Advertisement

Bidar; ರಾಜಿ ಸಂಧಾನದಲ್ಲಿ ಒಂದಾದ ಮೂರು ದಂಪತಿಗಳು

10:52 PM May 09, 2024 | Team Udayavani |

ಬೀದರ್ : ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಕೆ ಕನಕಟ್ಟೆ ಅವರ ಸಮ್ಮುಖದಲ್ಲಿ ರಾಜಿ ಸಂಧಾನದ ಮೂಲಕ ಮೂರು ದಂಪತಿಗಳನ್ನು ಒಂದು ಮಾಡಿ ಶುಭ ಹಾರೈಸಲಾಯಿತು.

Advertisement

ಮಹಿಳಾ ಪೊಲೀಸ್ ಠಾಣೆಯ ಸಿಪಿಐ ರಾಮಪ್ಪಾ ಸವಳಗಿ ಅವರು ರಾಜಿ ಸಂದಾನಕ್ಕಾಗಿ ಮೂವರು ದಂಪತಿಗಳ ಅರ್ಜಿಯನ್ನು ಪ್ರಾಧಿಕಾರಕ್ಕೆ ಕಳುಹಿಸಿದ್ದರು. ಸದಸ್ಯ ಕಾರ್ಯದರ್ಶಿಗಳು ನೋಟಿಸ್ ಮೂಲಕ ಮೂವರು ದಂಪತಿಗಳನ್ನು ಪ್ರಾಧಿಕಾರಕ್ಕೆ ಕರೆಯಸಿ ಅವರ ಕೌಟುಂಬಿಕ ಸಮಸ್ಯೆಗಳನ್ನು ಆಲಿಸಿದರು. ನಂತರ ಗಂಡನಿಗೆ ಬುದ್ಧಿಮಾತುಗಳನ್ನು ಹೇಳಿ ರಾಜಿ ಸಂಧಾನದ ಮೂಲಕ ಒಂದುಗೂಡಿಸಿದ್ದಾರೆ.

ತಾಲೂಕಿನ ಮೈಲೂರಿನ ಸುಮಯ್ಯಾ ಬೆಗಂ ಮತ್ತು ಪತಿ ಶಮಿ, ನೌಬಾದ್‌ನ ಪೂಜಾ ಮತ್ತು ಪತಿ ಸಂತೋಷ ಮತ್ತು ಸುಕಿರ್ತಾ ಮತ್ತು ಪತಿ ರಾಹುಲ ದಂಪತಿಗಳು ಒಂದಾದರು. ಈ ವೇಳೆ ಮಾತನಾಡಿದ ನ್ಯಾಯಾಧೀಶರಾದ ಕನಕಟ್ಟೆ, ದಂಪತಿಗಳಿಬ್ಬರು ಸಣ್ಣಪುಟ್ಟ ವಿಚಾರಗಳಿಗೆ ಪೋಲಿಸ್ ಠಾಣೆ, ನ್ಯಾಯಾಲಯಕ್ಕೆ ಅಲೆದಾಡುವ ಬದಲಾಗಿ ಮನೆಯ/ಗ್ರಾಮದ ಹಿರಿಯರ ಮಾತನ್ನು ಕೇಳಿ ನೆಮ್ಮದಿಯಿಂದ ಬದುಕಬೇಕು. ಆಗಲೇ ಸಂಸಾರಕ್ಕೊಂದು ಅರ್ಥ ಬರುತ್ತದೆ. ರಾಜಿ ಸಂಧಾನ ಮಾಡಿಕೊಂಡ ದಂಪತಿಗಳು ಮುಂದೆ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಬದುಕು ಸಾಗಿಸಬೇಕೆಂದು ಸಲಹೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಗುಂಡುರೆಡ್ಡಿ, ಲೋಕಾಯುಕ್ತ ಅಭಿಯೋಜಕ ಕೇಶವ ಶ್ರೀಮಾಳೆ, ಹಿರಿಯ ವಕೀಲ ಬಿ.ಎಸ್ ಪಾಟೀಲ, ಪ್ರಾಧಿಕಾರದ ಸಿಬ್ಬಂದಿಗಳಾದ ಜಗದೀಶ್ವರ ದೊರೆ, ಆಕಾಶ ಸಜ್ಜನ್, ರಾಹುಲ್, ಪ್ರೀತಿ ಜಿ.ಕೆ, ಜೀವನ್, ಯೋಹನ್ ಕಾಳೆ ಮತ್ತು ಈರಮ್ಮ ಸೇರಿದಂತೆ ದಂಪತಿಗಳಿಗೆ ಸಂಬಂಧಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next