ಬೀದರ: ಉತ್ತರ ಭಾರತದ ವಿವಿಧೆಡೆ ಕಂಡುಬರುವ”ನೀಲಗಾಯ್’ಗಳು ಕರ್ನಾಟಕದಲ್ಲಿಯೇ ಪ್ರಥಮವಾಗಿ ಗಡಿನಾಡು ಬೀದರನಲ್ಲಿ ಕಾಣಿಸಿಕೊಂಡಿವೆ. ಜಿಲ್ಲೆಯಔರಾದ ಮತ್ತು ಕಮಲನಗರ ತಾಲೂಕಿನಲ್ಲಿ ಅಪರೂಪದ ಪ್ರಾಣಿಗಳು ಇರುವಿಕೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಗಡಿ ಗ್ರಾಮಗಳಾದ ನಂದಿ ಬಿಜಲಗಾಂವ್, ಮುರ್ಕಿಸೇರಿ ಇನ್ನಿತರ ಗ್ರಾಮಗಳಲ್ಲಿ ಕಳೆದ ಹದಿನೈದು ದಿನಗಳ ಅವಧಿಯಲ್ಲಿ ಎರಡು ಹಿಂಡುಗಳ ಅವಧಿ ಯಲ್ಲಿ 30ಕ್ಕೂ ಹೆಚ್ಚುನೀಲಗಾಯಿಗಳು ಪತ್ತೆಯಾಗಿವೆ. ಅದರಲ್ಲಿ 11 ಗಂಡು,21 ಹೆಣ್ಣು ಮತ್ತು 3 ಮರಿ ನೀಲಗಾಯಿಗಳು ಸೇರಿದ್ದವು.ಉತ್ತಮ ಮಳೆಯಿಂದ ಭೂಮಿ ಹಸಿರಾಗಿರುವ ಹಿನ್ನೆಲೆಆಹಾರ ಹುಡುಕಿಕೊಂಡು ಹಿಂಡು ಬರಲಾರಂಭಿಸಿವೆ.
ಆಹಾರ ಅರಸುತ್ತ ಮುಂದೆ ಸಾಗುವ ಈ ಪ್ರಾಣಿಗಳನ್ನುಜಿಲ್ಲಾ ಅರಣ್ಯ ಸಂರಕ್ಷಣಾ ಧಿಕಾರಿ ಶಿವಶಂಕರ ಎಸ್. ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.ಹೊಲಗಳಲ್ಲಿ ಅಪರೂಪದ ಪ್ರಬೇಧಗಳನ್ನುಕಂಡ ಗ್ರಾಮಸ್ಥರು ಗಾಬರಿಗೊಂಡುಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ.ತಕ್ಷಣ ಅ ಧಿಕಾರಿ-ಸಿಬ್ಬಂದಿಗಳ ತಂಡ ಪರಿಶೀಲನೆನಡೆಸಿ, ಅವು ಹುಲ್ಲುಗಾವಲು ಪ್ರದೇಶದಲ್ಲಿ ಆಹಾರಅರಸುತ್ತ ಸಂಚರಿಸುವ ನೀಲಗಾಯಿ ಎಂಬುದನ್ನುಖಚಿತಪಡಿಸಿದಾಗ ಅಲ್ಲಿನ ಜನರು ನಿಟ್ಟಿಸಿರು ಬಿಟ್ಟಿದ್ದಾರೆ.ವನ್ಯಜೀವಿ ಛಾಯಾಗ್ರಾಹಕ ವಿವೇಕ್ ಬಿ. ಅಪರೂಪದನೀಲಗಾಯಿಗಳ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.
ಬೀದರಜಿಲ್ಲೆಯಲ್ಲಿ ಈಗಾಗಲೇ ಕೃಷ್ಣಮೃಗ, ಚಿಂಕಾರಾ, ಕೊಂಡುಕುರಿ ಮೂರು ಬಗೆಯ ಜಿಂಕೆಗಳಿದ್ದು, ಈಗ ನಾಲ್ಕನೇಪ್ರಬೇಧ ಸೇರಿದಂತಾಗಿದೆ.ಜಿಲ್ಲೆಯಲ್ಲಿ ಈ ಹಿಂದೆ 2012ರಲ್ಲಿಯೂನೀಲಗಾಯಿಗಳು ಕಾಣಿಸಿದ್ದವು ಎಂದೆನ್ನಲಾಗಿದೆ. ಆದರೆ, ಈಕುರಿತು ದಾಖಲೆಗಳಿಲ್ಲ. ನಂತರ 2018ರಲ್ಲಿ ಕರ್ನಾಟಕದಭದ್ರಾ ಮತ್ತು 1956ರಲ್ಲಿ ಬಂಡಿಪುರದಲ್ಲಿ ತಲಾ ಒಂದುನೀಲಗಾಯಿ ಕಾಣಿಸಿತ್ತು ಎಂದು ಛಾಯಾಗ್ರಾಹಕ ವಿವೇಕ್‌ಅಭಿಪ್ರಾಯಪಟ್ಟಿದ್ದಾರೆ.