Advertisement
ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೊಚ್ಚಿಯಲ್ಲಿ ಇಂದು ದೇಶದ ಮೊದಲ ವಿಮಾನ ವಾಹಕ ನೌಕೆ ಐಎನ್ ಎಸ್ ವಿಕ್ರಾಂತ್ ಲೋಕಾರ್ಪಣೆ ಮಾಡಿರುವುದು ಪ್ರತಿಯೊಬ್ಬ ಪ್ರಜೆಗೂ ಹೆಮ್ಮೆಯಾಗಿದೆ ಎಂದರು.
Related Articles
Advertisement
ಸಾಗರ ಮಾಲಾ ಯೋಜನೆಯ ಅತೀ ಹೆಚ್ಚು ಪ್ರಯೋಜನವನ್ನು ಕರ್ನಾಟಕ ಪಡೆದುಕೊಂಡಿದೆ.ರಾಜ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು, 2014 ರ ನಂತರ 4 ಪಟ್ಟು ಹೆಚ್ಚು ರೈಲ್ವೆ ಯೋಜನೆಗಳ ಅನುದಾನ ಕರ್ನಾಟಕ ಕ್ಕೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕ್ಷೇತ್ರದಲ್ಲಿ ಕಳೆದ 8 ವರ್ಷಗಳಲ್ಲಿ 70,000 ಕೋಟಿ ರೂ.ಗಳ ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಜತೆಗೆ 1 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಯೋಜನೆಗಳು ಚಾಲನೆಯಲ್ಲಿವೆ ಎಂದರು.
ಬಡವನಿಗೆ ಸಂಕಟ ಬಂದರೆ ಇಡೀ ಕುಟುಂಬ ಸಂಕಟಕ್ಕೆ ಗುರಿಯಾಗುತ್ತದೆ. ಆಯುಷ್ಮಾನ್ ಭಾರತ ಯೋಜನೆ ನಾಲ್ಕು ಕೋಟಿ ಬಡವರಿಗೆ ನೆರವಾಗಿಗೆ, ಕರ್ನಾಟಕದ 30 ಲಕ್ಷ ಮಂದಿಗೆ ನೆರವಾಗಿದೆ.ಕೋಟ್ಯಂತರ ಬಡವರಿಗೆ ವಿಕಾಸದ ಲಾಭ ಸಿಗಲು ಸಾಧ್ಯವಾಗಿದೆ ಎಂದರು.
ಮತ್ಸ್ಯ ಸಂಪದ ಯೋಜನೆ ಮೂಲಕ ಕರ್ನಾಟಕದ ಮೀನುಗಾರರ ಅಭಿವೃದ್ಧಿಗಾಗಿ ಕೆಲಸ ಮಾಡಲಾಗುತ್ತಿದೆ. ಕರಾವಳಿ ಮತ್ತು ಪಶ್ಚಿಮ ಘಟ್ಟ ಪ್ರವಾಸೋದ್ಯಮ ಅಭಿವೃದ್ಧಿಗೆ ಅತ್ಯುತ್ತಮ ಸ್ಥಳಗಳಾಗಿವೆ. ಪ್ರವಾಸೋದ್ಯಮ ಅಭಿವೃದ್ಧಿ ಸಮಾಜದ ಹಲವರಿಗೆ ಲಾಭವಾಗುತ್ತದೆ. ಕ್ರೂಸ್ ಟೂರಿಸಂ ಇಲ್ಲಿ ಅಭಿವೃದ್ಧಿಯಾಗಬೇಕು ಎಂದರು.
ಡಬಲ್ ಇಂಜಿನ್ ಸರಕಾರ ಹಗಲು ರಾತ್ರಿ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಕೆಲಸಮಾಡುತ್ತಿದೆ. ಕಳೆದ 8 ವರ್ಷಗಳಲ್ಲಿ ಮೆಟ್ರೋ ಸಂಪರ್ಕ ಹೊಂದಿದ ನಗರಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದರು.
ಕ್ಲೀನ್ ಎಕಾನಮಿ ಮೂಲಕ ಆನ್ಲೈನ್ ಪೇಮೆಂಟ್ ಇಂದು ಮೇಲ್ಮಟ್ಟದಲ್ಲಿ ನಡೆಯುತ್ತಿದೆ. ಭೀಮ್ ಸೇರಿ ವಿವಿಧ ಯಾಪ್ ಗಳು ಜಗತ್ತಿನ ಗಮನ ಸೆಳೆಯುತ್ತಿದೆ ಎಂದರು.
ಭಾರತದ ದೊಡ್ಡ ಉದ್ಯಮಿಗಳು ಕರ್ನಾಟಕದವರೇ ಆಗಿದ್ದಾರೆ. ರಾಣಿ, ಅಬ್ಬಕ್ಕ ಅವರನ್ನು ನೆನಪಿಸಿಕೊಳ್ಳುತ್ತೇನೆ. ವೀರ ಮಹಿಳೆ ದೊಡ್ಡ ಪ್ರೇರಣೆ ಎಂದರು.