Advertisement

ಬೀದರ್: ಬೈಕ್ ನಲ್ಲಿ ಗಾಂಜಾ ಸಾಗಾಟ; ಪೊಲೀಸರ ದಾಳಿ, ಆರೋಪಿಗಳು ಪರಾರಿ

08:23 PM Sep 13, 2020 | Mithun PG |

ಬೀದರ್: ಬೈಕ್ ಮೇಲೆ ಅಕ್ರಮವಾಗಿ ಸಾಗಿಸುತ್ತಿದ್ದ 60 ಸಾವಿರ ರೂ. ಮೌಲ್ಯದ 12 ಕೆ.ಜಿ ಗಾಂಜಾ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ಬೀದರ್ ಸೈಬರ್ ಕ್ರೈಮ್ ಪೊಲೀಸರು ಜಪ್ತಿ ಮಾಡಿಕೊಂಡಿರುವ ಘಟನೆ ಶನಿವಾರ ರಾತ್ರಿ ಔರಾದ ತಾಲೂಕಿನ ಚಿಕ್ಲಿ ಬಾಜಿರಾಂ ತಾಂಡಾ ಬಳಿ ನಡೆದಿದೆ.

Advertisement

ತೆಲಂಗಾಣಾದಿಂದ ಜಿಲ್ಲೆಗೆ ಗಾಂಜಾ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಸೈಬರ್ ಕ್ರೈಮ್ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಗಾಂಜಾ ಸಾಗಾಟದಾರರು ಪರಾರಿಯಾಗಿದ್ದಾರೆ.

ತಾಂಡಾಗಳಿಗೆ ಎಸ್.ಪಿ ಭೇಟಿ:

ಔರಾದ ತಾಲೂಕಿನ ವಿವಿಧ ತಾಂಡಾಗಳಲ್ಲಿ ಗಾಂಜಾ ಬೆಳೆಸುವುವರ, ಸಾಗಾಟ ಮತ್ತು ಮಾರಾಟ ಕುರಿತು ದೂರುಗಳು ಬಂದ ಹಿನ್ನಲೆಯಲ್ಲಿ ರವಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್ ನಾಗೇಶ ಮತ್ತು ಅಧಿಕಾರಿಗಳ ತಂಡ ವಿವಿಧ ತಾಂಡಾಗಳಿಗೆ ಭೇಟಿ ಪರಿಶೀಲಿಸಿದೆ. ಗಾಂಜಾ ಸಾಗಾಟ ಅಕ್ರಮ, ಅಪರಾಧವಾಗಿದ್ದು, ಈ ಕೃತ್ಯದಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಯಾವುದೇ ಗಾಂಜಾ ಜಪ್ತಿ ಆಗಿಲ್ಲ ಎಂದು ಎಸ್.ಪಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next