Advertisement

ಆಸ್ಪತ್ರೆ-ಚೆಕ್‌ಪೋಸ್ಟ್‌ ಗೆ ಜಿಲ್ಲಾಧಿಕಾರಿ ಭೇಟಿ

04:27 PM Apr 25, 2020 | Naveen |

ಬೀದರ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮತ್ತು ಕೋವಿಡ್‌-19 ಕೊರೊನಾ ವೈರಾಣು ಹರಡುವಿಕೆ ತಡೆಗೆ ವಹಿಸಲಾದ ಕ್ರಮಗಳ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ್‌ ಭಾಲ್ಕಿ ತಾಲೂಕಿನಲ್ಲಿ ಪ್ರವಾಸ ಕೈಗೊಂಡು ಆಸ್ಪತ್ರೆಗಳು, ಚೆಕ್‌ಪೋಸ್ಟ್‌ ಮತ್ತು ಕ್ವಾರಂಟೈನ್‌ ಸೆಂಟರ್‌ಗಳಿಗೆ ಖುದ್ದು ಭೇಟಿ ನೀಡಿ ಮಾಹಿತಿ ಪಡೆದರು.

Advertisement

ಭಾಲ್ಕಿ ತಾಲೂಕು ಆಸ್ಪತ್ರೆ ಹಾಗೂ ಧನ್ನೂರ ಮತ್ತು ಖಟಕ್‌ ಚಿಂಚೋಳಿ ಪಿಎಚ್‌ಸಿಗಳಿಗೆ ಭೇಟಿ ನೀಡಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಜತೆಗೆ ಚರ್ಚಿಸಿದರು. ಆಶಾ ಕಾರ್ಯಕರ್ತೆಯರಿಗೆ ಆಗಾಗ ತರಬೇತಿಗೆ ವ್ಯವಸ್ಥೆ ಮಾಡಿ ಮನೆ ಮನೆ ಸರ್ವೇ ಕಾರ್ಯವನ್ನು ಮತ್ತೊಮ್ಮೆ ನಡೆಸಲು ಜಿಲ್ಲಾಧಿಕಾರಿಗಳು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಕಟ್ಟಿತುಗಾಂವ ಚೆಕ್‌ಪೋಸ್ಟಗೆ ಭೇಟಿ ನೀಡಿದ ಡಿಸಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದರು. ತಹಶೀಲ್ದಾರ್‌ ಅಣ್ಣಾರಾವ ಪಾಟೀಲ, ಡಿವೈಎಸ್‌ಪಿ ಡಾ| ಬಿ.ದೇವರಾಜ, ಗ್ರೇಡ್‌-2 ತಹಶೀಲ್ದಾರ ದಿಲ್‌ರಾಜ್‌ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next