Advertisement
ಮೋಕ್ಷಿತಾ ಅವರು ಎಲಿಮಿನೇಷನ್ ವಿಚಾರದಲ್ಲಿ ಬೇಸರದಲ್ಲಿದ್ದಾಗ, ಮಂಜು ಅವರು ಬಂದು ನೀವು ಹಾಗೂ ಭವ್ಯಾ ಫಿನಾಲೆವರೆಗೂ ಬರುತ್ತೀರಿ ತಲೆ ಕೆಡಿಸಿಕೊಳ್ಳಬೇಡಿ ಎಂದು ಸಮಾಧಾನ ಪಡಿಸಿದ್ದಾರೆ.
Related Articles
Advertisement
ಮಂಜು ಅವರಿಗೆ ಬಿಗ್ ಬಾಸ್ ಮತ್ತೊಂದು ಟಾಸ್ಕ್ ನೀಡಿದ್ದಾರೆ. ಅದರಂತೆ ಮಂಜು ಅವರು ಧನರಾಜ್, ಗೌತಮಿ ಹಾಗೂ ಮೋಕ್ಷಿತಾ ಅವರನ್ನು ಎದುರಾಳಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಈ ಟಾಸ್ಕ್ ಮೊದಲಿಗೆ ಧನರಾಜ್ ಅವರು ಪೂರ್ತಿಗೊಳಿಸಿದ್ದಾರೆ. ಎರಡನೇದಾಗಿ ಗೌತಮಿ ಅವರು, ಮೂರನೆಯದಾಗಿ ಮಂಜು ಅವರು ಪೂರ್ತಿಗೊಳಿಸಿದ್ದಾರೆ.
ನಿಮ್ಮ ಅವಶ್ಯಕತೆ ನನ್ನಗಿಲ್ಲ.. ಭವ್ಯಾ – ತಿವಿಕ್ರಮ್ ವಾಗ್ವಾದ:ಸೆಡೆ ಎಂದು ತಿವಿಕ್ರಮ್ ಅವರು ಭವ್ಯಾ ಅವರಿಗೆ ಹೇಳಿದ್ದಾರೆ. ಇದಕ್ಕೆ ಭವ್ಯಾ ಈ ರೀತಿ ಮಾತನಾಡಬೇಡಿ . ನಿಮ್ಮ ಹತ್ರ ತಾಕತ್ ಇದ್ರೆ ಟೀಮ್ ಅಪ್ ಆಗಿ ಆಡಿ. ನಿನ್ನ ಅವಶ್ಯಕತೆ ನನಗಿಲ್ಲವೆಂದು ತಿವಿಕ್ರಮ್ ಹೇಳಿದ್ದಾರೆ. ಇದಕ್ಕೆ ಭವ್ಯಾ ನಿಮ್ಮ ಅವಶ್ಯಕತೆಯೂ ನನಗಿಲ್ಲವೆಂದು ಹೇಳಿದ್ದಾರೆ. ನಾನು ನಿನ್ನ ಹತ್ರ ಮಾತನಾಡಿಲ್ಲವೆಂದು ಇಬ್ಬರು ಮಾತಿಗೆ ಮಾತು ಬೆಳೆಸಿದ್ದಾರೆ. ಈ ಮನೆಯಲ್ಲಿ ನಾನು ಯಾರ ಜತೆ ಮಾತನಾಡಬೇಕೆಂದು ನನಗೆ ನೀವು ಹೇಳಬೇಕಾಗಿಲ್ಲವೆಂದು ಗೌತಮಿ ಮಂಜು ಅವರಿಗೆ ಹೇಳಿದ್ದಾರೆ. ನಾನು ಮಿಡ್ ವೀಕ್ ಅಲ್ಲಿ ಹೋಗುತ್ತೇನೆ. ನೀವಿಬ್ಬರು ಫಿನಾಲೆಗೆ ಹೋಗಬೇಕೆಂದು ಮಂಜು ಹೇಳಿದ್ದಾರೆ. ನೀವು ಗೌತಮಿ ಜತೆ ಸೇರಿಕೊಂಡು ಹಾಳಾಗಿದ್ದೀರಿ ಎಂದು ಭವ್ಯಾ ಅವರು ಮಂಜುಗೆ ಹೇಳಿದ್ದಾರೆ. ಇದಕ್ಕೆ ಮಂಜು ಇದು ತಪ್ಪು ಹೇಳಿಕೆ ನಾನು ಯಾರ ಜತೆ ಸೇರಿಯೂ ಹಾಳಾಗಿಲ್ಲವೆಂದಿದ್ದಾರೆ. ಮಿಡ್ ವೀಕ್ ಎಲಿಮಿನೇಷನ್ ನಿಂದ ಪಾರಾಗಲು ಬಿಗ್ ಬಾಸ್ ಮನೆ ಮಂದಿಗೆ ಟಾಸ್ಕ್ ವೊಂದನ್ನು ನೀಡಿದ್ದಾರೆ. ಈ ಟಾಸ್ಕ್ ಗೆದ್ದ ಸದಸ್ಯರು 100 ಅಂಕ ಪಡೆಯವುದರ ಜತೆ ಉಳಿದ ಸದಸ್ಯರ ಶೇ.50 ರಷ್ಟು ಅಂಕ ಕಸಿಯುವ ಅಧಿಕಾರವನ್ನು ಪಡೆಯಲಿದ್ದಾರೆ. ಧನರಾಜ್ ಅವರು ಅಂತಿಮ ಟಾಸ್ಕ್ ಗಾಗಿ ಎದುರಾಳಿಯಾಗಿ ರಜತ್, ತಿವಿಕ್ರಮ್, ಮೋಕ್ಷಿತಾ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೂವರ ನಡುವೆ ಪೈಪೋಟಿ ನಡೆದಿದೆ. ‘ಬಿಗ್ ಬಾಸ್’ ಪಜಲ್ ಜೋಡಣೆಯಲ್ಲಿ ಧನರಾಜ್ ಅವರು ಮೊದಲು ಟಾಸ್ಕ್ ಪೂರ್ತಿಗೊಳಿಸಿದ್ದಾರೆ. ಎರಡನೇದಾಗಿ ತಿವಿಕ್ರಮ್ ಅವರು ಟಾಸ್ಕ್ ಪೂರ್ತಿಗೊಳಿಸಿದ್ದಾರೆ. ಮೂರನೆಯದಾಗಿ ರಜತ್ ಅವರು ಪೂರ್ತಿಗೊಳಿಸಿದ್ದಾರೆ. ಆದರೆ ನೀವು ಜೋಡಿಸಿದರಲ್ಲಿ ತಪ್ಪಿದೆ ಎಂದು ರಜತ್ ಅವರಿಗೆ ಹೇಳಿದ್ದು, ಅದಕ್ಕೆ ಮೋಕ್ಷಿತಾ ಅವರು ಬೆಲ್ ಹೊಡೆದಿದ್ದಾರೆ. ಧನರಾಜ್ ಅವರು ಭವ್ಯಾ ಅವರ ಅರ್ಧ ಪಾಯಿಂಟ್ಸ್ ಕಸಿದುಕೊಂಡಿದ್ದಾರೆ. ಧನರಾಜ್ ಅವರು 440 ಪಾಯಿಂಟ್ಸ್ ಗಳನ್ನು ಪಡೆದು ವಾರದ ಟಾಸ್ಕ್ ನಲ್ಲಿ ಗೆದ್ದು ಎಲಿಮಿನೇಷನ್ ನಿಂದ ಪಾರಾಗಿದ್ದಾರೆ. ಭವ್ಯಾ, ಗೌತಮಿ, ಮಂಜು, ಗೌತಮಿ, ತಿವಿಕ್ರಮ್, ರಜತ್ ಅವರು ನಾಮಿನೇಷನ್ ನಲ್ಲಿ ಉಳಿಯಲಿದ್ದಾರೆ. ಇವರುಗಳ ಪೈಕಿ ಒಬ್ಬರು ಮಿಡ್ ವೀಕ್ ಎಲಿಮಿನೇಷನ್ ಆಗಲಿದ್ದಾರೆ.