ಹಾಗೂ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಟೀಕಿಸಿದರು.
Advertisement
ನಗರದಲ್ಲಿ ಶುಕ್ರವಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರು ಸಮರ್ಥ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.
Related Articles
ಅಧಿಕಾರಿಗಳ ಜೊತೆ ಚರ್ಚಿಸದೇ ಏಕಾಏಕಿ
ಗರಿಷ್ಠ ಮುಖ ಬೆಲೆಯ ನೋಟುಗಳ ಚಲಾವಣೆ
ರದ್ದುಗೊಳಿಸುವ ಮೂಲಕ ದೇಶದ ಜನರ
ಮೇಲೆ ಗದಾಪ್ರಹಾರ ನಡೆಸಿದ್ದಾರೆ. ಆ ಕರಾಳ
ದಿನಗಳನ್ನು ದೇಶದ ಜನ ಇನ್ನೂ ಮರೆತಿಲ್ಲ
ಎಂದು ಜರಿದರು.
Advertisement
ಯುಪಿಎ ಅವಧಿಯಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ವಿರುದ್ಧ ಎಂಟು ಬಾರಿ ಸರ್ಜಿಕಲ್ ಸ್ಟ್ರೆಕ್ ನಡೆಸಿದ್ದರೂ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಎಲ್ಲಿಯೂ ಬಹಿರಂಗಪಡಿಸಲಿಲ್ಲ. ಆ ವಿಷಯಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲಿಲ್ಲ. ಕಾರಣ ದೇಶದಸುರಕ್ಷತೆ ಮುಖ್ಯ ಎಂದು ತಿಳಿದು ದೇಶಕ್ಕೆ ಹಾನಿ ಉಂಟುಮಾಡುವ ವಿಷಯಗಳನ್ನು ಸಾರ್ವಜನಿಕ ಮಾಡಲಿಲ್ಲ. ಆದರೆ, ಮೋದಿ ಅವಧಿಯಲ್ಲಿ ಸೇನೆಯು ಎರಡು ಬಾರಿ ಸರ್ಜಿಕಲ್ ಸ್ಟ್ರೆಕ್ ಮಾಡಿರುವುದನ್ನು ಭಾರಿ ಪ್ರಮಾಣದಲ್ಲಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಖಂಡನೀಯ ವಿಷಯವಾಗಿದೆ. ದೇಶದ ಸೈನಿಕರು ಎಲ್ಲಾ ಸರ್ಕಾರಗಳ ಆಡಳಿತದಲ್ಲಿ ದೇಶದ ಹಿತ ಕಾಪಾಡುವ ಕೆಲಸ ಮಾಡಿದ್ದಾರೆ. ಸೈನಿಕರ ಹೆಸರಲ್ಲಿ ರಾಜಕೀಯ ಸಲ್ಲದು ಎಂದರು. ಆದಾಯ ತೆರಿಗೆ ಇಲಾಖೆ ಸೇರಿದಂತೆ ಪ್ರಮುಖ ಸ್ವಾಯತ್ತ ಸಂಸ್ಥೆಗಳನ್ನು ಮೋದಿ ಅವರು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿರುವುದು ಹಾಗೂ ದೇಶದ ವೈವಿಧ್ಯತೆಯಲ್ಲಿ ನಂಬಿಕೆ ಇಟ್ಟುಕೊಂಡು, ಅವರವರ ಆಚಾರ-ವಿಚಾರಗಳಂತೆ ಬದುಕಲು ಅವಕಾಶ ಕಲ್ಪಿಸಿರುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇವೆ ಎಂದು ಬಿಜೆಪಿಯವರು ಬೀಗುತ್ತಿದ್ದಾರೆ. ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಮೊತ್ತದ ಹಗರಣ ಎಲ್ಲೆಡೆ ಚರ್ಚೆಯಾಗುತ್ತಿದೆ. ಪ್ಲಾಷ್ಟಿಕ್ ವಿಮಾನ ತಯಾರಿಸಿದ ಕಂಪನಿಯೊಂದಿಗೆ ಹೇಗೆ ಒಪ್ಪಂದ ಮಾಡಿಕೊಂಡರು ಎಂದು ಪ್ರಶ್ನಿಸಿದ್ದಾರೆ. ದೇಶ ಹಿತದೃಷ್ಟಿಯಿಂದ ಈ ಬಾರಿಯ ಲೋಕಸಭಾ
ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಪ್ರಸ್ತುತ ನಡೆಯುತ್ತಿರುವುದು ವಿಚಾರಗಳ ನಡುವಿನ ಹೋರಾಟವೇ ಹೊರತು, ಪಕ್ಷಗಳ ನಡುವಿನ ಚುನಾವಣೆಯಲ್ಲ ಎಂದ ಅವರು, ಬೀದರ್ ಕ್ಷೇತ್ರದ ಅಭ್ಯರ್ಥಿ ಈಶ್ವರ ಖಂಡ್ರೆ ಅವರಿಗೆ ಜಿಲ್ಲೆಯ ಜನರು ಬೆಂಬಲಿಸಬೇಕು. ಬೀದರ ಧ್ವನಿ ದೆಹಲಿಗೆ ಮುಟ್ಟಿಸಬೇಕು ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಎಂ.ಎ. ಸಮಿ, ದತ್ತಾತ್ರಿ ಮುಲಗೆ, ಬಸಿರೋದ್ದಿನ್ ಹಾಲಹಿಪ್ಪರಗಾ ಇತರರು ಇದ್ದರು.