Advertisement

ಭಾಲ್ಕಿಯಲ್ಲಿ ಖಂಡ್ರೆ ಕುಟುಂಬದ ಪಾರುಪತ್ಯ

02:57 PM Apr 19, 2019 | |

ಭಾಲ್ಕಿ: ಪ್ರತಿ ಚುನಾವಣೆಯಲ್ಲಿ ಕೂತೂಹಲ ಕೆರಳಿಸುವ ಭಾಲ್ಕಿ ಮತ ಕ್ಷೇತ್ರದ ಹಾಲಿ ಶಾಸಕ ಈಶ್ವರ್‌ ಖಂಡ್ರೆ ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿರುವುದು ಭಾರಿ ಕುತೂಹಲ ಹುಟ್ಟಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿಯ ಪರವಾಗಿರುವ ಇಲ್ಲಿಯ ಮತದಾರರು, ಲೋಕಸಭಾ
ಚುನಾವಣೆಯಲ್ಲಿ ರಾಷ್ಟ್ರೀಯ ಭಾವೈಕ್ಯತೆಗೆ ತಕ್ಕಂತೆ ಮತ ಚಲಾಯಿಸುತ್ತಾ ಬಂದಿರುವುದು ವಾಡಿಕೆ. ಇದಕ್ಕೆ ಹಿಂದಿನ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 70,795 ಮತಗಳನ್ನು ಪಡೆದರೆ ಕಾಂಗ್ರೆಸ್‌ 48,914 ಮತಗಳನ್ನಷ್ಟೇ ಪಡೆದಿತ್ತು. ಇದೀಗ ಭಾಲ್ಕಿ ಕ್ಷೇತ್ರದ ಅಭ್ಯರ್ಥಿಯೇ ಚುನಾವಣಾ ಕಣದಲ್ಲಿ ಇರುವ ಕಾರಣ ಮತದಾರರು ಸ್ಪಂದಿಸುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.

Advertisement

ಸ್ವಾತಂತ್ರ್ಯಾ ನಂತರ ನಡೆದ ಎಲ್ಲಾ ವಿಧಾನ ಸಭೆ ಚುನಾವಣೆಗಳಲ್ಲಿಯೂ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಕಾಂಗ್ರೆಸ್‌ ಎಂಬುದು ಇಲ್ಲಿನ ಮತದಾರರ ನಂಬಿಕೆ. ಹಾಗಾಗಿ, ಕಾಂಗ್ರೆಸ್‌ ಅಭ್ಯರ್ಥಿಗಳನ್ನೇ ಗೆಲ್ಲಿಸುತ್ತಾ ಬಂದಿರುವುದು ವಿಶೇಷ. ಅದರಲ್ಲೂ ಖಂಡ್ರೆ ಕುಟುಂಬದ ಪಾರುಪತ್ಯ ಕ್ಷೇತ್ರದ ಮೇಲೆ
ಬಿಗಿಯಾಗಿದೆ. ನಂತರದ ದಿನಗಳಲ್ಲಿ ರಾಮಜನ್ಮಭೂಮಿ,
ಅಡ್ವಾನಿಯವರ ರಾಮರಥಯಾತ್ರೆ ಮುಂತಾದ ವಿಷಯಗಳು ಭಾರತೀಯ ಜನತಾ ಪಕ್ಷದ ರಾಮಚಂದ್ರ ವೀರಪ್ಪನವರಿಗೆ ಸತತವಾಗಿ ಬಹುಮತ ನೀಡುತ್ತಾ ಬಂದಿದೆ. ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಬೀದರ ಲೋಕಸಭಾ ಕ್ಷೇತ್ರವನ್ನು ಪರಿಶಿಷ್ಟ ಜಾತಿಗೆ
ಮೀಸಲಿರಸಲಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ನರಸಿಂಗ್‌ ಹುಲ್ಲಾ ಅವರಿಗೆ ಬೆಂಬಲಿಸುತ್ತಾ ಬಂದಿದ್ದು, ನಂತರದ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿ ರಾಮಚಂದ್ರ ವೀರಪ್ಪನವರಿಗೆ ಅವರ ಕಾಲಾವಧಿಯ ವರೆಗೆ ಸತತವಾಗಿ ಬಹುಮತ ನೀಡುತ್ತಾ ಬಂದ ಕ್ಷೇತ್ರ ಭಾಲ್ಕಿ ಮತಕ್ಷೇತ್ರವಾಗಿದ್ದು ಇತಿಹಾಸ.

ಈ ಕ್ಷೇತ್ರವು ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿಗಿಂತ ರಾಷ್ಟ್ರೀಯ ನಾಯಕತ್ವದ ಮೇಲೆ ಮತದಾನ ಮಾಡುತ್ತಾ ಬಂದಿರುವುದು ಕ್ಷೇತ್ರದ ವಿಶೇಷತೆ. ಪ್ರತಿಸಲ ರಾಷ್ಟ್ರೀಯ ಹಿತಾಸಕ್ತಿ ಬಯಸುವ ಕ್ಷೇತ್ರದ ಮತದಾರರು, ಈ ಸಲ ಕಣದಲ್ಲಿ ಸ್ಥಳೀಯ ಅಭ್ಯರ್ಥಿ ಇರುವುದರಿಂದ ಲೋಕಸಭೆಯಲ್ಲಿ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾ, ಬೀದರ ಜಿಲ್ಲೆಯು ಭಾರತದಲ್ಲಿ
ಎಲ್ಲರಿಗೂ ಗೊತ್ತು ಮಾಡುವ ವ್ಯಕ್ತಿಗೆ ಮತ ನೀಡಬೇಕು ಎಂಬ ಚರ್ಚೆಗಳೂ ನಡೆಸಿದ್ದಾರೆ.

ಸದ್ಯ ಚುನಾವಣೆಯಲ್ಲಿ ಜನರು ಹೆಚ್ಚು ಆಸಕ್ತಿದಾಯಕರಾಗಿ ಕಂಡುಬರುತ್ತಿಲ್ಲ. ಕಳೆದ ವರ್ಷವೇ ವಿಧಾನಸಭಾ ಚುನಾವಣೆ ನಡೆದಿದ್ದು, ಮತ್ತೆ ಒಂದು ವರ್ಷದಲ್ಲಿಯೇ ಲೋಕಸಭಾ ಚುನಾವಣೆ ಎದುರಾಗಿದ್ದರಿಂದ ಜನರು ಚುನಾವಣೆಯ ಬಗ್ಗೆ
ಹೆಚ್ಚು ಚಿಂತಿಸುವ ಹಾಗೆ ಕಾಣುತ್ತಿಲ್ಲ.

ಕ್ಷೇತ್ರವು ಹಿಂದಿಗಿಂತಲೂ ಈಗ ಹೆಚ್ಚು ಅಭಿವೃದ್ಧಿಯಾಗುತ್ತಿದ್ದು, ಶಾಸಕ ಈಶ್ವರ ಖಂಡ್ರೆಯವರ ಅವ ಧಿಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಎನ್ನುತ್ತಾರೆ ಇಲ್ಲಿನ ಜನರು. ಇದೀಗ ಅವರೇ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಹಾಗಾಗಿ, ಕ್ಷೇತ್ರದ ಜನ ಹೆಚ್ಚು ಸಂಖ್ಯೆಯಲ್ಲಿ ಖಂಡ್ರೆ ಅವರಿಗೆ ಬೆಂಬಲಿಸಲಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರೆ.
ಹಾಗೇ, ಲೋಕಸಭಾ ಸದಸ್ಯ ಭಗವಂತ ಖೂಬಾ ಅವರೂ ಈ ಹಿಂದಿನ ಲೋಕಸಭಾ ಸದಸ್ಯರ ಅವಧಿಯಲ್ಲಿ ಆಗದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಮೋದಿ ನೇತೃತ್ವದ ಜನಪ್ರಿಯ ಯೋಜನೆಗಳನ್ನು ನೋಡಿ ಈ ಬಾರಿಯೂ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್‌ ದೊರಕಲಿದೆ ಎಂಬುದು ಬಿಜೆಪಿಯವರ ಅಭಿಪ್ರಾಯ.

Advertisement

ಕಳೆದ ಕೆಲವು ದಿನಗಳ ಹಿಂದೆ ನಡೆದ ಪುಲ್ವಾಮಾ ದಾಳಿ, ಸರ್ಜಿಕಲ್‌ ಸ್ಟ್ರೈಕ್‌ ವಿಷಯಗಳು ಹೆಚ್ಚು ಚರ್ಚೆಯಲ್ಲಿವೆ. ರಫೆಲ್‌ ಆರೋಪಗಳ ಬಗ್ಗೆ ಗ್ರಾಮೀಣ ಜನರಿಗೆ ಅರಿವಿಲ್ಲ. ಚುನಾವಣೆಯ ಪ್ರಚಾರಕ್ಕೆ ಅಭ್ಯರ್ಥಿಗಳ ಪತ್ನಿಯರು ರಸ್ತೆಗೆ ಇಳಿದಿದ್ದು, ಪತಿಯ ಪರ ಭರದ ಪ್ರಚಾರ ನಡೆಸುತ್ತಿದ್ದಾರೆ. ಮನೆ-ಮನೆಗಳಿಗೆ ತೆರಳಿ ಕೈ ಮುಗಿದು ಮತ ನೀಡುವಂತೆ ಕೋರುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next