Advertisement
ಹರಿವಾಣದ ಮೌಲ್ಯ ಅಳೆಯಲು ನಿಯೋಜಿಸಲಾಗಿದ್ದ ಸರ್ ಹೇಡನ್ ಫಿಲಿಪ್ಸ್ ನೇತೃತ್ವದ ಸಮಿತಿ ತನ್ನ ವರದಿಯಲ್ಲಿ ಆಕಾರ, ವಿನ್ಯಾಸ ಮತ್ತು ಕಲಾವಂತಿಕೆಗಳಲ್ಲಿ ಇದು ವಿಶ್ವದ ಎಲ್ಲ ಬಿದ್ರಿ ಕಲಾಕೃತಿಗಳಿಗಿಂತ ಅತ್ಯುತ್ಕೃಷ್ಟ ಎಂದಿತ್ತು. ಮಧ್ಯಯುಗದಲ್ಲಿ ಏಷ್ಯಾದ ದಕ್ಷಿಣ ಭಾಗದಲ್ಲಿ ಸತುವಿನ ಬಳಕೆಯ ಬಗ್ಗೆ ಅಂದಿನ ಜನರಿಗಿದ್ದ ಜ್ಞಾನದ ಬಗ್ಗೆಯೂ ಹಲವಾರು ಮಾಹಿತಿ ಇದರ ಅಧ್ಯಯನದಿಂದ ಸಿಗುತ್ತವೆ ಎಂದು ಇತಿಹಾಸಕಾರರು ಹಾಗೂ ತಜ್ಞರು ಸರಕಾರಕ್ಕೆ ತಿಳಿಸಿದ್ದರು. ಈ ಎಲ್ಲ ಕಾರಣಗಳಿಂದ ಇದರ ರಫ್ತಿಗೆ ಕಡಿವಾಣ ಹಾಕಲಾಗಿದೆ ಎಂದು ಬ್ರಿಟನ್‌ನ ಕಲೆ ಮತ್ತು ಸಂಸ್ಕೃತಿ ಸಚಿವ ಮೈಕಲ್ ಎಲ್ಲೀಸ್ ತಿಳಿಸಿದ್ದಾರೆ.
ಹಗುರ ಲೋಹದ ಹಾಳೆ, ಎಳೆ ಬಳಸಿ ಹೂಜಿ, ಹುಕ್ಕಾ, ತಟ್ಟೆ ಇತ್ಯಾದಿಗಳ ಮೇಲೆ ಚಿತ್ತಾಕರ್ಷಕ ಕಲಾತ್ಮಕ ಚಿತ್ತಾರಗಳನ್ನು ರೂಪಿಸುವ ವಿಶಿಷ್ಟ ಕಲಾಕೌಶಲ ಬಿದ್ರಿ. ಈ ‘ಬಿದ್ರಿ’ ಹರಿವಾಣವು 1.1 ಅಡಿ ಉದ್ದ, 0.9 ಅಡಿ ಅಗಲವಿದೆ. ಕಳೆದ ವರ್ಷವೇ ಇದರ ಬೆಲೆ ವಿಶ್ವಮಟ್ಟದಲ್ಲಿ 69 ಲಕ್ಷ ರೂ.ಗಳೆಂದು ಅಂದಾಜಿಸಲಾಗಿತ್ತು. 1974ರಲ್ಲಿ ಟೋಬಿ ಜ್ಯಾಕ್ ಎಂಬ ಪ್ರಾಚೀನ ವಸ್ತುಗಳ ವ್ಯಾಪಾರಿಯಿಂದ ಲಂಡನ್ ಮೂಲದ ಬಶೀರ್ ಮೊಹಮ್ಮದ್ ಎಂಬವರು ಈ ಹರಿವಾಣವನ್ನು ಕೊಂಡಿದ್ದರು. ಅದು 1974ರಿಂದ 2017ರ ವರೆಗೆ ಅವರ ಬಳಿಯೇ ಇತ್ತು. ಈಗ ಅದು ಬ್ರಿಟಿಷ್ ಸರಕಾರದ ಸುಪರ್ದಿಯಲ್ಲಿದೆ. 69 ಲಕ್ಷ ರೂ. : ಈ ಅದ್ಭುತ ಹರಿವಾಣಕ್ಕೆ ದರ ನಿಗದ
ಬಹಮನಿ ಸುಲ್ತಾನರ ಕಾಲದಲ್ಲಿ ಅರಳಿದ ಬಿದ್ರಿ ಕಲಾ ಕೌಶಲ ಹರಿವಾಣ