Advertisement
ಈ ವಾರ ಬಿಗ್‌ಬಾಸ್ ಮನೆ ಸುದ್ದಿ ವಾಹಿನಿಗಳಾಗಿ ಬದಲಾಗಿದೆ. ಎರಡು ತಂಡಗಳಾಗಿ ಸ್ಪರ್ಧಿಗಳನ್ನು ವಿಂಗಡಿಸಲಾಗಿದೆ. ಒಂದೊಂದು ಸುದ್ದಿ ವಾಹಿನಿಗೆ ಹೆಸರನ್ನು ನೀಡಲಾಗಿದೆ. ಸುರೇಶ್, ತ್ರಿವಿಕ್ರಮ್ , ಭವ್ಯ, ಐಶ್ವರ್ಯ, ಗೌತಮಿ ಹಾಗೂ ಮಂಜಣ್ಣ ಒಂದು ತಂಡದಲ್ಲಿದ್ದರೆ, ಇನ್ನೊಂದು ತಂಡದಲ್ಲಿ ಧನರಾಜ್, ಹನುಮಂತ, ಶಿಶಿರ್, ರಜತ್, ಮೋಕ್ಷಿತಾ ಹಾಗೂ ಚೈತ್ರಾ ಅವರಿದ್ದಾರೆ.
Related Articles
Advertisement
ಶಿಶಿರ್ ಅವರು ಐಶ್ವರ್ಯಾ ಅವರಿಗೆ ಮೂರು ಹಾಗಲಕಾಯಿ ತಿನ್ನುವಂತೆ ಹೇಳಿದ್ದಾರೆ. ಐಶ್ವರ್ಯಾ ಅವರು ಸವಾಲು ಸ್ವೀಕರಿಸಿ ಕಷ್ಟಪಟ್ಟು ಹಾಗಲಕಾಯಿ ತಿಂದಿದ್ದಾರೆ. ಇನ್ನು ಗೌತಮಿ ಅವರಿಗೆ ಮೆಣಸಿನ ಕಾಯಿ ತಿನ್ನುವ ಸವಾಲು ನೀಡಲಾಗಿದೆ. ಗೌತಮಿ ಇದಕ್ಕೆ ಒಪ್ಪಿ ಮೆಣಸಿನ ಕಾಯಿ ತಿಂದಿದ್ದಾರೆ. ಆದರೆ ಆ ಬಳಿಕ ಖಾರ ನೆತ್ತಿಗೇರಿ ಕೆಮ್ಮುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ತ್ರಿವಿಕ್ರಮ್ ಶಿಶಿರ್ ಅವರು ರಜತ್ ಅವರನ್ನು ಬೆನ್ನು ಮೇಲೆ ನಿಲ್ಲಿಸಿ ಪ್ಲ್ಯಾಂಕ್ ಮಾಡಬೇಕೆಂದು ಸವಾಲು ಹಾಕಿದ್ದಾರೆ. ಇದಕ್ಕೆ ಚೈತ್ರಾ ಅವರಿಗೆ ಡಿಸ್ ಲೊಕೆಟ್ ಆಗಿದೆ ಎಂದು ಸುರೇಶ್ ಅವರ ಹೇಳಲು ಹೋಗಿದ್ದಾರೆ. ಈ ಮಧ್ಯ ತ್ರಿವಿಕ್ರಮ್ ಅವರು ನಾವು ಮಾಡಿ ತೋರಿಸುತ್ತೇವೆ ಎಂದಾಗ ಚೈತ್ರಾ ಮುಚ್ಚಿಕೊಂಡು ಕೂರಬೇಕು ಎಂದಿದ್ದಾರೆ.