ..
ಬಿಗ್ ಬಾಸ್ ಸ್ಪರ್ಧಿಗಳಿಗೆ ಟಾಸ್ಕ್ ನೀಡಲಾಗಿದ್ದು, ಅದರಂತೆ ಸ್ಪರ್ಧಿಗಳು ಮುಖಕ್ಕೆ ಕಾಫಿ ಎರಚಿ ‌ಯಾರು ದೊಡ್ಮನೆಯಲ್ಲಿ ಎಚ್ಚೆತ್ತುಕೊಳ್ಳಬೇಕೆಂದು ಹೇಳಬೇಕು.

Advertisement

ರಜತ್ ಅವರು ಗೌತಮಿ ಅವರ ಹೆಸರು ತೆಗೆದು ನೀವು ನಿಮ್ಮ ವೈಯಕ್ತಿಕ ಆಟವನ್ನು ಆಗಬೇಕೆಂದು ಮುಖಕ್ಕೆ ಕಾಫಿ ಎರಚಿದ್ದಾರೆ. ಇನ್ನೊಂದು ‌ಕಡೆ ಗೌತಮಿ ಅವರು ಮಂಜು ಮುಖಕ್ಕೆ ‌ಕಾಫಿ ಎರಚಿ ನೀವು ನಿಮ್ಮ ಆಟವನ್ನು ಆಡುತ್ತಿಲ್ಲ. ಯೂಟರ್ನ್ ತೆಗೆದು‌ ನಿಮ್ಮ ಆಟವನ್ನು ಆಡಬೇಕು. ಗೌತಮಿ ಅವರು ಇದ್ದಾಗ ಮಂಜು ಮಾತನಾಡಲ್ಲ. ಗೌತಮಿ ಅವರಿಗೆ ಹೆದರಿಕೊಳ್ಳುತ್ತಾರೆ. ಹಾಗಾಗಿ ಅವರು ಎಚ್ಚೆತ್ತುಕೊಳ್ಳಬೇಕೆಂದು ಹೇಳಿದ್ದಾರೆ.

ಐಶ್ವರ್ಯಾ ಅವರು ಚೈತ್ರಾ ಅವರ ಹೆಸರು ಹೇಳಿದ್ದಾರೆ. ನಿಮ್ಮ ಆಟಗಳಿಗೆ ನಾನು ಬಲಿಪಶು ಆದೆ ಈ ವಾರ ಎಂದಿದ್ದು, ಇದಕ್ಕೆ ಚೈತ್ರಾ ಅವರು, ಟಾರ್ಗೆಟ್‌ ನಾಮಿನೇಷನ್‌ ಎನ್ನುವ ಮಾತು ಇದೇ ಐಶ್ವರ್ಯಾ ಅವರ ಬಾಯಿಯಿಂದಲೇ ಬಂದಿದ್ದು ಎಂದಿದ್ದಾರೆ. ಐಶ್ವರ್ಯಾ ಅವರು, ಹೇ ತುಂಬಾ ಚೆನ್ನಾಗಿ ಸುಳ್ಳು ಹೇಳ್ತಾನೇ ಇದ್ದೀರಾ. ಬಾಯಿ ಮುಚ್ಚೆ ಸಾಕು ಎಂದು ಗರಂ ಆಗಿ ಹೇಳಿದ್ದಾರೆ. ಇತ್ತ ಚೈತ್ರಾ ಅವರು ನೀನ್ಯಾರು ನನಗೆ ಹೇ ಎನ್ನೋಕೆ. ಬಾಯಿ ಮುಚ್ಚು ಎಲ್ಲ ಹೇಳಿದ್ರೆ ಸುಮ್ಮನೇ ಇರಲ್ಲ. ಮುಚ್ಚುಕೊಂಡು ಇರು ನೀನು ಎಂದು ಚೈತ್ರಾ ಮೇಜಿಗೆ ಕೈ ಬಡಿದಿದ್ದಾರೆ. ಪರಿಣಾಮ ಅವರ ಬಳೆ ಒಡೆದು ಹೋಗಿದೆ. ಚೈತ್ರಾ ಅವರ ಕೋಪ ನೋಡಿ ಮನೆಮಂದಿ ಶಾಕ್‌ ಆಗಿದ್ದಾರೆ.

ನಿಮ್ಮ ಭಾಷಣವನ್ನು ಹೊರಗಡೆ ಹೋಗಿ ಮಾಡು. ಇಲ್ಲಿ ಮಾಡ್ಬೇಡ ಎಂದು ಐಶ್ವರ್ಯಾ ಹೇಳಿದ್ದು, ಇದಕ್ಕೆ ಚೈತ್ರಾ ಗರಂ ಆಗಿದ್ದಾರೆ. ಬಾಯಿ ಮುಚ್ಕೊಂಡು ಇರಿ ಅಂಥ ಹೇಳ್ಬೇಡ. ನನಗೆ ಇವರು ಯಾರು ಹೇಳೋಕೆ. ನೀನು ಭಾಷಣನೂ ಹೊರಗಡೆ ಹೋಗಿ ಮಾಡು‌ ಎಂದು ತಿರುಗೇಟು ನೀಡಿದ್ದಾರೆ.

ನೀವು ಬೇರೆಯವರಿಗೆ ಬಕೆಟ್, ಸಿನ್ ಟೆಕ್ಸ್ ಟ್ಯಾಂಕ್ ಇಟ್ಕೊಳೋದು ಅಂದ್ರೆ ನೀವೇ ಈ ಮನೆಯಲ್ಲಿ. ಶಿಶಿ ಅವರು ಹೊರಗೆ ಹೋದ್ಮೇಲೆ ನಿಮ್ಮ ಆಟವನ್ನು ಬದಲಿಸಿದ್ದೀರಿ. ಫ್ರೆಂಡ್ ಶಿಪ್ ಬದಲಾಯಿಸಿದ್ದೀರಿ ಎಂದು ಐಶ್ವರ್ಯಾ ಹೇಳಿದ್ದಾರೆ. ನೀವು ನನ್ನನ್ನು ಬಲಿಪಾಶು ಮಾಡಿದ್ದೀರಿ.

ನನಗೆ ಯಾರಿಗೂ ಸಮರ್ಥನೆ ನೀಡುವ ಅಗತ್ಯ ಇಲ್ಲವೆಂದು ಚೈತ್ರಾ ಹೇಳಿದ್ದಾರೆ. ನೀನು ನಾಟಕ ಎಲ್ಲ ಶುರು ಮಾಡಿದ್ದು ಎಂದಿದ್ದಾರೆ.

ಒಬ್ಬರನ್ನು ಒಬ್ಬರು ಅಂಗಿಸಿಕೊಂಡು ಇಬ್ಬರು ವಾಗ್ವಾದವನ್ನೇ ನಡೆಸಿದ್ದಾರೆ. ಇವರಿಬ್ಬರ ಮಾತನ್ನು ಕೇಳಿ ಮನೆ ಮಂದಿ ಸುಸ್ತಾಗಿದ್ದಾರೆ.

ನೀನು ನರಿ ಎಂದು ಐಶ್ವರ್ಯಾ ಹೇಳಿದ್ದಾರೆ. ಇದಕ್ಕೆ ಚೈತ್ರಾ ನರಿ – ಕೋಣ ಎಲ್ಲ ನೀನೇ ಎಂದು ಚೈತ್ರಾ ಹೇಳಿದ್ದಾರೆ.

ಮಂಜು ಅವರು ಚೈತ್ರಾ ಅವರ ಮುಖಕ್ಕೆ ಎಚ್ಚೆತ್ತುಕೊಳ್ಳಿ. ಯಾರ ಹತ್ರ ಹೇಗೆ ಮಾತನಾಡಬೇಕು ಎನ್ನುವುದು ಕಲಿಯಿರಿ ಎಂದು ಮಂಜು ಹೇಳಿದ್ದಾರೆ.

ಮೋಕ್ಷಿತಾ ಅವರು‌ ಮಂಜು ಅವರಿಗೆ ನೀವು ಮೊದಲಿನ ಮಂಜಣ್ಣ ಆಗಿ ಇಲ್ಲ. ನೀವು ಎಚ್ಚೆತ್ತುಕೊಳ್ಳಬೇಕೆಂದು ಮುಖಕ್ಕೆ ‌ಕಾಫಿ ಎರಚಿಕೊಳ್ಳಬೇಕೆಂದಿದ್ದಾರೆ.

ಇನ್ನು ‌ಹನುಮಂತು ಅವರು ಚೈತ್ರಾ ಅವರ ಮುಖಕ್ಕೆ ಕಾಫಿ ಎರಚಿದ್ದಾರೆ. ತ್ರಿವಿಕ್ರಮ್ ಅವರು ಮೋಕ್ಷಿತಾ ಅವರ ಮುಖಕ್ಕೆ ನೀವು ‌ನಿಮ್ಮ ಆಟವನ್ನು ಆಡಬೇಕೆಂದು ಕಾಫಿ ಎರಚಿದ್ದಾರೆ.

ಧನರಾಜ್ ಅವರು ಹನುಮಂತು ಅವರ ಮುಖಕ್ಕೆ ಕಾಫಿ ಎರಚಿದ್ದಾರೆ. ಇಷ್ಟು ದಿನ ಹನುಮಂತು ಬುದ್ದಿವಂತರಾಗಿದ್ದರು. ಆದರೆ ಕಳೆದ ವಾರದ ಅವರ ಪರ್ಫೆಮೆನ್ಸ್ ಡಲ್ ಆಯಿತೆಂದು ಹೇಳಿದ್ದಾರೆ. ಮೊದಲಿನ ಹನುಮಂತು ನೀವು ಆಗಬೇಕೆಂದು ಹೇಳಿದ್ದಾರೆ.

ಭವ್ಯ ಅವರು ಐಶ್ವರ್ಯಾ ಅವರ ಮುಖಕ್ಕೆ ಕಾಫಿ ಎರಚಿದ್ದಾರೆ. ಇನ್ನು ಚೈತ್ರಾ ಅವರು ಐಶ್ವರ್ಯಾ ಅವರಿಗೆ ನೀವು ‌ಕಳೆದ ಎರಡು ವಾರಗಳಿಂದ ನಿಮ್ಮ ಆಟವನ್ನು ಆಡುತ್ತಿಲ್ಲ. ನೀವು ಯಾಕೆ ನನ್ನನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದೀರಿ ಅಂಥ ಗೊತ್ತಿಲ್ಲವೆಂದು ಹೇಳಿ ಮುಖಕ್ಕೆ ಕಾಫಿ ಎರಚಿದ್ದಾರೆ.

ನಿಮ್ಮ ಹತ್ರ ಮಾತನಾಡೋದೆ ವೇಸ್ಟ್. ಟಿಶ್ಯು‌ ಪೇಪರ್ ವೇಸ್ಟು. ನೀವು ಹೇಳಿದ ಮಾತುಗಳು ನಿಮ್ಮ ಆತ್ಮಸಾಕ್ಷಿಗೆ ಗೊತ್ತಿದೆ ಎಂದು ಚೈ ಅವರಿಗೆ ಹೇಳಿದ್ದಾರೆ.

ಇಷ್ಟು ದಿನ ಸ್ನೇಹಿತರಂತಿದ್ದ ಧನರಾಜ್‌ ಅವರು ಹನುಮಂತು ಅವರ ಮುಖಕ್ಕೆ ಕಾಫಿ ಎಸೆದಿದ್ದಾರೆ. ರಜತ್‌ ಅವರು ಗೌತಮಿ ಮುಖಕ್ಕೆ ಕಾಫಿ ಎಸೆದಿದ್ದು, ಮಂಜು ಅವರು ಚೈತ್ರಾ ಅವರಿಗೆ, ಭವ್ಯ ಅವರು ಐಶ್ವರ್ಯಾ ಅವರ ಮುಖಕ್ಕೆ ಕಾಫಿ ಎಸೆದಿದ್ದಾರೆ.

ಭವ್ಯ ಕ್ಯಾಪ್ಟನ್ ಆಗಿರೋದು ತ್ರಿವಿಕ್ರಮ್ ಗೆ ಚೂರು ಇಷ್ಟವಿಲ್ಲ ಮೇಲ್ನೋಟಕ್ಕೆ ಖುಷಿಯಾಗಿದ್ದಾನೆ ಎಂದು ಮಂಜು ಗೌತಮಿ, ಮೋಕ್ಷಿತಾ ಬಳಿ ಮಾತನಾಡುತ್ತಾ ಹೇಳಿದ್ದಾರೆ.

ಸೊಂಟ ನೋವೆಂದು ಮಲಗಿದ್ದಕ್ಕೆ ತ್ರಿವಿಕ್ರಮ್ ಅವರಿಗೆ ಭವ್ಯ ಅವರು ಲೋಟಕ್ಕೆ ನೀರು ತುಂಬಿಸುವ ಶಿಕ್ಷೆ ನೀಡಿದ್ದು, ಇದಕ್ಕೆ ತ್ರಿವಿಕ್ರಮ್ ನಿಮಗೆ ಬೇಕಾದಗ ರೂಲ್ಸ್ ಚೇಂಜ್ ಮಾಡೋದಲ್ಲ ಎಂದು ಭವ್ಯ ಜತೆ ವಾಗ್ವಾದ ನಡೆಸಿದ್ದಾರೆ.

ಮನೆಯ ದಿನಸಿಗಾಗಿ ಬಿಗ್ ಬಾಸ್ ಟಾಸ್ಕ್ ವೊಂದನ್ನು ‌ನೀಡಿದ್ದು, ಇದರಲ್ಲಿ ‌ಒಂಬತ್ತನೇ ಸದಸ್ಯನಾಗಿದ್ದ ತ್ರಿವಿಕ್ರಮ್ ಅವರು ಚೌಕಟ್ಟಿನ ಹೊರಗೆ ನಿಂತು ಚೆಂಡನ್ನು ಸಂಗ್ರಹಿಸಿದ ಕಾರಣಕ್ಕೆ ಮೂರು ಬಕೆಟ್ ದಿನಸಿಯನ್ನು ವಾಪಾಸು ತೆಗೆದುಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next