Advertisement

Rajasthan ಬಿಜೆಪಿಗೆ ಭರ್ಜರಿ ಜಯ; ಸಿಎಂ ರೇಸ್ ನಲ್ಲಿ ಯಾರೆಲ್ಲಾ ಇದ್ದಾರೆ? ಇಲ್ಲಿದೆ ಲಿಸ್ಟ್

07:06 PM Dec 03, 2023 | Team Udayavani |

ಜೈಪುರ: ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಭರ್ಜರಿ ಗೆಲುವು ಸಾಧಿಸಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ ಬಿಜೆಪಿಯು ಮರುಭೂಮಿ ರಾಜ್ಯದಲ್ಲಿ ಮತ್ತೆ ಅಧಿಕಾರದ ಬಲ ಪಡೆದಿದೆ. ಭಾರತೀಯ ಚುನಾವಣಾ ಆಯೋಗ (ಇಸಿಐ) ಹಂಚಿಕೊಂಡ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಬಿಜೆಪಿ 17 ಸ್ಥಾನಗಳನ್ನು ಗೆದ್ದಿದೆ ಮತ್ತು 98 ರಲ್ಲಿ ಮುನ್ನಡೆ ಸಾಧಿಸಿದೆ. ಈತನ್ಮಧ್ಯೆ, ಕಾಂಗ್ರೆಸ್ ಇದುವರೆಗೆ ಐದು ಸ್ಥಾನಗಳನ್ನು ಗೆದ್ದಿದೆ ಮತ್ತು 64 ರಲ್ಲಿ ಮುಂದಿದೆ. ರಾಜಸ್ಥಾನದಲ್ಲಿ ಸರ್ಕಾರ ರಚಿಸಲು ಒಂದು ಪಕ್ಷಕ್ಕೆ 101 ಸ್ಥಾನಗಳ ಅಗತ್ಯವಿದೆ.

Advertisement

ಇದೀಗ ರಾಜಸ್ಥಾನದಲ್ಲಿ ಯಾರು ಮುಖ್ಯಮಂತ್ರಿಯಾಗಬಹುದು ಎಂಬ ಲೆಕ್ಕಾಚಾರಗಳು ಆರಂಭವಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಹಿರಿಯ ನಾಯಕಿ ವಸುಂಧರಾ ರಾಜೆ, ಸಂಸದೆ ದಿಯಾ ಕುಮಾರಿ (ವಿದ್ಯಾಧರ ನಗರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ) ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸಿಎಂ ರೇಸ್ ನಲ್ಲಿದ್ದಾರೆ.

ರಾಜಕೀಯ ಕಾರಿಡಾರ್‌ ಗಳಲ್ಲಿನ ಮಾತಿನ ಪ್ರಕಾರ, ರಾಜೆ ಅವರಿಗೆ ಮೂರನೇ ಬಾರಿಗೆ ಪಟ್ಟ ಕಟ್ಟಲು ಬಿಜೆಪಿ ಹೆಚ್ಚು ಉತ್ಸುಕವಾಗಿಲ್ಲ. ರಾಜೆ ಅವರು ಪಕ್ಷದ ಕೇಂದ್ರ ನಾಯಕತ್ವಕ್ಕೆ ಅಚ್ಚುಮೆಚ್ಚಿನವರಲ್ಲ ಎಂಬುದು ಈಗಾಗಲೇ ಜಗಜ್ಜಾಹೀರು.

ರಾಜಸ್ಥಾನದಲ್ಲಿ, ರಾಜೆ ಪಿತೃಪ್ರಭುತ್ವದ ವ್ಯವಸ್ಥೆಯನ್ನು ಎದುರಿಸಿದ ನಾಯಕಿಯಾಗಿ ಕಾಣುತ್ತಾರೆ, ಸಾಂಪ್ರದಾಯಿಕ ರೂಢಿಗಳನ್ನು ಸವಾಲು ಮಾಡಿ ತನ್ನದೇ ಆದ ನಿಯಮಗಳ ಮೇಲೆ ಸಾರ್ವಜನಿಕ ಮತ್ತು ಖಾಸಗಿ ಜೀವನವನ್ನು ನಡೆಸಿದವರು.

ದಿಯಾ ಕುಮಾರಿ: ರಾಜ್‌ ಸಮಂದ್‌ ನ ಹಾಲಿ ಸಂಸದೆ ದಿಯಾ ಕುಮಾರಿ ಅವರು ಪಕ್ಷದೊಳಗೆ ವಸುಂಧರಾ ಅವರನ್ನು ಎದುರಿಸುವಾಕೆ ಎಂದು ಹೆಸರಾದವರು. ರಾಜಮನೆತನದ ಗಾಯತ್ರಿದೇವಿಯವರ ಮೊಮ್ಮಗಳು ಮತ್ತು ಸವಾಯಿ ಮಾಧೋಪುರದ ಮಾಜಿ ಶಾಸಕಿ ದಿಯಾ ಕುಮಾರಿ ಅವರು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡವರು. ಆರಂಭದಲ್ಲಿ ಸವಾಯಿ ಮಾಧೋಪುರದಲ್ಲಿ ಅವರನ್ನು ಹೊರಗಿನವರೆಂದೇ ಪರಿಗಣಿಸಲಾಗಿತ್ತು, ಆದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಂದಾಗಿ ಅವರು ಅಪಾರ ಜನಪ್ರಿಯತೆಯನ್ನು ಗಳಿಸಿದ್ದರು.

Advertisement

ಇದನ್ನೂ ಓದಿ:ABVP ಕಾರ್ಯಕರ್ತನಾಗಿದ್ದ ರೇವಂತ್ ರೆಡ್ಡಿ ಈಗ ತೆಲಂಗಾಣ ಸಿಎಂ ಹುದ್ದೆಯತ್ತ

ರಜಪೂತ ಸಮುದಾಯದಿಂದ ಬಂದ ದಿಯಾ ಕುಮಾರಿ ಅವರನ್ನು ಆರಂಭದಲ್ಲಿ ರಾಜ್ಯ ರಾಜಕೀಯಕ್ಕೆ ಕರೆತಂದ ಕೀರ್ತಿ ವಸುಂಧರಾ ರಾಜೆ ಅವರಿಗೆ ಸಲ್ಲುತ್ತದೆ ಆದರೆ ನಂತರ ವಸುಂಧರಾ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರಿಬ್ಬರು ಆಸ್ತಿ ವಿವಾದದಲ್ಲಿ ಭಾಗಿಯಾಗಿದ್ದರು.

ಗಜೇಂದ್ರ ಸಿಂಗ್ ಶೇಖಾವತ್: ಸಂಜೀವನಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಹಗರಣದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಸಿಎಂ ಅಶೋಕ್ ಗೆಹ್ಲೋಟ್ ಅವರೊಂದಿಗೆ ಸಾರ್ವಜನಿಕ ಆರೋಪ ಪ್ರತ್ಯಾರೋಪದಲ್ಲಿ ತೊಡಗಿಕೊಂಡಿದ್ದರು. 2020 ರಲ್ಲಿ ಗೆಹ್ಲೋಟ್ ಸರ್ಕಾರವನ್ನು ಉರುಳಿಸುವ ಪ್ರಯತ್ನಕ್ಕೆ ಸಂಬಂಧಿಸಿದಂತೆ ಅವರು ಕಾಲ್ ರೆಕಾರ್ಡಿಂಗ್ ವಿಷಯದಲ್ಲಿ ಸುದ್ದಿಯಾಗಿದ್ದರು.

ಬಾಲಕ್ ನಾಥ್: ರಾಜಸ್ಥಾನದ ಯೋಗಿ ಎಂದೇ ಖ್ಯಾತಿಯಾಗಿರುವ ಇವರು ಪ್ರಸ್ತುತ ಅಲ್ವಾರ್‌ನಿಂದ ಸಂಸದ. 2024 ರ ಲೋಕಸಭಾ ಚುನಾವಣೆಯ ಮೊದಲು ರಾಜಸ್ಥಾನದಲ್ಲಿ ಯುಪಿ ಶೈಲಿಯ ರಾಜಕೀಯವನ್ನು ಮಾಡಲು ಬಿಜೆಪಿ ಬಯಸಿದರೆ ಬಾಲಕ್ ನಾಥ್ ಗೆ ಮುಖ್ಯಮಂತ್ರಿ ಹುದ್ದೆಗೇರುವ ಅವಕಾಶವಿದೆ. ಅವರು ಅಲ್ವಾರ್‌ನಿಂದ ಸಂಸದರಾಗಿದ್ದರೂ ತಿಜಾರಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next