Advertisement
ಕಾರ್ಯಕ್ರಮದ ಮುಖ್ಯ ಆಕರ್ಷಣೆ ನಿರೂಪಕ ಸಲ್ಮಾನ್ ಖಾನ್. ವಾರದಲ್ಲಿ ಎರಡು ದಿನ ವೇದಿಕೆಗೆ ಬಂದು ಇಡೀ ವಾರದ ಆಗುಹೋಗುಗಳನ್ನು ಸ್ಪರ್ಧಿಗಳೊಂದಿಗೆ ಚರ್ಚಿಸುವ ಸಲ್ಮಾನ್ ಖಾನ್ ಒಂದು ಎಪಿಸೋಡ್ ನಿರೂಪಣೆ ಮಾಡಲು ಎಷ್ಟು ಸಂಭಾವನೆ ಪಡೆದುಕೊಳ್ಳುತ್ತಾರೆ ಎನ್ನುವುದರ ಬಗ್ಗೆ ಇತ್ತೀಚಿಗೆ ಚರ್ಚೆ ನಡೆದಿತ್ತು. ಅವರು 1000 ಕೋಟಿ ರೂ. ಪಡೆದುಕೊಳ್ಳುತ್ತಾರೆ ಎನ್ನುವ ಸುದ್ದಿಯನ್ನು ಸ್ವತಃ ಸಲ್ಮಾನ್ ಅವರೇ ಕೇಳಿ, ಅದು ಸುಳ್ಳೆಂದು ಹೇಳಿದ್ದರು.
Related Articles
Advertisement
ಅಮಿತಾಭ್ ಬಚ್ಚನ್: ನಿಮಗೆ ಗೊತ್ತಾ? ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಬಿಗ್ ಬಾಸ್ 3ನೇ ಸೀಸನ್ ನ್ನು ನಡೆಸಿಕೊಟ್ಟಿದ್ದರು. ನಿರೂಪಕರಾಗಿ ಅವರು ಆ ಸೀಸನ್ ನಲ್ಲಿ 126 ಕೋಟಿ ರೂ. ಸಂಭಾವನೆಯನ್ನು ಪಡೆದುಕೊಂಡಿದ್ದರು.
ಸಲ್ಮಾನ್ ಖಾನ್: ನಟ ಸಲ್ಮಾನ್ ಖಾನ್ ಇದೇ ಮೊದಲ ಬಾರಿ ಬಿಗ್ ಬಾಸ್ ನಡೆಸಿಕೊಡುತ್ತಿಲ್ಲ. ಈ ಹಿಂದೆ ಬಿಗ್ ಬಾಸ್ ನ ಸೀಸನ್ 4, 5, 6, 7 ನ್ನು ಅವರು ನಡೆಸಿಕೊಟ್ಟಿದ್ದಾರೆ. ಆ ಸೀಸನ್ ಗಳಲ್ಲಿ ತಲಾ ಒಂದು ಎಪಿಸೋಡ್ ಗೆ ಅವರು 2.5 ಕೋಟಿ ಸಂಭಾವನೆಯನ್ನು ಪಡೆಯುತ್ತಿದ್ದರು. ಇದಾದ ಬಳಿಕ ಸೀಸನ್ 8,9 ರ ಒಂದೊಂದು ಎಪಿಸೋಡ್ 8 ಕೋಟಿ ಪಡೆಯುತ್ತಿದ್ದರು. ಬಿಗ್ ಬಾಸ್ ನ 11 ನೇ ಸೀಸನ್ ನ ಎಪಿಸೋಡ್ ಒಂದಕ್ಕೆ 12 ಕೋಟಿ ಪಡೆಯುತ್ತಿದ್ದರು. 13,14 ಹಾಗೂ 15ನೇ ಸೀಸನ್ ಗೆ 12 ಕೋಟಿ ಪಡೆಯುತ್ತಿದ್ದರು ಎಂದು ಪಿಂಕ್ ವಿಲ್ಲಾ ವರದಿ ತಿಳಿಸಿದೆ.
ಸಂಜಯ್ ದತ್: ಸಂಜಯ್ ದತ್ ಅವರು ಕೂಡ ಸಲ್ಮಾನ್ ಖಾನ್ ಅವರೊಂದಿಗೆ ಬಿಗ್ ಬಾಸ್ ನ 5ನೇ ಸೀಸನ್ ನ್ನು ನಡೆಸಿಕೊಟ್ಟಿದ್ದರು. ಅವರು ಒಂದು ಎಪಿಸೋಡ್ ಗೆ 1 ಕೋಟಿ ರೂ. ಸಂಭಾವನೆಯನ್ನು ಪಡೆದುಕೊಂಡಿದ್ದರು.
ಫರಾ ಖಾನ್: ಬಿಗ್ ಬಾಸ್ ನ ಹಲ್ಲ ಬೋಲ್ ಸೀಸನ್ ನ್ನು ನಡೆಸಿಕೊಟ್ಟ ನಿರ್ದೇಶಕಿ ಫರಾ ಖಾನ್ ಒಂದು ಎಪಿಸೋಡ್ ಗೆ 10 ಲಕ್ಷ ಸಂಭಾವನೆಯನ್ನು ಪಡೆಯುತ್ತಿದ್ದರು.
16 ನೇ ಸೀಸನ್ ಗೆ ಸಲ್ಮಾನ್ ಖಾನ್ ಎಷ್ಟು ಸಂಭಾವನೆ ಪಡೆದುಕೊಳ್ಳಲ್ಲಿದ್ದಾರೆ ಎನ್ನುವುದು ಇದುವರೆಗೆ ಅಧಿಕೃತವಾಗಿ ತಿಳಿದು ಬಂದಿಲ್ಲ.