Advertisement
ನಗರದ ಡಾ| ಚನ್ನಬಸವ ಪಟ್ಟದೇವರ ಪ್ರಸಾದ ನಿಲಯದಲ್ಲಿ ಜರುಗಿದ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಸಮಾಜವು ವೈಜ್ಞಾನಿಕವಾಗಿ ಪ್ರಗತಿ ಹೊಂದುತ್ತಿದೆ. ಆದರೆ, ಮಕ್ಕಳಲ್ಲಿ ಉತ್ತಮ ಸಂಸ್ಕಾರದ ಕೊರತೆ ಇದೆ. ಮಕ್ಕಳಲ್ಲಿ ಸಭ್ಯತೆ ಒಳ್ಳೆಯ ಗುಣಗಳು ಪರೋಪಕಾರ ನಿಸ್ವಾರ್ಥ ಸೇವೆ ಮಾಡುವ ಸಕರಾತ್ಮಕ ಗುಣಗಳು ಬೆಳೆಸುವಂತೆ ಅವರನ್ನು ಶರಣರ ಸಂತರ ಸತ್ಸಂಗದಲ್ಲಿ ಇದ್ದು ಶರಣರ ವಚನಗಳ ಮಹಾತ್ಮರ ಸಂದೇಶಗಳನ್ನು ಅಧ್ಯಯನ ಮಾಡುವಂತೆ ಪ್ರೇರೇಪಿಸಬೇಕು ಎಂದರು.
ಹೀನರಾಗಿದ್ದೇವೆ. ಮಕ್ಕಳಲ್ಲಿ ಚಾರಿತ್ರ್ಯವಂತಿಕೆ, ಉದಾರತೆ ಮಾನವಿಯ ಮೌಲ್ಯವನ್ನು ಬೆಳೆಸುವಂತೆ ಶರಣರ ಅನುಭಾವಗಳು ಮಕ್ಕಳ ಮನದಲ್ಲಿ ಬಿತ್ತುವಂತಹ ಪರಿಸರ ನಿರ್ಮಾಣ ಮಾಡಬೇಕಿದೆ ಎಂದು ಕರೆ ನೀಡಿದರು. ಶ್ರೀ ಮಹಾಲಿಂಗ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಮಾನವ ಸಂಸಾರವೆಂಬ ಜಂಜಾಟ, ದುರಾಸೆಯ ಮಡುವಿನಲ್ಲಿ ಬಿದ್ದು ಬಳಲುತ್ತಿದ್ದಾನೆ. ಇದರಿಂದ ಮುಕ್ತಿ ಹೊಂದಬೇಕಾದರೆ ಮಹಾನುಭಾವರ ಸತ್ಸಂಗದಲ್ಲಿದ್ದುಕೊಂಡು ಸದಾ ಸತ್ಕಾರ್ಯ ಸೇವೆಯಲ್ಲಿದ್ದು ಬದುಕಿನಲ್ಲಿ ಸಂತೃಪ್ತಿ ಪಡೆದುಕೊಳ್ಳಬೇಕು. ಆಗಲೇ ಹೃದಯ ವಿಕಸನವಾಗಿ ಜೀವನದ ಅಂತಿಮ ಸತ್ಯದ ಅರಿವು ಆಗುತ್ತದೆ ಎಂದು ನುಡಿದರು.
Related Articles
Advertisement
ಪ್ರೊ| ಉಮಾಕಾಂತ ಮೀಸೆ ನಿರೂಪಿಸಿ ನಾಗೇಶ ಬಿರಾದಾರ ವಂದಿಸಿದರು. ಶ್ರೀ ಕಾಂತ ಸ್ವಾಮಿ, ಚನ್ನಬಸಪ್ಪಾ ನೌಬಾದೆ, ವಚನಶ್ರೀ ನೌಬಾದೆ, ಕಿರಣಕುಮಾರ ಹಿರೇಮಠ ಅವರು ವಚನ ಗಾಯನ ನಡೆಸಿಕೊಟ್ಟರು. ಪ್ರಮುಖರಾದ ಮಲ್ಲಿಕಾರ್ಜುನ ಹುಡುಗೆ, ಎಂ.ಜಿ. ಗಂಗನಪಳ್ಳಿ, ಆರ್.ಎಸ್. ಬಿರಾದಾರ, ಸಂಗ್ರಾಮಪ್ಪಾ ಬಿರಾದಾರ, ಗುರುನಾಥ ಬಿರಾದಾರ, ನೀಲಕಂಠ ಬಿರಾದಾರ, ಸಿದ್ರಾಮಯ್ಯ ಹಿರೇಮಠ ಮತ್ತಿತರರು ಪಾಲ್ಗೊಂಡಿದ್ದರು.