Advertisement

ಬಿದ್ಕಲ್ಕಟ್ಟೆ ಐಟಿಐ ಕಾಲೇಜು: ನೂತನ ಕಟ್ಟಡದಲ್ಲಿ ಕಳಪೆ ಕಾಮಗಾರಿ

11:32 PM Jul 24, 2019 | sudhir |

ಕುಂದಾಪುರ: ಕಳೆದ 12 ವರ್ಷಗಳ ಹಿಂದೆ ಕುಂದಾಪುರ ತಾಲೂಕಿಗೆ ಮಂಜೂರಾದ ಸರಕಾರಿ ಐಟಿಐ ಕಾಲೇಜಿನ ಸುಸಜ್ಜಿತ ನೂತನ ಕಟ್ಟಡ ಬಿದ್ಕಲ್ಕಟ್ಟೆಯಲ್ಲಿ ನಿರ್ಮಾಣವಾಗುತ್ತಿದ್ದು, ಪೂರ್ಣಗೊಳ್ಳುವ ಮೊದಲೇ ಕಳಪೆ ಕಾಮಗಾರಿ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಈಗಾಗಲೇ ವರದಿಯೂ ಸಲ್ಲಿಕೆಯಾಗಿದೆ.

Advertisement

ಕೋಟೇಶ್ವರದಲ್ಲಿ ಆರಂಭ

2007-08 ನೇ ಸಾಲಿನಲ್ಲಿ ಕುಂದಾಪುರ ತಾಲೂಕಿಗೆ ಸರಕಾರಿ ಐಟಿಐ ಕಾಲೇಜು ಮಂಜೂರಾಗಿದ್ದು, ಮೊದಲಿಗೆ ಕೋಟೇಶ್ವರದಲ್ಲಿ ಕಾರ್ಯಾರಂಭಗೊಂಡಿತ್ತು. ಆ ಬಳಿಕ ಹಂಗಳೂರಿಗೆ ಸ್ಥಳಾಂತರಗೊಂಡು, ಸದ್ಯ ತಾತ್ಕಲಿಕವಾಗಿ ಅಲ್ಲಿನ ಖಾಸಗಿ ಕಟ್ಟಡದಲ್ಲಿ ಕಾಲೇಜಿನ ಚಟುವಟಿಕೆಗಳು ನಡೆಯುತ್ತಿದೆ. ಸದ್ಯ 7 ಬೇರೆ – ಬೇರೆ ಕೋರ್ಸ್‌ಗಳ ತರಗತಿಯನ್ನು ಆರಂಭಿಸಲಾಗಿದೆ.

3.86 ಕೋ.ರೂ. ಮಂಜೂರು

ಬಿದ್ಕಲ್ಕಟ್ಟೆಯಲ್ಲಿ ಸರಕಾರಿ ಜಾಗ ಇದ್ದ ಹಿನ್ನೆಲೆಯಲ್ಲಿ ನಬಾರ್ಡ್‌ ಯೋಜನೆಯಡಿ ಈ ಸರಕಾರಿ ಐಟಿಐ ಕಾಲೇಜಿಗೆ 3.86 ಕೋ.ರೂ. ಮಂಜೂರಾಗಿದ್ದು, ಸುಮಾರು 2 ವರ್ಷಗಳ ಹಿಂದೆ ನೂತನ ಕಟ್ಟಡದ ಕಾಮಗಾರಿ ಆರಂಭಗೊಂಡಿತ್ತು.

Advertisement

ಉಪನ್ಯಾಸಕರ ಕೊರತೆ

ಸದ್ಯ ಹಂಗಳೂರಿನಲ್ಲಿರುವ ಕಟ್ಟಡದಲ್ಲಿ ಸದ್ಯ 7 ಕೋರ್ಸ್‌ಗಳಲ್ಲಿ ಕುಂದಾಪುರದಿಂದ ಆರಂಭವಾಗಿ ಬೈಂದೂರಿನವರೆಗೂ ಬೇರೆ ಬೇರೆ ಕಡೆಗಳಿಂದ ಸುಮಾರು 205 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ 19 ಮಂದಿ ಉಪನ್ಯಾಸಕರಿರಬೇಕಿದ್ದು, ಆದರೆ ಸದ್ಯ 4 – 5 ಮಂದಿ ಮಾತ್ರ ಇದ್ದಾರೆ. ಬಾಕಿ ಎಲ್ಲ ಗೌರವ ಶಿಕ್ಷಕರೇ ಬೋಧಿಸುತ್ತಿದ್ದಾರೆ.

– ಪ್ರಶಾಂತ್ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next