Advertisement

ಆವಿಷ್ಕಾರಕ್ಕೂ ಸಾಹಿತ್ಯ ರೂಪ ನೀಡಿ

01:25 PM Mar 02, 2020 | Naveen |

ಬೀದರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಗರದ ಡಾ| ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರವಿವಾರ ಅದ್ಧೂರಿ ತೆರೆ ಬಿದ್ದಿದೆ.

Advertisement

ಸಮ್ಮೇಳನಾಧ್ಯಕ್ಷರಾದ ಹಿರಿಯ ಸಾಹಿತಿ ಡಾ| ಸೋಮನಾಥ ಯಾಳವಾರ ಸರ್ವಾಧ್ಯಕ್ಷತೆಯಲ್ಲಿ ಎರಡು ದಿನಗಳ ಕಾಲ ವಿವಿಧ ಗೋಷ್ಠಿ, ಚಿಂತನ- ಮಂಥನ, ಬಹಿರಂಗ ಸಮಾವೇಶ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಜರುಗಿದವು.

ಅಕ್ಷರ ಜಾತ್ರೆಯಲ್ಲಿ ವಿವಿಧ ಜಿಲ್ಲೆಯ ಚಿಂತಕರು, ಸಾಹಿತಿಗಳು ಅನುಭಾವ ನಿವೇದನೆಗೈದರು. ಸಮಾರೋಪ ಭಾಷಣ ಮಾಡಿದ ಕಲಬುರಗಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ| ದೇವಿದಾಸ ಮಾಲೆ, ಜ್ಞಾನಾರ್ಜನೆಗೆ ಭಾಷೆಯೇ ಮೊದಲ ಮೆಟ್ಟಿಲು. ಭಾಷೆ, ಕಾವ್ಯ, ಗ್ರಂಥಗಳ ರಚನೆಗೆ ಮಾತ್ರ ಸಾಹಿತ್ಯ ಬೇಕಾಗಿಲ್ಲ. ಸಮಾಜದ ಎಲ್ಲ ಆಯಾಮಗಳಿಗೂ ಸಾಹಿತ್ಯ ಅವಶ್ಯವಾಗಿದೆ. ವಿಜ್ಞಾನ, ಸಮಾಜ, ಸಂಶೋಧನೆ, ಆವಿಷ್ಕಾರ ಎಲ್ಲದಕ್ಕೂ ಸಾಹಿತ್ಯದ ರೂಪ ಬೇಕು. ಇದರಿಂದ ಮಾತ್ರ ಜ್ಞಾನಾರ್ಜನೆ ಹೆಚ್ಚುತ್ತದೆ. ಈ ವಿಷಯದಲ್ಲಿ ವಿಶ್ವವಿದ್ಯಾಲಯಗಳು ಕೆಲಸ ಮಾಡುತ್ತಿವೆ ಎಂದರು.

ಅಳವಿನಂಚಿನಲ್ಲಿರುವ ಪ್ರಾದೇಶಿಕ ಭಾಷೆಗಳು ಉಳಿಸಿ-ಬೆಳೆಸಬೇಕಿದ್ದು, ಈ ದಿಸೆಯಲ್ಲಿ ಸಾಹಿತ್ಯ ಪರಿಷತ್‌ ಕಾರ್ಯ
ನಿರ್ವಹಿಸುತ್ತಿದೆ. ಇಂಥ ಸಮ್ಮೇಳನಗಳು ಹೆಚ್ಚೆಚ್ಚು ನಡೆಯುತ್ತಿರಬೇಕು. ಕಲಬುರಗಿ ವಿವಿಯಲ್ಲಿ ಇತ್ತೀಚೆಗೆ ನಡೆದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ
ಜರುಗಿದ್ದು, ನಾಡಿನೆಲ್ಲೆಡೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ. ಅದೇ ಮಾದರಿಯಲ್ಲಿ ಬೀದರ ಜಿಲ್ಲಾ ಸಮ್ಮೇಳನ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ ಎಂದರು.

ಜಿಲ್ಲೆಯ ಅಭಿವೃದ್ಧಿ ಸಾಧ್ಯತೆಗಳು: ಸಂವಾದ ಸೇರಿದಂತೆ ಸದ್ಯ ಪ್ರಸ್ತುತವಾದ ವಿಷಯಗಳನ್ನು ಮುಂದಿಟ್ಟುಕೊಂಡು ಚರ್ಚೆಗೆ ಒಳಪಡಿಸಿರುವುದು ಹಾಗೂ ನಿರ್ಣಯ ಕೈಗೊಂಡಿರುವುದು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು. ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ಮತ್ತು ಮಲಯ್ಯಗಿರಿ ಆಶ್ರಮದ ಡಾ| ಬಸವಲಿಂಗ ಅವಧೂತರು ನೇತೃತ್ವ ವಹಿಸಿದ್ದರು. ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ, ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ಬಸವ ಬಳಗದ ಅಧ್ಯಕ್ಷ ಬಾಬು ವಾಲಿ, ಉದ್ಯಮಿಗಳಾದ ಚಂದ್ರಶೇಖರ ಹೆಬ್ಟಾಳೆ, ಜಯರಾಜ ಖಂಡ್ರೆ, ಗುರಮ್ಮ ಸಿದ್ದಾರೆಡ್ಡಿ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ಬಸವರಾಜ ಬಲ್ಲೂರ, ಟಿ.ಎಂ ಮಚ್ಚೆ, ರಾಜಕುಮಾರ ಹೆಬ್ಟಾಳೆ ಇದ್ದರು. ಪ್ರಾಚಾರ್ಯ ಚನ್ನಬಸವ ಹೇಡೆ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next