Advertisement
ಹಾರ್ದಳ್ಳಿ – ಮಂಡಳ್ಳಿ ಗ್ರಾಮ ಪಂಚಾಯತ್‌ನ ಹಳೆಯದಾದ ಗ್ರಾಮ ಲೆಕ್ಕಿಗರ ಕಟ್ಟಡದಲ್ಲಿ ಮಾನವೀಯ ನೆಲೆಯ ಮೇಲೆ ನಿತ್ಯಾನಂದ ಶೆಟ್ಟಿಗಾರ್ ಹಾಗೂ ಅವರ ತಾಯಿ ಕಮಲಾಕ್ಷಿ ಶೆಟ್ಟಿಗಾರ್ ವಾಸಿಸಲು ಅವಕಾಶ ಮಾಡಿಕೊಟ್ಟಿದ್ದು, ಯಾವುದೇ ರೀತಿಯ ಬಾಡಿಗೆಯನ್ನು ಸಂಗ್ರಹಿಸದೆ ಅನುಕಂಪದ ಆಧಾರದಲ್ಲಿ ವಾಸಿಸಲು ಅವಕಾಶ ನೀಡಿದ್ದಾರೆ.
ಈಗಾಗಲೇ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು ಕಟ್ಟಡ ತೆರವಿಗೆ ನಿರ್ಣಯಿಸಿದ್ದು, ಆ ಸ್ಥಳದಲ್ಲಿ ಗ್ರಾಮಕ್ಕೆ ಕುಡಿಯುವ ನೀರಿನ ಸರಬರಾಜು ಮಾಡುವ ನಿಟ್ಟಿನಿಂದ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡುವ ಯೋಜನೆಯನ್ನು ಹೊಂದಿದೆ ಎಂದು ಹೇಳಲಾಗಿದೆ. ಇವರು ಉತ್ತಮ ಸಾಂಪ್ರದಾಯಿಕ ಶೈಲಿಯ ಕುಂಚ ಕಲಾವಿದರಾಗಿದ್ದು 1984 ರಿಂದ ನಾಮಫಲಕ, ಬ್ಯಾನರ್, ಶುಭ ಸಮಾರಂಭಗಳ ಬೋರ್ಡ್, ಸಿಮೆಂಟ್ ಕಲಾಕೃತಿ ಸೇರಿದಂತೆ ಗಣಪತಿ ವಿಗ್ರಹಗಳಿಗೆ ಬಣ್ಣ ಲೇಪನ ಕಾಯಕದಲ್ಲಿ ಪರಿಸರದಲ್ಲಿ ಪ್ರಸಿದ್ಧರಾಗಿದ್ದರು. ನಿತ್ಯಾನಂದ ಶೆಟ್ಟಿಗಾರ್ ಅವರ ತಾಯಿಗೆ ಪಂಚಾಯತ್‌ನಿಂದ 2 ಸೆಂಟ್ಸ್ ನಿವೇಶನ ಮಂಜೂರಾಗಿದೆ. ಆದರೆ ತಾಯಿ ಮೃತರಾದ ಬಳಿಕ ಕನಸಿನ ಸೂರು ನಿರ್ಮಾಣ ಮಾತ್ರ ಗಗನ ಕುಸುಮವಾಗಿ ಉಳಿದಿರುವುದು ವಾಸ್ತವ ಸತ್ಯ. ಕನಸಿನ ಮನೆ ನಿರ್ಮಿಸಬೇಕು ಎನ್ನುವ ಹಂಬಲಕ್ಕೆ ಮಾನವೀಯ ಹೃದಯಗಳು ಸ್ಪಂದಿಸಬೇಕಾದ ಅಗತ್ಯ ಇದೆ.