Advertisement

G-20 ಶೃಂಗಸಭೆ: ಎರಡು ದಿನಗಳ ಮೊದಲೇ ಭಾರತಕ್ಕೆ ಬೈಡೆನ್‌

12:30 AM Sep 06, 2023 | Team Udayavani |

ಹೊಸದಿಲ್ಲಿ/ವಾಷಿಂಗ್ಟನ್‌: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆಯ ಲಿರುವ ಜಿ20 ಶೃಂಗಸಭೆಯ ಎರಡು ದಿನಗಳ ಮೊದಲೇ ಸೆ.7ರಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಭಾರತಕ್ಕೆ ಆಗಮಿಸುತ್ತಿದ್ದಾರೆ.

Advertisement

ಸೆ.9 ಮತ್ತು 10 ರಂದು ಜಿ20 ಶೃಂಗಸಭೆ ನಡೆಯಲಿದೆ. ಅದಕ್ಕೂ ಮುನ್ನ ಸೆ.8ರಂದು ಜೋ ಬೈಡೆನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವ ರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿ ದ್ದಾರೆ ಎಂದು ಶ್ವೇತಭವನ ತಿಳಿಸಿದೆ

ಯಾವೆಲ್ಲ ನಾಯ ಕರ ಆಗಮನ: ಯುಕೆ ಪ್ರಧಾನಿ ರಿಷಿ ಸುನಕ್‌, ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೊ, ದ. ಕೊರಿಯಾ ಅಧ್ಯಕ್ಷ ಯೂನ್‌ ಸುಕ್‌, ಫ್ರಾನ್ಸ್‌ ಅಧ್ಯಕ್ಷ ಎಮ್ಯಾ ನುಯೆಲ್‌, ಆಸ್ಟ್ರೇ ಲಿಯಾ ಪ್ರಧಾನಿ ಅಲ್ಬನೀಸ್‌, ಟರ್ಕಿ ಪ್ರಧಾನಿ ರೆಸೆಪ್‌, ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ.

ಅತಿಥಿ ರಾಷ್ಟ್ರಗಳು ಯಾವುವು
ನೆದರ್‌ಲ್ಯಾಂಡ್ಸ್‌, ಸಿಂಗಾಪುರ, ಸ್ಪೇನ್‌, ಯುಎಇ, ಒಮನ್‌, ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್‌ ಮತ್ತು ನೈಜೀರಿಯಾ.

ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ ಚೀನದ ಬೆಂಬಲವಿದೆ. ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಯಶಸ್ಸಿಗಾಗಿ ಜಿ20 ರಾಷ್ಟ್ರಗಳೊಂದಿಗೆ ಒಗ್ಗೂಡಿ ಕೆಲಸ ಮಾಡಲು ಚೀನ ಸಿದ್ಧವಿದೆ.
ಚೀನ ವಿದೇಶಾಂಗ ಸಚಿವಾಲಯ

Advertisement

ಯಾವೆಲ್ಲ ರಾಷ್ಟ್ರಗಳಿವೆ ಜಿ20ಯಲ್ಲಿ ?
ಅರ್ಜೆಂಟಿನಾ, ಆಸ್ಟ್ರೇಲಿಯಾ, ಬ್ರೆಜಿಲ್‌, ಕೆನಡಾ, ಚೀನ, ಫ್ರಾನ್ಸ್‌, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್‌, ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಕೆ, ಅಮೆರಿಕ ಹಾಗೂ ಐರೋಪ್ಯ ಒಕ್ಕೂಟ.

ಯಾರು ಆಗಮಿಸುತ್ತಿಲ್ಲ?
ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌, ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸಿ. ಜತೆಗೆ ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಮೆಕಿಕೋ, ಜಪಾನ್‌, ಇಟಲಿ, ಜರ್ಮನಿ, ಇಂಡೋ ನೇಷ್ಯಾ, ಬ್ರೆಜಿಲ್‌ ಮತ್ತು ಅರ್ಜೆಂಟಿನಾ ಸರಕಾರಗಳ ಮುಖ್ಯಸ್ಥರು ಆಗಮಿಸುತ್ತಿಲ್ಲ.

ಶೃಂಗದಲ್ಲಿ ಪ್ರಮುಖ ವಿಷಯಗಳ ಚರ್ಚೆ:
ಶುದ್ಧ ಇಂಧನ ಪರಿವರ್ತನೆ, ಪರಿಸರ ಬದಲಾವಣೆ, ಉಕ್ರೇನ್‌-ರಷ್ಯಾ ಯುದ್ಧ, ಬಡತನ ನಿರ್ಮೂಲನೆ, ವಿಶ್ವ ಬ್ಯಾಂಕ್‌ ಸೇರಿ ಬಹುಪಕ್ಷೀಯ ಬ್ಯಾಂಕ್‌ಗಳ ಸಾಮರ್ಥ್ಯ ಹೆಚ್ಚಳ ಸೇರಿದಂತೆ ಹಲವು ವಿಷಯಗಳು ಪ್ರಮುಖವಾಗಿ ಚರ್ಚೆಗೆ ಬರಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next