ನವದೆಹಲಿ: ನಾರದ ಟೇಪ್ ಸ್ಟಿಂಗ್ ಪ್ರಕರಣ ಇದೀಗ ಸುಪ್ರೀಂಕೋರ್ಟ್ ನಲ್ಲಿ ತಿರುವು ಪಡೆದುಕೊಂಡಿದ್ದು, ನಾರದ ಸ್ಟಿಂಗ್ ಪ್ರಕರಣವನ್ನು ವಿಚಾರಣೆ ನಡೆಸಬೇಕೆಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿಯನ್ನು ಸುಪ್ರೀಂಕೋರ್ಟ್ ಜಸ್ಟೀಸ್ ಅನಿರುದ್ಧ ಬೋಸ್ ನಿರಾಕರಿಸಿದ್ದಾರೆ.
ಇದನ್ನೂ ಓದಿ:ಹಂತ ಹಂತವಾಗಿ ಶಾಲಾ ಕಾಲೇಜು ತೆರೆಯಲು ತಜ್ಞರ ಸಮಿತಿ ಸೂಚನೆ: ಸಿಎಂ ಬಿಎಸ್ ವೈ
ನಾರದ ಸ್ಟಿಂಗ್ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ನ ನಾಲ್ವರು ಮುಖಂಡರನ್ನು ಸಿಬಿಐ ಬಂಧಿಸಿದ ಘಟನೆಗೆ ಸಂಬಂಧಿಸಿದ ಅರ್ಜಿ ಇದಾಗಿದೆ ಎಂದು ವರದಿ ತಿಳಿಸಿದೆ. ವರದಿಯ ಪ್ರಕಾರ, ಜಸ್ಟೀಸ್ ಹೇಮಂತ್ ಗುಪ್ತಾ ಮತ್ತು ಬೋಸ್ ನೇತೃತ್ವದ ರಜಾಕಾಲದ ಪೀಠ ಇಂದಿನ ಅರ್ಜಿಯ ವಿಚಾರಣೆ ನಡೆಸಲು ಪ್ರಾರಂಭಿಸಿದಾಗ, ತನ್ನ ಸಹೋದ್ಯೋಗಿ ಜಡ್ಜ್ ನಾರದಾ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದರು.
ಸುಪ್ರೀಂಕೋರ್ಟ್ ಪೀಠದ ಜಸ್ಟೀಸ್ ಗುಪ್ತಾ ಅವರು, ಈ ಪ್ರಕರಣದ ಮನವಿಯನ್ನು ಸುಪ್ರೀಂಕೋರ್ಟ್ ಸಿಜೆಐ ಎನ್ ವಿ ರಮಣ ಅವರ ಮುಂದೆ ಇಡಲಾಗಿದ್ದು, ಅವರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅಲ್ಲದೇ ನಾಳೆ ಅರ್ಜಿಯ ವಿಚಾರಣೆ ನಡೆಯಬಹುದು ಎಂದು ಹೇಳಿದರು.
ನಾರದ ಸ್ಟಿಂಗ್ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ನಾಲ್ವರು ಮುಖಂಡರನ್ನು ಮೇ 17ರಂದು ಬಂಧಿಸಿದ್ದ ದಿನ ಕೋಲ್ಕತಾ ಹೈಕೋರ್ಟ್ ತನ್ನ ಮತ್ತು ರಾಜ್ಯ ಕಾನೂನು ಸಚಿವರು ತಮ್ಮ ಪಾತ್ರದಲ್ಲಿ ಅಫಿಡವಿತ್ ಸಲ್ಲಿಸಲು ನಿರಾಕರಿಸಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರದ ಮೇಲ್ಮನವಿ ಸೇರಿದಂತೆ ಮೂರು ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಕೋರ್ಟ್ ನಿರ್ಧರಿಸಿತ್ತು.
ನಾರದ ಪ್ರಕರಣದಲ್ಲಿ ಟಿಎಂಸಿಯ ನಾಲ್ವರು ಮುಖಂಡರನ್ನು ಸಿಬಿಐ ಬಂಧಿಸಲು ತೆರಳಿದ್ದ ಸಂದರ್ಭದಲ್ಲಿ ಕಾನೂನು ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುವುದಾಗಿ ಆರೋಪಿಸಲಾಗಿದೆ. ಕೋಲ್ಕತಾ ಹೈಕೋರ್ಟ್ ವಿರುದ್ಧದ ಆದೇಶ ಪ್ರಶ್ನಿಸಿ ಬಂಗಾಳ ಸರ್ಕಾರ ಹಾಗೂ ಘಟಕ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಪರಿಗಣಿಸಿದ ನಂತರ ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಬೇಕೆಂದು ಜೂನ್ 18ರಂದು ಸೂಚಿಸಿತ್ತು ಎಂದು ವರದಿ ತಿಳಿಸಿದೆ.