ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದಲ್ಲಿ ಇಂದು ಮೂರನೇ ಸ್ಪರ್ಧಿ ಮನೆಯಿಂದ ಹೊರಬೀಳಲಿದ್ದಾರೆ. ಹೊರಬಿದ್ದಿರುವ ಮಾಹಿತಿ ಪ್ರಕಾರ ವೀಕ್ಷಕರ ಊಹೆಗೂ ಮೀರಿದ ಸ್ಪರ್ಧಿಯೊಬ್ಬರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ.
ಈ ವಾರದ ಕಿಚ್ಚನ ಪಂಚಾಯತ್ ನಲ್ಲಿ ವಿನಯ್ ಅವರ ಬಳೆ ಹೇಳಿಕೆ ಚರ್ಚೆ ಆಗಿದೆ. ಇದರೊಂದಿಗೆ ನಾಮಿನೇಷನ್ ಸೇರಿದಂತೆ ಅನೇಕ ವಿಚಾರಗಳ ಚರ್ಚೆ ಆಗಿದೆ. ನಾಮಿನೇಷನ್ ಆದ ಸ್ಪರ್ಧಿಗಳಲ್ಲಿ ಕೆಲವರು ಸೇಫ್ ಆಗಿದ್ದು, ಇಂದು ನಡೆಯುವ ಕಾರ್ಯಕ್ರಮದಲ್ಲಿ ಮನೆಯಿಂದ ಹೊರಬರುವ ಸ್ಪರ್ಧಿಯ ಹೆಸರು ಹೊರಬೀಳಲಿದೆ.
ಸಿರಿ, ತುಕಾಲಿ ಸಂತೋಷ್, ವರ್ತೂರು ಸಂತೋಷ್, ಕಾರ್ತಿಕ್, ತನಿಷಾ ಮೈಕೆಲ್ ರಕ್ಷಕ್, ವಿನಯ್, ಸ್ನೇಹಿತ್ ಈ ವಾರ ನಾಮಿನೇಟ್ ಆಗಿದ್ದರು. ಇದರಲ್ಲಿ ಸಿರಿ, ವರ್ತೂರು ಸಂತೋಷ್ ಹಾಗೂ ಕಾರ್ತಿಕ್ ಸೇಫ್ ಆಗಿದ್ದಾರೆ. ಇನ್ನುಳಿದವರ ಭವಿಷ್ಯ ಇಂದು ಗೊತ್ತಾಗಲಿದೆ.
ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಬಿಗ್ ಬಾಸ್ ಮನೆಯಿಂದ ರಕ್ಷಕ್ ಬುಲೆಟ್ ಅವರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಅವರು ಮನೆಯ ಕ್ಯಾಪ್ಟನ್ ಕೂಡ ಆಗಿದ್ದರು. ಅವರ ಬಳಿಕ ಅವರು ಮನೆಯ ಯಾವ ಚಟುವಟಿಕೆಯಲ್ಲಿ ಅಷ್ಟು ಸಕ್ರಿಯವಾಗಿ ಭಾಗಿಯಾಗಿರಲಿಲ್ಲ. ಮೇಲಾಗಿ ಈ ಬಗ್ಗೆ ಕಿಚ್ಚ ಕೂಡ ಮಾತನಾಡಿದ್ದರು
ಕಿಚ್ಚನ ತಿಳುವಳಿಕೆಯ ಹೊರತಾಗಿಯೂ ರಕ್ಷಕ್ ಆಗಿ ಮನೆಯಲ್ಲಿ ಹಾಗೂ ವೀಕ್ಷಕರ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಈ ವಾರ ಅವರು ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದೆ.
ಬಿಗ್ ಬಾಸ್ ಮನೆಯಿಂದ ರಕ್ಷಕ್ ಹೊರಬಂದಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈಗಾಗಲೇ ಈ ಸೀಸನ್ ನಲ್ಲಿ ಸ್ನೇಕ್ ಶ್ಯಾಮ್ ಹಾಗೂ ಗೌರೀಶ್ ಅಕ್ಕಿ ಅವರು ಎಲಿಮಿನೇಟ್ ಆಗಿದ್ದಾರೆ.