Advertisement
ಶೇ.40ಕ್ಕೂ ಕಡಿಮೆ ಫಲಿತಾಂಶ ಪಡೆದ ಸರ್ಕಾರಿ 8 ಕಾಲೇಜುಗಳು, ಅನುದಾನಿತ 22 ಹಾಗೂ ಅನುದಾನ ರಹಿತ 21 ಒಟ್ಟಾರೆ, 51 ಕಾಲೇಜುಗಳಿಗೆ ಪ.ಪೂ ಇಲಾಖೆ ನೋಟಿಸ್ ಜಾರಿ ಮಾಡಲಿದೆ ಎಂದು ತಿಳಿದುಬಂದಿದ್ದು, ಯಾವ ಕಾರಣಕ್ಕೆ ಫಲಿತಾಂಶದಲ್ಲಿ ಕುಸಿತ ಕಂಡಿದೆ? ವಿದ್ಯಾರ್ಥಿಗಳು ಪಾಸ್ ಆಗದಿರಲು ಮುಖ್ಯ ಕಾರಣ ಏನು? ಆಯಾ ವಿಷಯಗಳ ಉಪನ್ಯಾಸಕರ ಜವಾಬ್ದಾರಿ ಸೇರಿದಂತೆ ಹತ್ತಾರು ಪ್ರಶ್ನೆಗಳು ನೋಟಿಸ್‌ನಲ್ಲಿ ಕೇಳಲಾಗುತ್ತಿದೆ ಎಂದು ತಿಳಿದು ಬಂದಿದ್ದು, ಕಡಿಮೆ ಫಲಿತಾಂಶ ಬಂದ ಕಾಲೇಜುಗಳ ಮುಖ್ಯಸ್ಥರು ಪ.ಪೂ ಶಿಕ್ಷಣ ಇಲಾಖೆ ಅಧಿಕಾರಿಗೆ ಸೂಕ್ತ ಉತ್ತರ ನೋಟಿಸ್ ಮುಟ್ಟಿದ ನಂತರ ನೀಡಬೇಕಾಗಿದೆ.
Related Articles
Advertisement
ಮನಸ್ಥಿತಿ ಬದಲಾಗಬೇಕು: ಸರ್ಕಾರಿ ಉಪನ್ಯಾಸಕರು ಹೊರಗಿನ ಎಲ್ಲ ಜಂಜಡ ಬದಿಗೊತ್ತಿ ಕಾಲೇಜಿನಲ್ಲಿ ಪ್ರವೇಶಿಸಿದ ನಂತರ ಬೋಧನೆಗೆ ಹೆಚ್ಚಿನ ಒತ್ತು ನೀಡಬೇಕು. ಶಿಕ್ಷಕ ಹೇಳುವ ಬೋಧನಾ ಕ್ರಮ ಕಾಲೇಜಿನ ವಿದ್ಯಾರ್ಥಿಗಳ ಮೆದುಳಿನೊಳಗೆ ದಾಖಲೆಯಾಗುವಂತೆ ಮಾಡಬೇಕು. ಉಪನ್ಯಾಸಕರು ಹಾಕಿಕೊಂಡಿರುವ ಇತಿ-ಮಿತಿಗಳಿಂದ ಎದ್ದು ಹೊರಬರಬೇಕು. ಎಲ್ಲಿಯೂ ಸ್ವಾರ್ಥ ಭಾವನೆ ಬರಬಾರದು. ಯಾರು ಜವಾಬ್ದಾರಿಗಳಿಗೆ ಹೆಗಲು ಕೊಡುತ್ತಾರೋ ಅವರು ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ ಎಂಬುವುದನ್ನು ಶಿಕ್ಷರು ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಕಾಣಬೇಕು. ನಮ್ಮ ಮಕ್ಕಳಿಗೆ ಒದಗಿಸುವ ನ್ಯಾಯ ಆ ಮಕ್ಕಳಿಗೂ ಸಿಗುವಂತಾಗಬೇಕು. ತಾರತಮ್ಯ ಮನೋಭಾವನೆಗಳು ಬರಬಾರದು. ಬೋಧಿಸುವ ಸಂದರ್ಭದಲ್ಲಿ ಯಾವ ಕಲ್ಮಶಗಳು ಶಿಕ್ಷಕನಲ್ಲಿ ಇರಬಾರದು. ಶಿಕ್ಷಕ ಬೋಧನೆ ಜೊತೆ ಓದುವ ಗೀಳನ್ನು ಬೆಳೆಸಿಕೊಳ್ಳಬೇಕು ಎಂಬ ಅಭಿಪ್ರಾಯಗಳು ಜಿಲ್ಲೆಯ ಅನೇಕ ಬುದ್ಧಿಜೀವಿಗಳು, ಸಾಹಿತಿಗಳ ಅಭಿಪ್ರಾಯವಾಗಿದೆ.
ಅನುದಾನಿತ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರಿಗೆ ಕೆಲಸ ಮಾಡಿದರೂ ಸಂಬಳ ಸಿಗುತ್ತೆ; ಮಾಡದಿದ್ದರೂ ಸಂಬಳ ಸಿಗುತ್ತಿದೆ. ಹೀಗಾಗಿ ಜವಾಬ್ದಾರಿಯಿಂದ ಕರ್ತವ್ಯ ನಿಭಾಯಿಸುತ್ತಿಲ್ಲ. ಜೊತೆಗೆ ಮೂಲ ಸೌಲಭ್ಯ ಕೊರತೆ ಕೂಡ ಇದೆ. ಆದರೆ ಖಾಸಗಿ ಅನುದಾನ ರಹಿತ ಸಂಸ್ಥೆಗಳಲ್ಲಿ ಆಡಳಿತ ಮಂಡಳಿ ಮೇಲುಸ್ತುವಾರಿ ಮಾಡುವ ಕಾರಣ ಫಲಿತಾಂಶ ಉತ್ತಮವಾಗಿ ಬರುತ್ತಿದೆ.•ಅವಿನಾಶ ಭಂಡಾರಿ, ವಿದ್ಯಾರ್ಥಿ ಕಳಪೆ ಸಾಧನೆ ಪ್ರದರ್ಶಿಸಿದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳಿಗೆ ಪ.ಪೂ ಶಿಕ್ಷಣ ಇಲಾಖೆಯಿಂದ ಕಾರಣ ಕೇಳಿ ನೋಟಿಸ್ ಜಾರಿಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಶೇ.40ಕ್ಕೂ ಕಡಿಮೆ ಫಲಿತಾಂಶ ಪಡೆದ ಕಾಲೇಜುಗಳಿಗೆ ಮಾತ್ರ ನೋಟಿಸ್ ನೀಡಲಾಗುತ್ತಿದೆ. ಕಾಲೇಜು ಮುಖ್ಯಸ್ಥರ ಉತ್ತರ ಬಂದ ನಂತರ ಎಲ್ಲ ಕಾಲೇಜುಗಳ ಪ್ರಾಚಾರ್ಯರ ಸಭೆ ನಡೆಸಿ, ಹೇಗೆ ಸುಧಾರಣೆ ಮಾಡಬೇಕು ಎಂಬ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು. ಹೆಚ್ಚಿನ ಫಲಿತಾಂಶಕ್ಕೆ ಎಲ್ಲ ಕಾಲೇಜುಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುವುದು.
•ಮಲ್ಲಿಕಾರ್ಜುನ,
ಡಿಡಿಪಿಯು ಬೀದರ ಇರುವ ಉಪನ್ಯಾಸಕರಿಗೆ ಕಲಿಸುವ ಇಚ್ಛಾಶಕ್ತಿಯಿಲ್ಲ. ಅನುದಾನ ರಹಿತ ಶಾಲಾ-ಕಾಲೇಜು ಉಪನ್ಯಾಸಕರಿಗೆ ಕಾಯಂ ಕೆಲಸದ ಭರವಸೆ ಇಲ್ಲದ ಕಾರಣ ಅವರು ಕಷ್ಟಪಟ್ಟು ಪಾಠ ಕಲಿಸುತ್ತಾರೆ. ಕಡಿಮೆ ಸಂಬಳ ಪಡೆದು ಉತ್ತಮ ಫಲಿತಾಂಶ ಬರುವುದಾದರೆ ಹೆಚ್ಚಿನ ಸಂಬಳ ಪಡೆದು ಏಕೆ ಹೆಚ್ಚಿನ ಫಲಿತಾಂಶ ಬರಬಾರದು. ಕಡಿಮೆ ಫಲಿತಾಂಶ ಬರುವ ಕಾಲೇಜುಗಳಿಗೆ ಸರ್ಕಾರ ಶಿಕ್ಷಿಸುವ ಕಾರ್ಯ ನಡೆಯಬೇಕು.
•ಮಲ್ಲಿಕಾರ್ಜುನ ಹಲಮಂಡಗೆ,
ಶಿಕ್ಷಣ ತಜ್ಞ, ಭಾಲ್ಕಿ
ಬಹುತೇಕ ಸರ್ಕಾರಿ ಹಾಗೂ ಖಾಸಗಿ ಪ.ಪೂ ಕಾಲೇಜುಗಳಲ್ಲಿ ಸಮಪರ್ಕ ಮೂಲಭೂತ ಹಾಗೂ ಉಪನ್ಯಾಸಕ ಕೊರತೆ ಮತ್ತು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ಶಿಕ್ಷಣ ವ್ಯಾಪಾರೀಕರಣ ಮಾಡಿಕೊಂಡಿವೆ. ಇದರಿಂದ ಪಿಯುಸಿ ಫಲಿತಾಂಶ ಕಡಿಮೆ ಬರಲು ಪ್ರಮುಖ ಕಾರಣವಾಗಿದ್ದು, ಇದನ್ನು ಸರಿಪಡಿಸಬೇಕು.
•ಲೋಕೇಶ ಮೋಳಕೇರೆ,
ವಿದ್ಯಾರ್ಥಿ, ಬಸವಕಲ್ಯಾಣ ಇರುವ ವ್ಯವಸ್ಥೆ ಸರಿಪಡಿಸಿ ಗುಣಮಟ್ಟದ ಶಿಕ್ಷಣ ನೀಡಬಹುದು. ಕಳೆದೆರಡು ವರ್ಷಗಳಿಂದ ರಾಮ ಮತ್ತು ರಾಜ ಕಾಲೇಜು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುತ್ತಿದೆ. ಐದು ಜನ ಕಾಯಂ ಸಿಬ್ಬಂದಿ ಇದ್ದು, ಉಳಿದಂತೆ ಇತರೆ ಎಲ್ಲ ವಿಷಯ ಉಪನ್ಯಾಸಕರನ್ನು ಸಂಸ್ಥೆಯವರು ನೇಮಕಗೊಳಿಸಿ ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಮುಂದಾಗಿರುವುದು ಕಾಲೇಜು ಸಾಧನೆಗೆ ಕಾರಣವಾಗಿದೆ.
•ಮಲ್ಲಿನಾಥ ಚಿಂಚೋಳಿ,
ಅನುದಾನಿತ ಕಾಲೇಜು ಪ್ರಾಚಾರ್ಯ, ಹುಮನಾಬಾದ ಸರ್ಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳಲ್ಲಿ ವಿಷಯವಾರು ಉಪನ್ಯಾಸಕರ ಕೊರತೆ ಫಲಿತಾಂಶಕ್ಕೆ ಮುಖ್ಯ ಕಾರಣವಾಗಿದೆ. ಫಲಿತಾಂಶ ಸುಧಾರಣೆ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲ ಸೌಲಭ್ಯ ಕಲ್ಪಿಸಿದರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.
•ಬಸವರಾಜ ಸ್ವಾಮಿ,
ಪ್ರಾಚಾರ್ಯರು, ಭಾಲ್ಕಿ ಸರ್ಕಾರಿ ಪ.ಪೂ ಕಾಲೇಜು ಎಸ್ಸೆಸ್ಸೆಲ್ಸಿವರೆಗೆ ಉರ್ದು, ಮರಾಠಿ ಸೇರಿದಂತೆ ಬಹುಭಾಷೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸಲಾಗುತ್ತದೆ. ಆದರೆ ಪಿಯುಸಿಯಲ್ಲಿ ಪ್ರವೇಶ ಪಡೆದುಕೊಂಡ ನಂತರ ಕೇವಲ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ವಿಷಯವಾರು ಉಪನ್ಯಾಸಕರ ಕೊರತೆ ಇರುವುದು ಹಾಗೂ ಶೇ.70 ಪ್ರತಿಭಾವಂತ ವಿದ್ಯಾರ್ಥಿಗಳು ಬೇರೆ ಜಿಲ್ಲೆಯ ಕಾಲೇಜುಗಳಲ್ಲಿ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವುದೇ ತಾಲೂಕಿನ ಒಟ್ಟಾರೆ ಪಿಯುಸಿ ಫಲಿತಾಂಶ ಕಡಿಮೆ ಬರಲು ಮುಖ್ಯ ಕಾರಣ.
•ಸುರೇಶ ಅಕ್ಕಣ್ಣ,
ಪ್ರಾಚಾರ್ಯ, ನೀಲಾಂಬಿಕಾ ಪ.ಪೂ ಕಾಲೇಜು, ಬಸವಕಲ್ಯಾಣ ಗುಣಮಟ್ಟದ ಫಲಿತಾಂಶ ಇರುವ ಮಕ್ಕಳೆಲ್ಲರೂ ಹೆಸರಾಂತ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಕಾರಣ ಸರ್ಕಾರಿ, ಅನುದಾನಿತ ಕಾಲೇಜುಗಳಲ್ಲಿ ಸಾಮಾನ್ಯ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆಯುತ್ತಿರುವುದು ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ವಿಷಯ ಉಪನ್ಯಾಸಕರ ಕೊರತೆ ಇರುವ ಕಾರಣ ಅತಿಥಿ ಉಪನ್ಯಾಸಕರೇ ಪಾಠ ಮಾಡುವುದು ಮತ್ತು ನಿರೀಕ್ಷಿತ ಪ್ರಮಾಣದಲ್ಲಿ ಮೂಲಸೌಲಭ್ಯಗಳಿಲ್ಲದಿರುವದರಿಂದ ಫಲಿತಾಂಶ ಕುಸಿಯುತ್ತಿದೆ. ಅನುದಾನಿತ ಕಾಲೇಜುಗಳಲ್ಲಿನ ಉಪನ್ಯಾಸಕರು ನಿವೃತ್ತರಾದ ನಂತರ ಹೊಸ ಉಪನ್ಯಾಸಕರ ನಿಯೋಜನೆ ಪ್ರಕ್ರಿಯೆ ನಡೆಯದೇ ಅತಿಥಿ, ಅರೆ ಕಾಲಿಕ ಉಪನ್ಯಾಸಕರು ವರ್ಗ ತೆಗೆದುಕೊಳ್ಳುವುದರಿಂದ ಫಲಿತಾಂಶ ಗಣನೀಯ ಕುಸಿತಕ್ಕೆ ಕಾರಣ ಇರಬಹುದು.
•ಶಾಂತವೀರ ಯಲಾಲ್,
ಅನುದಾನಿತ ಕಾಲೇಜು ಪ್ರಾಚಾರ್ಯ ದುರ್ಯೋಧನ ಹೂಗಾರ