Advertisement

ಮುಂದಿನ ಸೆಪ್ಟೆಂಬರ್‌ಗೆ ಹೊಸ ಕಾರು: ಮಾರುತಿ

10:29 PM Sep 07, 2022 | Team Udayavani |

ಕೋಲ್ಕತಾ: ಈ ವರ್ಷದ ಸೆಪ್ಟೆಂಬರ್‌ ವೇಳೆಗೆ ಮಾರುತಿ ಸುಜುಕಿಯ ಮಿಡ್‌ ವರ್ಷನ್‌ ಎಸ್‌ಯುವಿ ಮಾಡೆಲ್‌ ಕಾರು(ಆರಂಭಿಕ ಬೆಲೆ 5.5 ಲಕ್ಷ ರೂ.) ರಸ್ತೆಗೆ ಇಳಿಯಲಿದೆ ಎಂದು ಕಂಪನಿ ತಿಳಿಸಿದೆ.

Advertisement

ಈ ಕುರಿತು ಮಾಹಿತಿ ನೀಡಿದ ಮಾರುತಿ ಸುಜುಕಿಯ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಶಶಾಂಕ್‌ ಶ್ರೀವಾಸ್ತವ್‌, “ದೇಶದಲ್ಲಿ ಎಸ್‌ಯುವಿ ಕಾರುಗಳ ಮಾರುಕಟ್ಟೆ ದೊಡ್ಡದಾಗಿ ಬೆಳೆಯುತ್ತಿದೆ. ಆದರೆ ಪ್ರಸ್ತುತ ಒಟ್ಟಾರೆ ಎಸ್‌ಯುವಿ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯ ಪಾಲು ಶೇ.45ರಷ್ಟಿದೆ. ಇದನ್ನು ಶೇ.50ಕ್ಕೆ ಹೆಚ್ಚಿಸುವುದು ಕಂಪನಿಯ ಗುರಿಯಾಗಿದೆ,” ಎಂದು ಹೇಳಿದರು.

“ನಾನ್‌-ಎಸ್‌ಯುವಿ ವಿಭಾಗದಲ್ಲಿ ಮಾರುತಿ ಸುಜುಕಿಯ ಪಾಲು ಶೇ.65ರಷ್ಟಿದೆ. ಮಿಡ್‌ ವರ್ಷನ್‌ ಎಸ್‌ಯುವಿ ವಿಭಾಗದಲ್ಲಿ ಮಾರುತಿ ಸುಜುಕಿಯ ಕಾರುಗಳಿಲ್ಲ. ಹಾಗಾಗಿ ಸೆಪ್ಟೆಂಬರ್‌ ವೇಳೆಗೆ ನೂತನ ಮಾಡೆಲ್‌ ಬಿಡುಗಡೆಯಾಗಲಿದೆ,’ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next