Advertisement

Bigg Boss 7 Telugu: ಬಿಗ್‌ ಬಾಸ್‌ ನಲ್ಲಿ ಸ್ಪರ್ಧಿಯಾದ 90ರ ಮೋಹಕ ನಟಿ ಶಕೀಲಾ

06:24 PM Sep 04, 2023 | Team Udayavani |

ಹೈದರಾಬಾದ್: ಟಿವಿ ಜಗತ್ತಿನ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ʼಬಿಗ್‌ ಬಾಸ್‌ʼ ತೆಲುಗಿನಲ್ಲಿ 7ನೇ ಸೀಸನ್‌ ಭಾನುವಾರ(ಸೆ.3 ರಂದು) ಆರಂಭವಾಗಿದೆ. ಟಾಲಿವುಡ್‌ ನ ಖ್ಯಾತ ನಟಿ ಸೂಪರ್ ಸ್ಟಾರ್ ನಾಗಾರ್ಜುನ ಅಕ್ಕಿನೇನಿ ಅವರು ತೆಲುಗಿನಲ್ಲಿ ಬಿಗ್‌ ಬಾಸ್‌ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ.

Advertisement

ಪ್ರತಿವರ್ಷದಂತೆ ಈ ವರ್ಷವೂ ಬಿಗ್‌ ಬಾಸ್‌ ಕಾರ್ಯಕ್ರಮ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಅನೇಕ ಖ್ಯಾತನಾಮ ಸ್ಪರ್ಧಿಗಳು, ವಿವಾದದಿಂದ ಸುದ್ದಿಯಾದ ಸ್ಟಾರ್‌ ಗಳು ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿ ಭಾಗಿಯಾಗಿದ್ದಾರೆ.

ಟಿವಿ ಕಲಾವಿದರು, ಡಾಕ್ಟರ್‌ ಗಳು, ಸೋಶಿಯಲ್‌ ಮೀಡಿಯಾ ತಾರೆಯರು ಸೇರಿದಂತೆ ವಿವಿಧ ಕ್ಷೇತ್ರದವರು ತೆಲುಗು ಬಿಗ್‌ ಬಾಸ್‌ -7 ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿದ್ದಾರೆ. ಈಗಾಗಲೇ ಅನೇಕ ಶೋಗಳಲ್ಲಿ ಅತಿಥಿಯಾಗಿ ಭಾಗವಹಿಸಿದ 90ರ ದಶಕದ ಮೋಹಕ ನಟಿ ಶಕೀಲಾ ಬಿಗ್‌ ಬಾಸ್‌ -7 ನಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿರುವುದು ಸದ್ದು ಮಾಡಿದೆ.

90ರ ದಶಕದ ಸಿನಿಮಾಗಳಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡು ಗಮನ ಸೆಳೆದ ಹಾಟ್‌ ಬೆಡಗಿ ಶಕೀಲಾ ಬಿಗ್‌ ಬಾಸ್‌ ನಲ್ಲಿ ಸ್ಪರ್ಧಿಯಾಗಿದ್ದಾರೆ.

ಬಿಗ್‌ ಬಾಸ್‌ -7 ಕಾರ್ಯಕ್ರಮ ಶಕೀಲಾ ಅವರ ಎಂಟ್ರಿಯಿಂದ ಸದ್ದು ಮಾಡಿದೆ. ಕಾರ್ಯಕ್ರಮಕ್ಕೆ ಪ್ರೀತಿಯಿಂದ ನಾಗಾರ್ಜುನ ಅಕ್ಕಿನೇನಿ ಬರಮಾಡಿಕೊಂಡಿದ್ದಾರೆ.

Advertisement

ಇದನ್ನೂ ಓದಿ: Stalin ಹೇಳಿಕೆ ಬೆನ್ನಲ್ಲೇ ಸನಾತನ ಧರ್ಮದ ಬಗ್ಗೆ ರಾಮ್‌ ಚರಣ್‌ ಟ್ವೀಟ್‌ ವೈರಲ್

ಈ ವೇಳೆ ಮಾತನಾಡಿದ ಶಕೀಲಾ “ಚಿತ್ರರಂಗದಲ್ಲಿ ನಿರ್ವಹಿಸಿದ ಪಾತ್ರಗಳ ಬಗ್ಗೆ ನಾನು ವಿಷಾದಿಸುವುದಿಲ್ಲ. ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ನಂತರ ನನ್ನ ಇಮೇಜ್ ಸಂಪೂರ್ಣವಾಗಿ ಬದಲಾಗಿದೆ. ಅಂತಹ ಬದಲಾವಣೆಯನ್ನು ಇಲ್ಲಿಯೂ ನಾನು ನಿರೀಕ್ಷೆ ಮಾಡುತ್ತೇನೆ” ಎಂದು ಹೇಳಿದ್ದಾರೆ.

ಈ ವೇಳೆ ವೇದಿಕೆಗೆ ನಾಗಾರ್ಜುನ ಅವರು ಶಕೀಲಾ ಅವರ ದತ್ತು ಮಗಳನ್ನು ಕರೆದು ಮಾತನಾಡಿಸಿದ್ದಾರೆ.

ತೆಲುಗು ಧಾರಾವಾಹಿ ತಾರೆ ಅಮರದೀಪ್ ಚೌಧರಿ, ಯುವ ರೈತ ಮತ್ತು ಯೂಟ್ಯೂಬರ್ ಪಲ್ಲವಿ ಪ್ರಶಾಂತ್, ನಟಿ ಕಿರಣ್ ರಾಥೋಡ್, ನಟ ಮತ್ತು ಚಲನಚಿತ್ರ ನಿರ್ಮಾಪಕ ಡಾ. ಗೌತಮ್ ಕೃಷ್ಣ, ತೆಲುಗು ನಟಿ ರಾಧಿಕಾ ರೋಸ್, ಫುಡ್ ವ್ಲೋಗರ್ ತೇಜಾ, ನಟಿ ಶೋಭಾ ಶೆಟ್ಟಿ, ಡ್ಯಾನ್ಸರ್ ಅಟ್ಟಾ ಸಂದೀಪ್, ಮಾಡೆಲ್ ಶುಭಾ ಶ್ರೀ, ಪ್ರಿನ್ಸ್ ಯಾರ್, ಗಾಯಕಿ ದಾಮಿನಿ ಬಟ್ಲಾ, ರಾಜಕಾರಣಿ ಮತ್ತು ನಟ ಶಿವಾಜಿ ಮತ್ತು ನಟಿ ಪ್ರಿಯಾಂಕಾ ಜೈನ್ ಮುಂತಾದವರು ಬಿಗ್‌ ಬಾಸ್‌ -7 ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿದ್ದಾರೆ.

ʼಸ್ಟಾರ್‌ ಮಾʼ ಹಾಗೂ ಡಿಸ್ನಿ + ಹಾಟ್‌ ಸ್ಟಾರ್‌ ನಲ್ಲಿ ಕಾರ್ಯಕ್ರಮ ಪ್ರಸಾರವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next