Advertisement
ಸ್ವಂತ ಸೂರು, ಅಸ್ವಚ್ಛತೆ ಮತ್ತು ಮೂಲ ಸೌಕರ್ಯಗಳ ಕೊರತೆಯಿಂದ ಅಂಗನವಾಡಿಗಳು ನಲುಗುತ್ತಿದ್ದು, ಪುಟ್ಟ ಮಕ್ಕಳು ಅವ್ಯವಸ್ಥೆ ನಡುವೆಯೇ ಪಾಠ ಕಲಿಯುವಂತಹ ಅನಿವಾರ್ಯತೆ ಇದೆ. ಗಡಿ ಜಿಲ್ಲೆ ಬೀದರನಲ್ಲಿ 1,893 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಬಹುತೇಕ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಲತ್ತುಗಳ ಕೊರತೆ ವ್ಯಾಪಕವಾಗಿದೆ. ರಾಜ್ಯದಲ್ಲೇ ಅತಿಹೆಚ್ಚು ಅಪೌಷ್ಟಿಕ ಮಕ್ಕಳನ್ನು ಹೊಂದಿರುವ ಜಿಲ್ಲೆ ಎಂಬ ಅಪಖ್ಯಾತಿ ಹೊತ್ತಿದೆ. ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಸರ್ಕಾರ ಸಾಕಷ್ಟು ಯೋಜನೆಗಳ ಮೂಲಕ ಹಣ ಖರ್ಚು ಮಾಡುತ್ತಿದೆ. ಆದರೂ ಅಂಗನವಾಡಿ ಮಕ್ಕಳಿಗೆ ಸಮರ್ಪಕ ಆಹಾರ ತಲುಪದಿರುವುದು ವಿಪರ್ಯಾಸದ ಸಂಗತಿ.
Related Articles
Advertisement
ಕಲಿಕಾ ಚಟುವಟಿಕೆಗೆ ತೊಡಕುಸ್ವಂತ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಗಳ ಪೈಕಿ ಕೆಲವು ಮಾತ್ರ ಸುಸಜ್ಜಿತವಾಗಿವೆ. ಹಲವು ಕಡೆಗಳಲ್ಲಿ ಸೂಕ್ತ ನಿರ್ವಹಣೆಯಿಲ್ಲದೆ ಕಟ್ಟಡಗಳು ದುರವಸ್ಥೆಯಲ್ಲಿವೆ. ಮಕ್ಕಳು ಕಲಿಯುವ ಕೊಠಡಿಯ ಮೂಲೆಯಲ್ಲಿಯೇ ದಾಖಲೆಗಳ ಭದ್ರತೆ, ಆಹಾರ ಪದಾರ್ಥ ಸಂಗ್ರಹ, ಅಡುಗೆ ತಯಾರಿಕೆ ಮಾಡಬೇಕಾಗಿದೆ. ಸಮರ್ಪಕ ಗಾಳಿ ಬೆಳಕಿನ ವ್ಯವಸ್ಥೆ, ಮುರಿದ ಕಿಟಕಿಗಳು, ಸಿಮೆಂಟ್ ಕಿತ್ತು ಹೋದ ಬೆಡ್‌ಗಳ ಅವ್ಯವಸ್ಥೆ. ಅಲ್ಲಿಯೇ ಉಪಾಹಾರ ವಿತರಣೆ ಮಾಡಲಾಗುತ್ತಿದೆ. ಕೋಣೆ ಸುತ್ತಲೂ ಗಿಡ ಗಂಟೆ ಬೆಳೆದು ಅಸ್ವಚ್ಛತೆ ಹೆಚ್ಚಿದೆ. ಬಹುತೇಕ ಕೇಂದ್ರಗಳಲ್ಲಿ ಶೌಚಾಲಯವಿಲ್ಲದ ಕಾರಣ ಮಕ್ಕಳು ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಬೇಕಾಗಿದೆ. ಇಂಥ ಅವ್ಯವಸ್ಥೆ ಮತ್ತು ಅನೈರ್ಮಲ್ಯ ವಾತಾವರಣದ ನಡುವೆ ಪುಟ್ಟ ಮಕ್ಕಳ ಪೂರ್ವ ಪ್ರಾಥಮಿಕ ಕಲಿಕಾ ಚಟುವಟಿಕೆಗಳಿಗೆ ತೊಡಕಾಗುತ್ತಿದೆ. ಕನ್ನ ಹಾಕಿದರೆ ನಿರ್ದಾಕ್ಷಿಣ್ಯ ಕ್ರಮ
ಬೀದರ ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲದಿರುವುದು ಮತ್ತು ಮೂಲಭೂತ ಸೌಕರ್ಯ ಕೊರತೆ ಇರುವುದು ನಿಜ. ಈ ಬಗ್ಗೆ ಪಟ್ಟಿ ತಯಾರಿಸಿ ಕೇಂದ್ರ ಕಚೇರಿಗೆ ಕಳುಹಿಸಲಾಗಿದ್ದು, ಅಗತ್ಯ ಸೌಲತ್ತುಗಳನ್ನು ಕಲ್ಪಿಸಲು ಶೀಘ್ರದಲ್ಲೇ ಅನುದಾನ ಲಭ್ಯವಾಗಲಿದೆ. ಕೇಂದ್ರಗಳಲ್ಲಿ ಮಕ್ಕಳು, ಗರ್ಭೀಣಿಯರಿಗೆ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥ ವಿತರಣೆ ಮಾಡಲಾಗುತ್ತಿದೆ. ಆಹಾರಕ್ಕೆ ಕನ್ನ ಹಾಕುವವರನ್ನು ಅಮಾನತು ಮಾಡಲಾಗಿದ್ದು, ಇಂಥ ಪ್ರಕರಣಗಳು ವರದಿಯಾದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು.
ಶ್ರೀಕಾಂತ ಕುಲಕರ್ಣಿ,
ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೀದರ ಶಶಿಕಾಂತ ಬಂಬುಳಗೆ