Advertisement

ಸಾಮಾಜಿಕ ಸಮಸ್ಯೆಗೆ ಸಂಶೋಧನೆಯೇ ಪರಿಹಾರ

07:39 PM Mar 12, 2020 | Naveen |

ಬೀದರ: ಸಂಶೋಧನೆಗಳ ಗುಣಮಟ್ಟ ಪ್ರತಿಬಿಂಬಿಸುವುದರಲ್ಲಿ ಸಂಶೋಧಕರು ಪರಿಣಾಮಕಾರಿಯಾಗಿ ಆಸಕ್ತಿ ವಹಿಸಿದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಯಶ್ವಸಿ ಹೊಂದಲು ಸಾಧ್ಯ. ಸಂಶೋಧನೆಗಳ ಮೂಲಕ ಆಧುನಿಕ, ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸುಲಭವಾಗುತ್ತದೆ ಎಂದು ಸಂಸದ ಭಗವಂತ ಖೂಬಾ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಮಾಹಿತಿ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ (ಕೆಎಸ್‌ಟಿಎ) ಹಾಗೂ ಹೈ.ಕ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಬುಧವಾರ ನಗರದ ಬಿವಿಬಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರ ನಿರ್ಮಾಣಕ್ಕಾಗಿ ಹೊಸ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿನ ಅನ್ವೇಷಣೆ ವಿಷಯಾಧಾರಿತ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತ ಸರ್ಕಾರವು ಈ ದಿಸೆಯಲ್ಲಿ ಅನೇಕ ಸಂಶೋಧನೆಗಳ ಯೋಜನೆ ಹಾಕಿಕೊಂಡು ಪ್ರೋತ್ಸಾಹ ನೀಡುತ್ತಿದೆ. ಆದ್ದರಿಂದ ಪ್ರಾಧ್ಯಾಪಕರು ಮಕ್ಕಳಲ್ಲಿ ಆಸಕ್ತಿ ವಹಿಸುವಂತೆ ಮಾಡಿ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೆಎಸ್‌ಟಿಎ ಸಿಇಒ ಡಾ| ಎ.ಎಂ. ರಮೇಶ ಮಾತನಾಡಿ, ಖ್ಯಾತ ಸಂಶೋಧನಾ ಕೇಂದ್ರಗಳಲ್ಲಿ ಇಸ್ರೋ ಸಂಸ್ಥೆ ಒಂದಾಗಿದ್ದು, ಅನೇಕ ಸಂಶೋಧನೆ ನಡೆಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ವಿಜ್ಞಾನಿಗಳ ಸಾಧನೆ ಮಾದರಿಯಾಗಿಸಿ ಹೊಸ ತಾಂತ್ರಿಕತೆಗೆ ಹೆಚ್ಚಿನ ಮಹತ್ವ ಕೊಡಬೇಕು. ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ಸಂಶೋಧನೆ ಆಸಕ್ತಿ ಬೆಳೆಸುವುದು ಮತ್ತು ಮೂಲ ವಿಜ್ಞಾನಗಳತ್ತ ಸೆಳೆಯುವುದು ಸಮ್ಮೇಳನದ ಉದ್ದೇಶವಾಗಿದೆ ಎಂದು ಹೇಳಿದರು.

ಪುಣೆಯ ರಾಷ್ಟ್ರೀಯ ರಸಾಯನಿಕ ಪ್ರಯೋಗಾಲಯದ ಡಾ| ಪ್ರಕಾಶ ವಡಗಾಂವಕರ್‌ ಮಾತನಾಡಿ, ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನದ ಸಂಶೋಧನೆಯಲ್ಲಿ 3ನೇ ಸ್ಥಾನದಲ್ಲಿದೆ. ಹೊಸತನದ ಆಧಾರದ ಮೇಲೆ ವೈಜ್ಞಾನಿಕ ಸಂಶೋಧನೆ ನಡೆಯುವ ಅವಶ್ಯಕತೆ ಇದೆ ಎಂದರು.

Advertisement

ಹೈ.ಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಭೀಮಾಶಂಕರ ಬಿಲಗುಂದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಾಧ್ಯಾಪಕರು ಸಂಸ್ಥೆಯ ಆಧಾರ ಸ್ತಂಭವಾಗಿದ್ದು, ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ನಡುವಿನ ಸಂಬಂಧ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಆಸಕ್ತಿಯಿಂದ ಕಾರ್ಯನಿರ್ವಹಿಸಿದರೆ ಅಭಿವೃದ್ಧಿ ಸಾಧ್ಯ. ಸಂಸ್ಥೆಯು ಹೊಸದಾಗಿ ಕ್ಯಾಲಿಬ್ರೇಶನ್‌ ಹೆಲ್ತ್‌ ಸೆಂಟರ್‌ ಆ್ಯಂಡ್‌ ಆಟೋಮೊಬೈಲ್ಸ್‌ ಕ್ಯಾಲಿಬ್ರೇಶನ್‌ ಸೆಂಟರ್‌ಗಳನ್ನು ಪ್ರಾರಂಭಿಸಲಿದೆ. ಪಿಡಿಎ ಎಂಜಿನಿಯರಿಂಗ್‌ ಕಾಲೇಜು ನಾಲ್ಕು ಪೆಟೆಂಟ್‌ಗಳನ್ನು ಪಡೆದುಕೊಂಡಿದೆ ಎಂದು ಮಾಹಿತಿ ನೀಡಿದರು.

ಸಂಸ್ಥೆ ಉಪಾಧ್ಯಕ್ಷ ಡಾ| ಶಿವಾನಂದ ದೇವರಮನಿ, ಆಡಳಿತ ಮಂಡಳಿ ಸದಸ್ಯರಾದ ಸತೀಶ್ಚಂದ್ರ ಹಡಗಲಿಮಠ, ಸಂಚಾಲಕ ಡಾ| ಬಸವರಾಜ ಜಿ. ಪಾಟೀಲ, ಪ್ರೊ| ರಾಜಮೋಹನ ಪರದೇಶಿ ಇತರರು ಇದ್ದರು.

ಪ್ರಾಂಶುಪಾಲ ಡಾ| ಎಸ್‌.ಕೆ. ಸಾತನೂರ ಸ್ವಾಗತಿಸಿದರು. ರಜನಿ ನಿರೂಪಿಸಿದರು. ವಿಜ್ಞಾನಾಧಿ ಕಾರಿ ಉಮೇಶ ಘಾಟಗೆ ವಂದಿಸಿದರು. ಸಮ್ಮೇಳನದಲ್ಲಿ ವಿವಿಧ ಮಹಾವಿದ್ಯಾಲಯ ಹಾಗೂ ಹೊರ ರಾಜ್ಯಗಳ ಸುಮಾರು 400 ಪ್ರಾಧ್ಯಾಪಕರು, ಸಂಶೋಧಕರು, ವಿಜ್ಞಾನಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next