Advertisement

ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಗ್ ಎಫ್ ಎಂ, ಗಂಧದ ಗುಡಿ ಸಹಯೋಗದೊಂದಿಗೆ ನೆರವಿನ ಹಸ್ತ

05:11 PM Aug 27, 2019 | Nagendra Trasi |

ಬೆಂಗಳೂರು: ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಮತ್ತು ಕೇರಳದ ಹಲವಾರು ಭಾಗಗಳನ್ನು ಒಳಗೊಂಡಂತೆ ದಕ್ಷಿಣ ಭಾರತದ ಲಕ್ಷಾಂತರ ಕುಟುಂಬಗಳಿಗೆ ಈ ವರ್ಷದ ಮಾನ್ಸೂನ್ ದುಃಸ್ವಪ್ನವಾಗಿ ಕಾಡಿದೆ. ದೇಶದ ಅತಿದೊಡ್ಡ ನೆಟ್ ವರ್ಕ್ ಗಳಲ್ಲಿ ಒಂದಾದ 92.7 ಬಿಗ್ ಎಫ್ ಎಂ ಸಮಾಜದಲ್ಲಿ ಗುಣಮಟ್ಟದ ಬದಲಾವಣೆ ತರಲು ಮತ್ತೆ ಮುಂದಾಗಿದೆ.

Advertisement

ಬಿಗ್ ಎಫ್ಎಂ, ಗಂಧದಗುಡಿ ಫೌಂಡೇಶನ್ ಸಹಯೋಗದೊಂದಿಗೆ, ಈ ಪ್ರದೇಶಗಳಿಗೆ ಅಗತ್ಯವಾದ ಪರಿಹಾರ ಸಾಮಗ್ರಿಗಳನ್ನು ಪೂರೈಸುವ ಮೂಲಕ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹೆಣಗಾಡುತ್ತಿರುವ ಕುಟುಂಬಗಳಿಗೆ ಸಹಾಯ ಹಸ್ತ ನೀಡಲು ಮುಂದಾಗಿದೆ. ಬಿಗ್ ಎಫ್ಎಂ ಮಂಗಳೂರಿನ ಆರ್ ಜೆ ಎರ್ರೋಲ್ ಅವರು ‘ಟೇಕ್ ಇಟ್ ಈಸಿ’ ಕಾರ್ಯಕ್ರಮದ ಮೂಲಕ ಇದನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ಬೆಂಗಳೂರಿನ ಪಟ್ ಪಟ್ ಪಟಾಕಿ ಖ್ಯಾತಿಯ ಶ್ರುತಿ ಅವರೂ ಈ ಕಾರ್ಯದಲ್ಲಿ ಕೈ ಜೋಡಿಸಿದ್ದು, ತಮ್ಮ ಬೆಳಗಿನ ಕಾರ್ಯಕ್ರಮ ‘ಪಟಾಕಿ ಮಾರ್ನಿಂಗ್ಸ್’ ನಲ್ಲಿ ಕೇಳುಗರಿಗೆ ತಮ್ಮ ಕೈಲಾದ ಕೊಡುಗೆ ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ.

92.7 ಬಿಗ್ ಎಫ್ಎಂ, ಗಂಧದಗುಡಿ ಫೌಂಡೇಶನ್ ಜೊತೆಗೆ ಬೃಹತ್ ಟ್ರಕ್ ಗಳು, ಕರ್ನಾಟಕದ ಪ್ರವಾಹ ಪೀಡಿತ ನಾಲ್ಕು ಜಿಲ್ಲೆಗಳಾದ ಹಾಸನ, ಬಾಗಲಕೋಟೆ, ಜಮಖಂಡಿ ಮತ್ತು ಬೆಳ್ತಂಗಡಿ ಮತ್ತು ಕೊಡಗಿನ ಕುಟುಂಬಗಳಿಗೆ ಅಗತ್ಯ ಪೂರೈಕೆಯ ವಸ್ತುಗಳನ್ನು ವಿತರಿಸಿದೆ. ಇದಲ್ಲದೆ, ಪರಿಹಾರ ಕೇಂದ್ರ ಸೇರಿದಂತೆ ರಕ್ಷಣಾ ಶಿಬಿರಗಳಲ್ಲಿ ತಂಗಿರುವ ಸಂತ್ರಸ್ತರಿಗೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿದ್ದು ಮತ್ತು ಸ್ವಯಂಸೇವಕರಿಗೆ ಸುರಕ್ಷತಾ ಮುಖವಾಡಗಳನ್ನು ಬಿಗ್ ಎಫ್ಎಂ ವಿತರಿಸಿದೆ.

ಹಾನಿಯುಂಟು ಮಾಡುವ ಮತ್ತು ಸುಳ್ಳು ಸಂದೇಶಗಳ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುವುದನ್ನು ತಪ್ಪಿಸಲು ಆರ್ ಜೆ ಎರ್ರೋಲ್ ಅವರು ಆಯಾ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಆ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ಮತ್ತು ವಾಟ್ಸಾಪ್ ಮೂಲಕ ಹರಡಿದ್ದಾರೆ. ಅಭಿಯಾನದ ಎರಡನೇ ಹಂತದಲ್ಲಿ, ಬಿಗ್ ಎಫ್ಎಂ ಹ್ಯಾಬಿಟ್ಯಾಟ್ಸ್ ಫಾರ್ ಹ್ಯುಮಾನಿಟಿ ಎಂಬ ಎನ್ ಜಿಒ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಅವರು ರೇಡಿಯೊ ಕೇಂದ್ರದೊಂದಿಗೆ ಸೇರಿ ಉತ್ತರ ಕರ್ನಾಟಕ ಮತ್ತು ಕೂಡಗಿನ ಬಹುಪಾಲು ಪ್ರದೇಶಗಳಲ್ಲಿ 500 ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದಾರೆ.

Advertisement

ಪ್ರವಾಹದ ಪರಿಹಾರ ನೀಡುವ ಈ ಆಂದೋಲನದ ಮುಂದಾಳತ್ವ ವಹಿಸಿದ್ದ ಆರ್ ಜೆ ಎರ್ರೋಲ್ ಮಾತನಾಡಿ, “ಪ್ರತಿ ವರ್ಷ ಬರುವ ಭಾರೀ ಮಳೆಯಿಂದಾಗಿ ದಕ್ಷಿಣ ಭಾರತದಲ್ಲಿ ಅದರಲ್ಲೂ ಕೂರ್ಗ್ ಮತ್ತು ಮಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಈ ವರ್ಷವೂ ಆರ್.ಜೆ.ಶೃತಿ ಮತ್ತು ನಾನು ಈ ನೈಸರ್ಗಿಕ ವಿಪತ್ತಿನಿಂದ ಕಂಗಾಲಾಗಿರುವ ಕುಟುಂಬಗಳಿಗೆ ವೈದ್ಯಕೀಯ ಅಗತ್ಯಗಳ ಮತ್ತು ಆಹಾರ ಉತ್ಪನ್ನಗಳನ್ನು ಒದಗಿಸುವ ಪ್ರಯತ್ನ ಮಾಡಿದ್ದೇವೆ. ಈ ಮುಂದಾಳತ್ವದಲ್ಲಿ ಮುಂದುವರಿಯಲು ಎಲ್ಲ ರೀತಿಯಲ್ಲಿ ಬೆಂಬಲ ನೀಡಿದ್ದಕ್ಕಾಗಿ ಬಿಗ್ ಎಫ್ಎಂಗೆ ಧನ್ಯವಾದ ಹೇಳಲು ನಾನು ಬಯಸುತ್ತೇನೆ ” ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ಆರ್.ಜೆ.ಶೃತಿ, “ಈ ಸಮಯದಲ್ಲಿ ಮಾನವೀಯತೆಗಿಂತ ದೊಡ್ಡ ಧರ್ಮವಿಲ್ಲ ಮತ್ತು ಮಾನವ ಜನಾಂಗವೆಲ್ಲ ಒಂದೇ ಎಂಬುದು ಅರ್ಥವಾಗುತ್ತದೆ! ನೈಸರ್ಗಿಕ ವಿಪತ್ತುಗಳು ನಮ್ಮ ನಿಯಂತ್ರಣದಲ್ಲಿಲ್ಲ ಆದರೆ ಸಮಸ್ಯೆ ಹುಟ್ಟಿಕೊಂಡಾಗ, ಬಿಕ್ಕಟ್ಟಿನ ಸಮಯದಲ್ಲಿ ಸಹಾಯ ಹಸ್ತ ನೀಡುವುದು ನಮ್ಮ ಜವಾಬ್ದಾರಿಯೂ ಆಗಿರುತ್ತದೆ.  ಪೀಡಿತ ಕುಟುಂಬಗಳಿಗೆ ಎಲ್ಲೆಡೆಯಿಂದ ಹರಿದು ಬರುತ್ತಿರುವ ಪ್ರೀತಿ ಮತ್ತು ಕಾಳಜಿ ಹೃದಯಸ್ಪರ್ಶಿಯಾಗಿದೆ. ಅವರಿಗೆ ಬೇಕಿರುವುದು ಸಹಾನುಭೂತಿಯಲ್ಲ ಬದಲಾಗಿ ಶುದ್ಧ ಅನುಭೂತಿ. ಇದನ್ನು ಅರ್ಥೈಸಿಕೊಂಡ ಕಾರಣಕ್ಕೆ ನಮಗೆ ಕೃಷ್ಣ ನದಿ ತೀರದ ಹಳ್ಳಿಗಳಿರುವ ಪ್ರದೇಶಗಳಿಗೆ ಪರಿಹಾರ ಸಾಮಗ್ರಿಗಳನ್ನು ತಲುಪಿಸಲು ಸಾಧ್ಯವಾಗಿದೆ ಎಂದರು.

ಕಳೆದ ವರ್ಷ, ಕೊಡಗು ಮತ್ತು ಕೇರಳದ ಮೇಲೆ ಪ್ರವಾಹ ಪ್ರತಿಕೂಲ ಪರಿಣಾಮ ಬೀರಿದ್ದ ಸಮಯದಲ್ಲಿ, ಬಿಗ್ ಎಫ್ಎಂ ಮಂಗಳೂರು ಮುಂದಾಳತ್ವದಲ್ಲಿ ಆ ಪ್ರದೇಶಗಳಿಗೆ ಪರಿಹಾರ ಸಾಮಗ್ರಿಗಳು ವಿತರಿಸಿತ್ತು. ಬಿಗ್ ಎಫ್ಎಂ, ಸ್ವಯಂಸೇವಕರೊಂದಿಗೆ 1 ಟನ್ ಗಿಂತ ಹೆಚ್ಚಿನ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ಅದನ್ನು ಕರಾವಳಿ ಕಾವಲು ಅಧಿಕಾರಿಗಳಿಗೆ ಹಸ್ತಾಂತರಿಸಿತ್ತು. 92.7 ಬಿಗ್ ಎಫ್ಎಂ ಅಗತ್ಯವಿರುವ ಸಂದರ್ಭದಲ್ಲಿ ನಾಗರಿಕರಿಗೆ ಬೆಂಬಲ ನೀಡುತ್ತದೆ ಹಾಗು ಭವಿಷ್ಯದಲ್ಲಿಯೂ ಇದನ್ನು ಮುಂದುವರಿಸಲಿದೆ.

ಕೊಡುಗೆ ನೀಡಲು ಬಯಸುವವರು 08244252927 ಸಂಖ್ಯೆಗೆ ಕರೆ ಮಾಡಬಹುದು ಮತ್ತು ಆರ್ ಜೆ ಎರ್ರೋಲ್ ಅವರೊಂದಿಗೆ ಮಾತನಾಡಬಹುದು ಅಥವಾ ಹೆಚ್ಚಿನ ಮಾಹಿತಿಗಾಗಿ ಪ್ರತಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 5:00 ರಿಂದ 9:00 ರವರೆಗೆ ಅವರ ಕಾರ್ಯಕ್ರಮ ‘ಟೇಕ್ ಇಟ್ ಈಸಿ’ ಗೆ ಟ್ಯೂನ್ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next