Advertisement
ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗುರುಗ್ರಾಮ್ ಪೊಲೀಸರು ಬಿಗ್ ಬಾಸ್ ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಯಾದವ್ ನನ್ನ ಬೆನ್ನುಮೂಳೆ ಮುರಿಯಲು ಯತ್ನಿಸಿದ್ದಾರೆ ಎಂದು ಸಾಗರ್ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಎಲ್ವಿಶ್ ಯಾದವ್ ಗೆ ಸಾಗರ್ ಠಾಕೂರ್ ಪರಿಚಯವಿತ್ತು ಆದರೆ ಕಳೆದ ಕೆಲ ಸಮಯಗಳಿಂದ ಎಲ್ವಿಶ್ ಯಾದವ್ ಅವರು ತನ್ನ ಚಾನೆಲ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಾಗರ್ ಹೇಳಿದ್ದರು ಅದೂ ಅಲ್ಲದೆ ನಾನಾ ಪ್ರಖ್ಯಾತಿಯೂ ಕುಂದಿತ್ತು ಎಂದು ಸಾಗರ್ ಹೇಳ್ಕೊಂಡಿದ್ದರು ಇತ್ತೀಚಿಗೆ ಎಲ್ವಿಶ್ ಯಾದವ್ ತನ್ನನ್ನು ಭೇಟಿಯಾಗುವಂತೆ ಹೇಳಿದ್ದರು ಅದರಂತೆ ನಾನು ಒಂದು ರೆಸ್ಟೋರೆಂಟ್ ನಲ್ಲಿ ಅವರಿಗಾಗಿ ಕಾಯುತ್ತಿದ್ದೆ ಈ ವೇಳೆ ಎಂಟು ಹತ್ತು ಮಂದಿಯ ಜೊತೆಗೆ ಬಂದಿದ್ದ ಎಲ್ವಿಶ್ ಗೆ ನಾನು ವಿಶ್ ಮಾಡಲು ಹೋದೆ ಅವಾಗ ಏಕಾಏಕಿ ಎಲ್ವಿಶ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಅಲ್ಲದೆ ಆತನ ಜೊತೆಗಿದ್ದ ಇತರರು ನನ್ನ ಮೇಲೆ ಹಲ್ಲೆ ನಡೆಸಿದ್ದು ನನ್ನ ತುಟಿ, ಕೈ, ಬೆನ್ನಿನ ಮೇಲೆ ಹಲ್ಲೆ ನಡೆಸಿದ್ದಾರೆ.
Related Articles
Advertisement
ಎಲ್ವಿಶ್ ನನ್ನು ಬಂಧಿಸುವಂತೆ ಆಗ್ರಹಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿದ್ದ ಎಲ್ವಿಶ್ ಯಾದವ್ ವಿರುದ್ಧ ನೆಟ್ಟಿಗರು ಗರಂ ಆಗಿದ್ದರೆ ಅಲ್ಲದೆ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎಲ್ವಿಶ್ ನನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ. ಪ್ರಕರಣ ದಾಖಲು:
ಸಾಗರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಗುರುಗ್ರಾಮ್ ಪೊಲೀಸರು ಎಲ್ವಿಶ್ ವಿರುದ್ಧ ಐಪಿಸಿಯ ಸೆಕ್ಷನ್ 147 (ಗಲಭೆಗೆ ಶಿಕ್ಷೆ), 149 (ಕಾನೂನುಬಾಹಿರ ಸಭೆ), 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.